Realtime blog statisticsweb statistics
udupibits.in
Breaking News
ಉಡುಪಿ: ಜೂನ್ 6 ಬೆಳಗ್ಗೆ 11ಕ್ಕೆ ಉಡುಪಿ ಡಿಸಿ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಮಾಹಿತಿ ಆಯೋಗದಿಂದ ಮಾಹಿತಿ ಹಕ್ಕು ಅರ್ಜಿಗಳ ವಿಚಾರಣೆ.

ಸ್ವಾತಂತ್ರ್ಯ ಹೋರಾಟಗಾರ, ಕಾರ್ಮಿಕ ನಾಯಕ, ಪತ್ರಕರ್ತ, ಸಮಾಜವಾದಿ ಡಾ//ಅಮ್ಮೆಂಬಳ ಬಾಳಪ್ಪರ 4ನೇ ಪುಣ್ಯಸ್ಮರಣೆ

ಬಿ.ಸಿ.ರೋಡ್: ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಕಾರ್ಮಿಕ ನಾಯಕ, ಪತ್ರಕರ್ತ, ಸಮಾಜವಾದಿ ಡಾ//ಅಮ್ಮೆಂಬಳ ಬಾಳಪ್ಪ ಅವರ ನಾಲ್ಕನೇ ಪುಣ್ಯಸ್ಮರಣೆ ಕಾರ್ಯಕ್ರಮವು ಮೇ 15ರಂದು ಬಂಟ್ವಾಳ ತಾಲೂಕು ಮಾರ್ನಬೈಲು ನಾಗಲಚ್ಚಿಲು ನವಜೀವನ ವ್ಯಾಯಾಮ ಶಾಲೆಯಲ್ಲಿ ಜರುಗಿತು.

‘ಸ್ವಾತಂತ್ರ್ಯಯೋಧ ಡಾ//ಅಮ್ಮೆಂಬಳ ಬಾಳಪ್ಪ ಸ್ಮಾರಕ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಅಮ್ಮೆಂಬಳ ಆನಂದ ಅವರು ಅಧ್ಯಕ್ಷತೆ ವಹಿಸಿದ್ದರು. ಬಾಳಪ್ಪರ ಹೋರಾಟದ ದಿನಗಳನ್ನು ಆನಂದರು ನೆನಪಿಸಿದರು. udupibits.in ಜಾಲತಾಣದ ಸಂಪಾದಕರಾದ ಶ್ರೀರಾಮ ದಿವಾಣ ಸಂಸ್ಮರಣಾ ಭಾಷಣ ಮಾಡಿದರು. ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್, ಮಾರ್ನಬೈಲು, ಅಮ್ಮೆಂಬಳ ಮತ್ತು ಮಂಗಳೂರಿನಲ್ಲಿ ಸ್ಥಳೀಯ ಆಡಳಿತ ಸಂಸ್ಥೆಗಳು ರಸ್ತೆ, ಸರ್ಕಲ್ ಇತ್ಯಾದಿಗಳಿಗೆ ಅಮ್ಮೆಂಬಳ ಬಾಳಪ್ಪರವರ ಹೆಸರು ಇರಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು, ಬಾಳಪ್ಪರ ಬದುಕು ಮತ್ತು ಹೋರಾಟದ ಸಾಧನೆ ಪಠ್ಯ ಪುಸ್ತಕದಲ್ಲೂ ಅಳವಡಿಕೆಯಾಗಬೇಕು ಎಂದು ಶ್ರೀರಾಮ ದಿವಾಣ ಆಶಯ ವ್ಯಕ್ತಪಡಿಸಿದರು.

ಕಾರ್ಮಿಕ ನಾಯಕರಾದ ವಿಠಲ ಬಂಗೇರ, ತನಿಯಪ್ಪ ಬಂಗೇರ, ಜನಾರ್ದನ ಬಂಗೇರ, ಬಾಳಪ್ಪ ಸ್ಮಾರಕ ಸೇವಾ ಪ್ರತಿಷ್ಠಾನದ ಪ್ರಮುಖರಾದ ಉಮೇಶ್ ಪಿ.ಕೆ ಮೇಲ್ಕಾರ್, ಕೆ.ದಯಾನಂದ್ ಬಿ.ಸಿ.ರೋಡ್ ಮೊದಲಾದವರು ಉಪಸ್ಥಿತರಿದ್ದರು. ಡಿ.ಎಂ.ಕುಲಾಲ್ ಕಾರ್ಯಕ್ರಮ ನಿರ್ವಹಿಸಿದರು.      

Leave a Reply

Your email address will not be published. Required fields are marked *