Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಮಂಗಳೂರು ನಗರದಲ್ಲಿ ಬೈಕ್ ರ್ಯಾಲಿ ನಿಷೇಧ: ಪೊಲೀಸ್ ಕಮಿಷನರ್ ವಿಪುಲ್ ಕುಮಾರ್ ರವರ ಶ್ಲಾಘನಾರ್ಹ ಕ್ರಮ

  • ಶ್ರೀರಾಮ ದಿವಾಣ

# ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಬೈಕ್ ರ್ಯಾಲಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ವಿಪುಲ್ ಕುಮಾರ್ ಪ್ರಕಟಿಸಿದ್ದಾರೆ. ಮೇ 18ರಂದು ಮಂಗಳೂರಿನಲ್ಲಿ ಕರೆದ ಮಾಧ್ಯಮಗೋಷ್ಟಿಯಲ್ಲಿ ಈ ಬಗ್ಗೆ ವಿವರ ನೀಡಿದ್ದು, ಭ್ರಷ್ಟ ಮತ್ತು ಬೇಜವಾಬ್ದಾರಿ ರಾಜಕಾರಣಿಗಳ ಹಾಗೂ ಪಕ್ಷ ಕಾರ್ಯಕರ್ತರ ಪೊಲೀಸ್ ಕಮಿಷನರ್ ಅವರ ನಿರ್ಧಾರಕ್ಕೆ ಸಮ್ಮತಿ ಇರಲಾರದು. ಆದರೆ, ಬೈಕ್ ರ್ಯಾಲಿಯ ನಿಷೇಧ ಕ್ರಮವನ್ನು ಸರ್ವರೂ ಶ್ಲಾಘಿಸಬೇಕಾಗಿದೆ.

ಬೈಕ್ ಸಹಿತ ಯಾವುದೇ ವಾಹನಗಳ ರ್ಯಾಲಿ ಒಪ್ಪತಕ್ಕ ಕಾರ್ಯಕ್ರಮ ಖಂಡಿತಾ ಅಲ್ಲ. ಯಾವುದಕ್ಕೂ ಬೈಕ್ ರ್ಯಾಲಿ ಅನಿವಾರ್ಯ ಅಲ್ಲವೇ ಅಲ್ಲ. ಬೈಕ್ ರ್ಯಾಲಿಯಿಂದಾಗಿ ದೇಶಕ್ಕಾಗಲೀ, ರಾಜ್ಯಕ್ಕಾಗಲೀ, ಜನರಿಗಾಗಲೀ ಯಾವುದೇ ರೀತಿಯ ಲಾಭವೂ ಇಲ್ಲ.

ಬೈಕ್ ರ್ಯಾಲಿಯಿಂದಾಗಿ ಇಂಧನ ನಷ್ಟ. ಇಂಧನ ನಷ್ಟದಿಂದಾಗಿ ದೇಶಕ್ಕೆ ನಷ್ಟ ಎಂದು ಬೇರೆ ಹೇಳುವ ಅಗತ್ಯ ಇಲ್ಲ. ಬೈಕ್ ರ್ಯಾಲಿಯಿಂದಾಗಿ ಶಬ್ದ ಮಾಲಿನ್ಯ. ಮಾತ್ರವಲ್ಲ, ಪರಿಸರಕ್ಕೂ ಹಾನಿ. ಹಿರಿಯ ನಾಗರಿಕರಿಗೂ ಕಿರಿಕಿರಿ, ಪಾದಚಾರಿಗಳಿಗೆ, ಇತರ ವಾಹನ ಸವಾರರಿಗೆ ಹಲವು ರೀತಿಯ ತೊಂದರೆ ತಪ್ಪಿದ್ದಲ್ಲ. ವಾಹನಗಳ ರ್ಯಾಲಿಯಿಂದಾಗಿ ಲಾಭವಾಗುವುದು, ಹೆಚ್ಚಾಗಿ ತಮ್ಮ ಶಕ್ತಿ ಪ್ರದರ್ಶನ ಮಾಡಬಯಸುವ ಪುಢಾರಿಗಳಿಗೆ ಹೊರತು ಬೇರೆ ಯಾರಿಗೂ ಅಲ್ಲ. ಬೈಕ್ ರ್ಯಾಲಿಯ ಹೆಸರಲ್ಲಿ ಭ್ರಷ್ಟಾಚಾರಕ್ಕೂ ಅವಕಾಶ ನೀಡಲಾಗುತ್ತಿದೆ ಎಂಬುದು ಈಗಾಗಲೇ ಬಹಿರಂಗಗೊಂಡ ವಿಷಯ.

ಇಂಧನ ಉಳಿಸಬೇಕು ಎಂಬ ಸಂದೇಶದೊಂದಿಗೆ ಕೇಂದ್ರ – ರಾಜ್ಯ ಸರಕಾರಗಳು ವರ್ಷಕ್ಕೊಮದು ಬಾರಿ ಇಂಧನ ಉಳಿಸಿ ಸಪ್ತಾಹ, ಇಂಧನ ಉಳಿಸುವ ದಿನವನ್ನು ಆಚರಿಸುತ್ತದೆ. ಸರಕಾರವನ್ನು ಮುನ್ನಡೆಸುವ ರಾಷ್ಟ್ರೀಯ ಪಕ್ಷಗಳೇ ಬೇರೆ ಸಂದರ್ಭದಲ್ಲಿ ಬೈಕ್ ರ್ಯಾಲಿ ನಡೆಸುವ ಮೂಲಕ ಇಂಧನ ದೇಶದಲ್ಲಿನ ಇಂಧನ ಕೊರತೆಗೆ ತಮ್ಮ ಕೊಡುಗೆ ಕೊಡುತ್ತಿರುವುದು ಮಾತ್ರ ವಿಷಾದನೀಯವೇ ಸರಿ.

ಈ ನಿಟ್ಟಿನಲ್ಲಿ, ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಬೈಕ್ ರ್ಯಾಲಿಯನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಸ ಹೊರಡಿಸಿದ ಕಮಿಷನರ್ ವಿಪುಲ್ ಕುಮಾರ್ ಅವರ ಕ್ರಮವನ್ನು ಎಲ್ಲರೂ ಸ್ವಾಗತಿಸಿ, ಅಭಿನಂದಿಸಲೇಬೇಕಾಗಿದೆ. ವಿಪುಲ್ ಕುಮಾರ್ ಅವರ ದಿಟ್ಟ ಕ್ರಮವನ್ನು ದೇಶದಾದ್ಯಂತದ ಎಲ್ಲಾ ನಗರಗಳ, ಜಿಲ್ಲೆಗಳ ಪೊಲೀಸ್ ಅಧಿಕಾರಿಗಳು ಅನುಸರಿಸಬೇಕಾಗಿದೆ. ಮುಖ್ಯವಾಗಿ, ಎಲ್ಲಾ ರಾಜ್ಯ ಸರಕಾರಗಳು ಮತ್ತು ಕೇಂದ್ರ ಸರಕಾರ ದೇಶದಾದ್ಯಂತ ಬೈಕ್ ಸಹಿತ ಎಲ್ಲಾ ವಿಧದ ವಾಹನಗಳ ರ್ಯಾಲಿಗಳನ್ನೂ ಸಂಪೂರ್ಣವಾಗಿ ನಿಷೇಧಿಸುವ, ನಿಷೇಧ ಆದೇಶವನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸುವಂತಾಗಬೇಕು.

Leave a Reply

Your email address will not be published. Required fields are marked *