Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಚೆಕ್ ಪೋಸ್ಟ್ ನಲ್ಲಿ ಪೊಲೀಸನಿಂದ ದಲಿತ ದೌರ್ಜನ್ಯ: ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದಿಂದ ಪ್ರಕರಣ ದಾಖಲು

ಉಡುಪಿ: ಕಾರ್ಕಳ ಸಬ್ ಡಿವಿಷನಿನ ಬೆಳ್ಳೆ ಗ್ರಾಮ ನೆಲ್ಲಿಕಟ್ಟೆ ಚುನಾವಣಾ ಚೆಕ್ ಪೋಸ್ಟ್ ನಲ್ಲಿ ಶಿರ್ವ ಪೊಲೀಸ್ ಠಾಣೆಯ ಕಾನ್ ಸ್ಟೇಬಲ್ ಅಂದಪ್ಪ ಹಾಗೂ ಬಿಎಸ್ಎಫ್ ಸಿಬ್ಬಂದಿಗಳು ನಡೆಸಿದ ದಲಿತ ದೌರ್ಜನ್ಯದ ಬಗ್ಗೆ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೂಡುಬೆಳ್ಳೆ ಕಡೆಗೆ ಸಂಚರಿಸುತ್ತಿದ್ದ ದಲಿತ ಯುವಕನೋರ್ವ ತನ್ನ ದ್ವಿಚಕ್ರ ವಾಹನದಲ್ಲಿ ಇಬ್ಬರು ಸಹ ಸವಾರರನ್ನು ಕುಳ್ಳಿರಿಸಿಕೊಂಡು ನೆಲ್ಲಿಕಟ್ಟೆ ಚೆಕ್ ಪೋಸ್ಟ್ ಮೂಲಕ ಬಂದಾಗ ತಡೆದು ನಿಲ್ಲಿಸಿದ ಪಿಸಿ ಅಂದಪ್ಪ ಹಾಗೂ ಇತರರು, ದ್ವಿಚಕ್ರ ವಾಹನ ಸವಾರ ಯುವಕನಿಗೆ ಗಂಭೀರವಾಗಿ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ಬೈಯ್ದು, ನಂತರ ಪಕ್ಕದ ಬಾಡಿಗೆ ಮನೆಯವರಿಂದ ಹಿಡಿಸೂಡಿ ತರಿಸಿ, ಬೆದರಿಸಿ ಚೆಕ್ ಪೋಸ್ಟ್ ನ ಕಸ ಗುಡಿಸುವಂತೆ ಮಾಡಿ ದೌರ್ಜನ್ಯ ನಡೆಸಿದ್ದರು.

ಪಿಸಿ ಅಂದಪ್ಪ ಹಾಗೂ ಬಿಎಸ್ಎಫ್ ಸಿಬ್ಬಂದಿಗಳು ನಡೆಸಿದ ಹಲ್ಲೆ ಎಷ್ಟು ಗಂಭೀರವಾಗಿತ್ತೆಂದರೆ, ದಲಿತ ಯುವಕನಿಗೆ ಬಳಿಕ ಸರಿಯಾಗಿ ನಡೆಯಲು ಕೂಡಾ ಸಾಧ್ಯವಾಗದಷ್ಟು ಗಂಭೀರವಾಗಿತ್ತು. ಘಟನೆ ಅಪರಾಹ್ನ ಹೊತ್ತು ನಡೆದಿತ್ತು. ಚೆಕ್ ಪೋಸ್ಟ್ ನಲ್ಲಿ ಚುನಾವಣಾ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ತೆಂಕನಿಡಿಯೂರು ಗ್ರಾಮ ಪಂಚಾಯತ್ ಕಾರ್ಯದರ್ಶಿ ಕೂಡಾ ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದರು.

ಸ್ಥಳೀಯರು ಘಟನೆಯನ್ನು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಚಿತ್ರೀಕರಿಸಿಕೊಂಡಿದ್ದು, udupibitfs.in ಈ ಬಗ್ಗೆ ಸಚಿತ್ರ ವರದಿ ಮಾಡಿತ್ತು. ವರದಿಯನ್ನು ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗಕ್ಕೆ ಕಳುಹಿಸಿಕೊಡಲಾಗಿತ್ತು. ಈ ವರದಿ ಆಧಾರದಲ್ಲಿ ಇದೀಗ ಆಯೋಗ ಪ್ರಕರಣ ದಾಖಲಿಸಿಕೊಂಡಿದೆ.

ಶಿರ್ವ ಠಾಣೆಯ ಪೊಲೀಸ್ ಕಾನ್ ಸ್ಟೇಬಲ್ ಅಂದಪ್ಪ ಅವರನ್ನು ನೆಲ್ಲಿಕಟ್ಟೆ ಚೆಕ್ ಪೋಸ್ಟ್ ಗೆ ಕರ್ತವ್ಯಕ್ಕೆ ನಿಯೋಜಿಸಿದ ಆರಂಭದಿಂದಲೂ ಇವರ ವಿರುದ್ಧ ಹಲವು ದೂರುಗಳು ಕೇಳಿಬರುತ್ತಿದ್ದವು. ವಾಹನ ಸವಾರರ ಜೊತೆ ದರ್ಪ ದುರಹಂಕಾರದ ವರ್ತನೆ, ಹಣ ವಸೂಲಿ, ಹಣ್ಣು ಹಂಪಲು ಇತರ ವಸ್ತುಗಳ ವಸೂಲಿ ಇತ್ಯಾದಿ ಅಕ್ರಮದಲ್ಲಿ ಅಂದಪ್ಪ ನಿರತರಾಗಿದ್ದಾರೆ ಎಂಬ ದೂರುಗಳು ಸಾಮಾನ್ಯವಾಗಿದ್ದವು. ಶಿರ್ವ ಸಬ್ ಇನ್ಸ್ ಪೆಕ್ಟರ್ ಅಬ್ದುಲ್ ಖಾದರ್ ಅವರಿಗೆ ಅಂದಪ್ಪರವರ ಮೇಲಿನ ದೂರುಗಳ ಬಗ್ಗೆ ಗೊತ್ತಿತ್ತಾದರೂ, ಅವರ ವಿರುದ್ಧ ಕನಿಷ್ಟ ಶಿಸ್ತು ಕ್ರಮವನ್ನೂ ಕೈಗೊಳ್ಳದೆ ರಕ್ಷಣೆ ಮಾಡಿಕೊಂಡು ಬಂದಿದ್ದರು. ತಾನೇನು ಮಾಡಿದರೂ ತನಗೆ ತನ್ನ ಮೇಲಾಧಿಕಾರಿಗಳ ರಕ್ಷಣೆ ಇರುತ್ತೆ, ತನಗೇನೂ ತೊಂದರೆಯಿಲ್ಲ ಎಂದು ಭಾವಿಸಿದ್ದೇ ಅಂದಪ್ಪ ಧೈರ್ಯದಿಂದ ದಲಿತ ದೌರ್ಜನ್ಯವನ್ನೂ ನಡೆಸಲು ಕಾರಣವಾಯಿತೆಂದು ಸಾರ್ವಜನಿಕರು ಹೇಳುತ್ತಿದ್ದಾರೆ.

ಘಟನೆ ಬಗ್ಗೆ ಜಿಲ್ಲಾಧಿಕಾರಿ ಪ್ರಯಾಂಕ ಮೇರಿ ಫ್ರಾನ್ಸಿಸ್ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಲಕ್ಷ್ಮಣ್ ನಿಂಬರ್ಗಿ ಅವರ ಗಮನಕ್ಕೆ ತರಲಾಗಿದೆಯಾದರೂ, ಇವರು ಅಂದಪ್ಪ ವಿರುದ್ಧ ಸೂಕ್ತ ಕ್ರಮ ತೆಗೆದುಕೊಂಡ ಬಗ್ಗೆ ಮಾತ್ರ ಯಾವುದೇ ಮಾಹಿತಿ ಇಲ್ಲ.

Leave a Reply

Your email address will not be published. Required fields are marked *