Realtime blog statisticsweb statistics
udupibits.in
Breaking News
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ- ಶಂಕಿತ ಹಂತಕ ಬಿಜಾಪುರ ಸಿಂಧಗಿಯ ಪರಶುರಾಮ ವಾಗ್ಮೊರೆ ಬಂಧನ.

ಶಿರ್ವ ಎಎಸ್ಐ ರಾಮಚಂದ್ರ ಭಟ್ ಅವರಿಗೆ ಪಿಎಸ್ಐ ಆಗಿ ಭಡ್ತಿ, ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಗೆ ವರ್ಗಾವಣೆ

ಉಡುಪಿ: ಶಿರ್ವ ಪೊಲೀಸ್ ಠಾಣೆಯಲ್ಲಿ ಎಎಸ್ಐ ಆಗಿರುವ ರಾಮಚಂದ್ರ ಭಟ್ ಅವರು ಪಿಎಸ್ಐ ಆಗಿ ಭಡ್ತಿ ಪಡೆದು, ಉಡುಪಿಯ ಸೆನ್ ಅಪರಾಧ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದು, ಈ ಹಿನ್ನೆಲೆಯಲ್ಲಿ ಶಿರ್ವ ಪೊಲಿಸ್ ಠಾಣೆಯಲ್ಲಿ ಸಹೋದ್ಯೋಗಿಗಳು ರಾಮಚಂದ್ರ ಭಟ್ ಅವರನ್ನು ಮೇ 30ರಂದು ಸನ್ಮಾನಿಸಿ ಅಭಿನಂದಿಸಿ ಬೀಳ್ಕೊಡಲಾಯಿತು.

ಮೂಲತಹ ಗಡಿನಾಡು ಕಾಸರಗೋಡು ಜಿಲ್ಲೆ ಕುಂಬಳೆ ಬಳಿಯ ಎಡನಾಡು ಗ್ರಾಮದವರಾದ ರಾಮಚಂದ್ರ ಭಟ್ ಅವರು, ಹಿರಿಯಡ್ಕ, ಉಡುಪಿಯ ಕರ್ನಾಟಕ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರ ಕಚೇರಿ, ಶಂಕರ ನಾರಾಯಣ, ಶಿರ್ವ ಮೊದಲಾದ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ಸಲ್ಲಿಸಿದ್ದರು.

ಪ್ರಾಮಾಣಿಕ ಮತ್ತು ದಕ್ಷ ಪೊಲೀಸ್ ಅಧಿಕಾರಿಯಾಗಿರುವ ರಾಮಚಂದ್ರ ಭಟ್ ಅವರನ್ನು ಶಿರ್ವ ಪೊಲೀಸ್ ಠಾಣೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಹೋದ್ಯೋಗಿಗಳು ಪ್ರೀತಿ ಮತ್ತು ಆತ್ಮೀಯತೆಯೊಂದಿಗೆ ಸನ್ಮಾನಿಸಿ ಅಭಿನಂದಿಸಿ ಬೀಳ್ಕೊಟ್ಟರು. ಪೊಲೀಸ್ ಉಪ ನಿರೀಕ್ಷಕರು, ಎಎಸ್ಐ ಬೋಜ, ಎಚ್ ಸಿಗಳಾದ ದಾಮೋದರ, ನಾರಾಯಣ, ದಯಾನಂದ, ಪಿಸಿಗಳಾದ ಕಾರ್ತಿಕ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *