Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಜೂನ್ 2: ಉಡುಪಿಯಲ್ಲಿ ರಾಜಗೋಪಾಲ್ ಹಾಗೂ ಶ್ರೀರಾಮ ದಿವಾಣರ ನೂತನ ಕೃತಿಗಳ ಬಿಡುಗಡೆ

ಉಡುಪಿ: ಮೈಸೂರಿನ ಅಭಿನವ ಪ್ರಕಾಶನ ಪ್ರಕಟಿಸಿದ ಮೂರು ನೂತನ ಕೃತಿಗಳ ಬಿಡುಗಡೆ ಸಮಾರಂಭ, ಜೂನ್ 2 ಶನಿವಾರ ಸಂಜೆ 5 ಗಂಟೆಗೆ ಉಡುಪಿ ಮಾರುತಿ ವೀಥಿಕಾ ಬಳಿಯ ಟಿ.ಎ.ಪೈ ಹಿಂದಿ ಭವನದಲ್ಲಿ ಜರುಗಲಿದೆ.

www.udupibits.in ಜಾಲತಾಣ ಸಂಸ್ಥೆಯ ಆಶ್ರಯದಲ್ಲಿ ನಡೆಯಲಿರುವ ಸಮಾರಂಭದಲ್ಲಿ, ಹಿರಿಯ ಬರಹಗಾರರಾದ ಎಂ.ರಾಜಗೋಪಾಲ್ ಅವರ ‘ಗಾಂಧೀಜಿ ರೂಪಕಗಳು’ ಹಾಗೂ ತಾವೋ- ಪರತತ್ವ ಅನುಸಂಧಾನ’ ಹಾಗೂ udupibits.in ಸಂಪಾದಕ ಶ್ರೀರಾಮ ದಿವಾಣ ಅವರ ‘ವ್ಯವಸ್ಥೆಯೆಂಬ ಅವ್ಯವಸ್ಥೆ’ ಎಂಬ ಕೃತಿಗಳು ಬಿಡುಗಡೆಯಾಗಲಿದೆ.

ಖ್ಯಾತ ಬರಹಗಾರರಾದ ಅರವಿಂದ ಚೊಕ್ಕಾಡಿ ನೂತನ ಕೃತಿಗಳನ್ನು ಬಿಡುಗಡೆ ಮಾಡಲಿದ್ದಾರೆ. ಖ್ಯಾತ ಮನೋವೈದ್ಯರಾದ ಡಾ.ಪಿ.ವಿ.ಭಂಡಾರಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

Leave a Reply

Your email address will not be published. Required fields are marked *