Realtime blog statisticsweb statistics
udupibits.in
Breaking News
ಉಡುಪಿ: ಅಂಚೆ ಕಚೇರಿಗಳಲ್ಲಿ ಇಂಡಿಯನ್ ಪೋಸ್ಟಲ್ ಆರ್ಡರ್ ಅಲಭ್ಯತೆ- ಸಮಸ್ಯೆ ಪರಿಹರಿಸಲು ಮಾಹಿತಿ ಹಕ್ಕು ಕಾರ್ಯಕರ್ತರಿಂದ ಪ್ರಧಾನಿಗೆ ಪತ್ರ

ಮಾಜಿ ಸಿಎಂ ಸಿದ್ದರಾಮಯ್ಯಗೆ ಮತ್ತೆ ಸಂಕಟ: ಹ್ಯೂಬ್ಲೋಟ್ ವಾಚ್ ಪ್ರಕರಣದ ಪಿಐಎಲ್ ಜೂನ್ 11ಕ್ಕೆ ಹೈಕೋರ್ಟಲ್ಲಿ ವಿಚಾರಣೆ

ಉಡುಪಿ: ಮುಖ್ಯಮಂತ್ರಿಯಾಗಿದ್ದಾಗ ಬೆಲೆಬಾಳುವ ಹ್ಯೂಬ್ಲೋಟ್ ವಾಚ್ ನ್ನು ವ್ಯಕ್ತಿಯೊಬ್ಬರಿಂದ ಕೊಡುಗೆಯಾಗಿ ಪಡೆದುಕೊಂಡ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಅವರು ರಾಜ್ಯ ಹೈಕೋರ್ಟ್ ನಲ್ಲಿ ದಾಖಲಿಸಿದ ಸಾರ್ವಜನಿಕ ಹಿತಾಸಕ್ತಿ ದಾವೆ (ಪಿಐಎಲ್)ಯು ಜೂನ್ 11ರಂದು ಹೈಕೋರ್ಟಿನ ನ್ಯಾಯಾಂಗಣ-1ರಲ್ಲಿ 23ನೇ ಪ್ರಕರಣವಾಗಿ ವಿಚಾರಣೆಗೆ ಬರಲಿದೆ.

ಸಿದ್ದರಾಮಯ್ಯನವರು ಭಾರೀ ಬೆಲೆಬಾಳುವ ಹ್ಯೂಬ್ಲೋಟ್ ವಾಚ್ ನ್ನು ಮುಖ್ಯಮಂತ್ರಿಯಾಗಿದ್ದಾಗ ವಯುಕ್ತಿಕ ನೆಲೆಯಲ್ಲಿ ವ್ಯಕ್ತಿಯೊಬ್ಬರಿಂದ ಕೊಡುಗೆಯಾಗಿ ಪಡೆದುಕೊಂಡ ವಿಚಾರ ಬಹಿರಂಗಕ್ಕೆ ಬಂದ ಪರಿಣಾಮವಾಗಿ ಬಳಿಕ ಸದನದ ಒಳಗೆ ಮತ್ತು ಹೊರಗಡೆ ದೊಡ್ಡ ವಿವಾದವಾಗಿ ಚರ್ಚೆಗೆ ಕಾರಣವಾಗಿತ್ತು. ನಂತರ ಅನಿವಾರ್ಯವಾಗಿ ಸಿದ್ದರಾಮಯ್ಯನವರು ಬೀಸುವ ದೊಣ್ಣೆಯಿಂದ ಪಾರಾಗುವ ಸಲುವಾಗಿ ಕೊಡುಗೆಯಾಗಿ ಪಡೆದುಕೊಂಡ ವಿವಾದಾಸ್ಪದ ವಾಚ್ ನ್ನು ಸರಕಾರದ ಖಜಾನೆಗೆ ಹಸ್ತಾಂತರಿಸಿದ್ದರು. ಬಳಿಕ ವಿವಾದ ತಣ್ಣಗಾಗಿತ್ತು.

ಈ ಹ್ಯೂಬ್ಲೋಟ್ ವಾಚ್ ನ್ನು ತನಗೆ ಡಾ. ಗಿರೀಶಚಂದ್ರ ವರ್ಮ ಎಂಬ ಸ್ನೇಹಿತರು ನೀಡಿದ್ದುದಾಗಿ ಸಿದ್ದರಾಮಯ್ಯನವರು ಅಂದು ಅಧಿಕೃತವಾಗಿ ತಿಳಿಸಿದ್ದರು. ಗಿರೀಶಚಂದ್ರ ವರ್ಮ ಅವರು ಅನಿವಾಸಿ ಭಾರತೀಯ ಉದ್ಯಮಿ ಬಿ.ಆರ್.ಶೆಟ್ಟಿಯವರಿಗೆ ಸೇರಿದ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರು ಎಂಬುದು ಬಳಿಕ ಬಹಿರಂಗಕ್ಕೆ ಬಂದಿತ್ತು.

ಇದೇ, ಬಿ.ಆರ್.ಶೆಟ್ಟಿಯವರಿಗೆ ಸಿದ್ದರಾಮಯ್ಯನವರು ಉಡುಪಿಯಲ್ಲಿನ ‘’ಹಾಜಿ ಅಬ್ದುಲ್ಲಾ ಸರಕಾರಿ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆ’’ಗಳನ್ನು ಆಸ್ಪತ್ರೆಯ ಬಹುಕೋಟಿ ಮೊತ್ತದ ಜಮೀನು ಸಹಿತ ನೀಡಿರುವುದರಿಂದ ಹ್ಯೂಬ್ಲೋಟ್ ವಾಚ್ ಮತ್ತು ಜಮೀನು ಸಹಿತ ಆಸ್ಪತ್ರೆ ಹಸ್ತಾಂತರ ಪ್ರಕ್ರಿಯೆ ಇವೆರಡರ ನಡುವೆ ಒಂದಕ್ಕೊಂದು ಸಂಬಂಧವಿರುವ ಬಲವಾದ ಶಂಕೆ ವ್ಯಕ್ತವಾಗಿತ್ತು.

Leave a Reply

Your email address will not be published. Required fields are marked *