Realtime blog statisticsweb statistics
udupibits.in
Breaking News
ಉಡುಪಿ: ನೌಕರರಿಗೆ ಕಿರುಕುಳ ಆರೋಪ- ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಮಹೇಶ್ ಐತಾಳ್ ಅಮಾನತಿಗೆ ಶ್ರೀರಾಮ ದಿವಾಣ ಒತ್ತಾಯ

ಕಾಪು ತಾಲೂಕಿನ ಪಹಣಿ ವಿತರಣೆ ಸ್ಥಗಿತ: ನೂತನ ತಾಲೂಕಿನ ಜನರಿಗೆ ಸಂಕಟ ತಂದಿಟ್ಟು ಮಾಜಿಯಾದ ಸೊರಕೆ !

ಉಡುಪಿ: ಕಾಪು ವಿಧಾನಸಭಾ ಕ್ಷೇತ್ರದ ಅಥವಾ ಕಾಪು ತಾಲೂಕಿನ ಜನರು ಅದೇನು ತಪ್ಪು ಮಾಡಿದ್ದಾರೆಂದು ಗೊತ್ತಿಲ್ಲ. ಆದರೆ, ಕಾಪು ತಾಲೂಕಿನ ಜನರು ಮಾತ್ರ ಇದೀಗ ವಿನಾಕಾರಣ ಶಿಕ್ಷೆ ಅನುಭವಿಸುತ್ತಿದ್ದಾರೆ. ಕಾಪು ವಿಧಾನಸಭಾ ಕ್ಷೇತ್ರವನ್ನು ತಾಲೂಕನ್ನಾಗಿ ಮಾಡಿದ ಕಾಂಗ್ರೆಸ್ ನಾಯಕ, ಮಾಜಿ ಶಾಸಕ ವಿನಯ ಕುಮಾರ್ ಸೊರಕೆಯವರ ಚಪಲಕ್ಕೆ, ತೀಟೆಗೆ ಜನರು ವೃಥಾ ಪರದಾಡುವ ಪರಿಸ್ಥಿತಿ ಇದೀಗ ಸೃಷ್ಟಿಯಾಗಿದೆ.

ಕಾಪು ತಾಲೂಕಿನ ಜನರಿಗೆ ಈಗ ಪಹಣಿ ವಿತರಣೆಯಾಗುತ್ತಿಲ್ಲ. ಕಾಪು ತಾಲೂಕಿನ ಜನರು ತಮ್ಮ ಪಹಣಿ ಪತ್ರಗಳನ್ನು ಪಡೆದುಕೊಳ್ಳಲು ಉಡುಪಿ ತಾಲೂಕಿನ ಪಹಣಿ ವಿತರಣಾ ಕೇಂದ್ರದಲ್ಲಿಯೇ ವ್ಯವಸ್ಥೆ ಮಾಡಲಾಗಿತ್ತು. ಹೀಗೆ ವ್ಯವಸ್ಥೆ ಮಾತ್ರ ಮಾಡಲಾಗಿತ್ತು. ಪಹಣಿ ವಿತರಿಸಲು ಆರಂಭಿಸಿದ ಕೆಲವೇ ಕೆಲವು ದಿನಗಳಲ್ಲಿ ಕಾಪು ತಾಲೂಕಿನ ಪಹಣಿ ವಿತರಣೆಯನ್ನು ಸ್ಥಗಿತಗೊಳಿಸಲಾಗಿದೆ. ಪರಿಣಾಮವಾಗಿ, ಜನರು ಮಾಜಿ ಶಾಸಕ ವಿನಯ ಕುಮಾರ್ ಸೊರಕೆಯವರಿಗೆ ಶಾಪ ಹಾಕುತ್ತಾ ಉಡುಪಿ ತಾಲೂಕು ಪಹಣಿ ವಿತರಣಾ ಕೇಂದ್ರದಿಂದ ಮನೆಗೆ ಮರಳುತ್ತಿರುವ ದೃಶ್ಯ ಕಂಡುಬರುತ್ತಿದೆ.

ಜಮೀನಿಗೆ ಸಂಬಂಧಿಸಿದ ಯಾವುದೇ ಕೆಲಸಗಳಿಗೂ ಪಹಣಿ ಅತೀ ಅಗತ್ಯವಾಗಿದೆ. ಕಾಪು ತಾಲೂಕಿನ ಪಹಣಿಗಳನ್ನು ಅಧಿಕೃತವಾಗಿಯೇ ಉಡುಪಿ ತಾಲೂಕು ಪಹಣಿ ವಿತರಣಾ ಕೇಂದ್ರದಲ್ಲಿ ವಿತರಿಸಲು ಅಧಿಕೃತವಾಗಿಯೇ ನಿರ್ಧರಿಸಲಾಗಿದೆ. ಕಾಪು ವಿಧಾನಸಭಾ ಕ್ಷೇತ್ರವನ್ನು ತಾಲೂಕು ಎಂದು ಅಧಿಕೃತವಾಗಿಯೇ ಘೋಷಿಸಲಾಗಿದೆಯಾದರೂ, ಒಂದು ತಾಲೂಕಿಗೆ ಬೇಕಾದ ಯಾವುದೇ ಒಂದು ಮೂಲಭೂತ ವ್ಯವಸ್ಥೆಯನ್ನೂ ಮಾಡದೆ ನೂತನ ತಾಲೂಕನ್ನು ಘೋಷಿಸಿರುವುದರಿಂದ, ಪ್ರಸ್ತುತ ಕಾಪು ತಾಲೂಕಿನ ಜನರು ಪರದಾಡುವಂತಾಗಿದೆ. ವಿನಯ ಕುಮಾರ್ ಸೊರಕೆ ಈಗ ಮಾಜಿಯಾಗಿರುವುದರಿಂದ ಕ್ಷೇತ್ರದಿಂದ ಮಾಯವಾಗಿದ್ದಾರೆ.

”ಸರ್ವರ್ ಇಲ್ಲ” ಎಂಬ ನೆಪವನ್ನು ಮುಂದಿಟ್ಟುಕೊಂಡು ಕಾಪು ತಾಲೂಕಿನ ಪಹಣಿಗಳನ್ನು ವಿತರಿಸಲಾಗುತ್ತಿಲ್ಲ. ಉಡುಪಿ ತಾಲೂಕಿನ ಪಹಣಿ ವಿತರಣೆಯಲ್ಲಿ ಮಾತ್ರ ಯಾವುದೇ ತೊಂದರೆಯೂ ಇಲ್ಲ.

ಕಂದಾಯ ಇಲಾಖೆಯ ಅಧಿಕಾರಿಗಳಿಗೆ, ಸಚಿವರಿಗೆ, ಜನಪ್ರತಿನಿಧಿಗಳಿಗೆ ಜನರ ಬಗ್ಗೆ ಎಷ್ಟು ನಿಸ್ಸಾರ ಇದೆಯೆಂದರೆ, ಉಡುಪಿಯ ಪಹಣಿ ವಿತರಣಾ ಕೇಂದ್ರದಲ್ಲಿ ಜನರು ಸರತಿ ಸಾಲಲ್ಲಿ ನಿಲ್ಲಬೇಕು, ಮಳೆ ನೀರಿಗೆ ಮೈಒಡ್ಡಿಕೊಂಡೇ. ಮೇಲಿನಿಂದ ಸೋರುತ್ತಿದ್ದರೂ, ಪಹಣಿಗಾಗಿ ಸರತಿ ಸಾಲಲ್ಲಿ ನಿಂತುಕೊಂಡು ಕಾಯುವುದು ಅನಿವಾರ್ಯ. ಮತದಾನದ ಮೊದಲು ಮತದಾರ ಮಹಾನ್ ಪ್ರಜೆ, ಈಗ ಕಾಲಕಸ.

ಕಾಪು ವಿಧಾನಸಭಾ ಕ್ಷೇತ್ರವನ್ನು ತಾಲೂಕು ಆಗಿ ಘೋಷಣೆ ಮಾಡುವ ವರೆಗೆ ಇಂಥ ಸಮಸ್ಯೆ ಇರಲಿಲ್ಲ. ಕಾಪು ತಾಲೂಕಿನ ಜನರಿಗೆ ಮಾತ್ರ ಪಹಣಿ ವಿತರಣೆಯನ್ನು ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಹೇಳುವುದಾದರೆ, ಕಾಪು ಕ್ಷೇತ್ರದ ಜನರಿಗೆ, ಕಾಪು ತಾಲೂಕು ಆಗುವ ಮೊದಲು ಇಲ್ಲದ ಸಮಸ್ಯೆಗಳು ಪ್ರಸ್ತುತ ಒಂದೊಂದಾಗಿಯೇ ಉದ್ಭವಿಸತೊಡಗಿದೆ.

Leave a Reply

Your email address will not be published. Required fields are marked *