Realtime blog statisticsweb statistics
udupibits.in
Breaking News
ಉಡುಪಿ: ಶಿರ್ವ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಆಗಿ ನರಸಿಂಹ ಶೆಟ್ಟಿ ಅಧಿಕಾರ ಸ್ವೀಕಾರ.

ಮರು ನಿಯುಕ್ತಿ ನಿರೀಕ್ಷೆಯಲ್ಲಿ ಪಿಎಸ್‍ಐಗಳು !

ಉಡುಪಿ: ಚುನಾವಣೆ ಹಿನ್ನೆಲೆಯಲ್ಲಿ ವರ್ಗಾವಣೆಗೊಂಡಿದ್ದ ಪಿಎಸ್‍ಐಗಳಿಗೆ ಮಾತ್ರ ಚುನಾವಣಾ ಪ್ರಕ್ರಿಯೆ ಮುಗಿದು ಹೊಸ ಸರಕಾರ ರಚನೆಯಾಗಿ ತಿಂಗಳು ಕಳೆಯುತ್ತಿದ್ದರೂ ಮರು ನಿಯುಕ್ತಿ ಭಾಗ್ಯ ದೊರೆತಿಲ್ಲ.  ಚುನಾವಣೆ ಹಿನ್ನೆಲೆಯಲ್ಲಿ ವರ್ಗಾವಣೆ ಹೊಂದಿದ್ದ ಹೆಚ್ಚುವರಿ ಎಸ್‍ಪಿ, ಡಿವೈಎಸ್ಪಿ ಮತ್ತು ಇನ್‍ಸ್ಪೆಕ್ಟರ್ ಗಳನ್ನು ಮರು ನಿಯುಕ್ತಿಗೊಳಿಸಲಾಗಿದೆಯಾದರೂ ಪಿಎಸ್‍ಐಗಳು ಮಾತ್ರ ಇನ್ನೂ ವರ್ಗಾವಣೆ ನಿರೀಕ್ಷೆಯಲ್ಲೇ ಕಾಲ ಕಳೆಯುತ್ತಿದ್ದಾರೆ.

ಐಜಿ ಕರ್ತವ್ಯ

ಚುನಾವಣೆ ಹಿನ್ನೆಲೆಯಲ್ಲಿ ವರ್ಗಾವಣೆಗೊಂಡ ಪಿಎಸ್‍ಐಗಳನ್ನು ಮರುನಿಯುಕ್ತಿಗೊಳಿಸುವಂತೆ ಚುನಾವಣಾ ಆಯೋಗ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಡಿಜಿಪಿ ಈಗಾಗಲೇ ಆದೇಶ ಮಾಡಿದ್ದಾರೆ. ಇದೇ ವೇಳೆ ಮೇಲಧಿಕಾರಿಗಳ ಮರುನಿಯುಕ್ತಿಗೂ ಆದೇಶ ಹೊರಡಿಸಲಾಗಿದ್ದು ಅವರು ಮರುನಿಯುಕ್ತಿಗೊಂಡಿದ್ದಾರೆ. ಚುನಾವಣೆ ಸಂಬಂಧಿ ಬೇರೆಡೆ ನಿಯುಕ್ತಿಗೊಂಡಿದ್ದ ಕಂದಾಯ ಇಲಾಖೆ ಅಧಿಕಾರಿಗಳನ್ನೂ ಮರುನಿಯುಕ್ತಿಗೊಳಿಸುವ ಬಗ್ಗೆ ಆದೇಶ  ಆಗಿದೆ.

ಆದರೆ ಪಿಎಸ್‍ಐಗಳನ್ನು ಮಾತ್ರ ಮರುನಿಯುಕ್ತಿಗೊಳಿಸುವ ಬಗ್ಗೆ ಐಜಿಪಿಯವರು ಈ ಬಗ್ಗೆ ಆದೇಶ ಹೊರಡಿಸಿಲ್ಲ. ತಮ್ಮನ್ನು ನೇಮಕ ಮಾಡಿರುವುದು ತಾತ್ಕಾಲಿಕವಾಗಿ ಎಂಬ ಮನಸ್ಥಿತಿಯಲ್ಲೇ ಪಿಎಸ್‍ಐಗಳು ಕರ್ತವ್ಯ ನಿರ್ವಹಿಸುವಂತಾಗಿದ್ದು ಐಜಿಪಿಯವರು ಈ ಬಗ್ಗೆ ಶೀಘ್ರ ಕ್ರಮ ಜರಗಿಸುವ ಅಗತ್ಯವಿದೆ.

Leave a Reply

Your email address will not be published. Required fields are marked *