Realtime blog statisticsweb statistics
udupibits.in
Breaking News
# ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಮಲಾದೇವಿ ಚಟ್ಟೋಪಾಧ್ಯಾಯ ಹೆಸರಿಡಲು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಿವೃತ್ತ ಪತ್ರಕರ್ತ ಅಮ್ಮೆಂಬಳ ಆನಂದರಿಂದ ಸಿಎಂ ಕುಮಾರಸ್ವಾಮೀಗೆ ಮನವಿ.

ಹಿರಿಯ ಕಾಂಗ್ರೆಸ್ ಕಾರ್ಯಕರ್ತ ಕಬೆಕೋಡು ಹರಿಹರ ಭಟ್ ನಿಧನ

ಮಂಜೇಶ್ವರ: ಕುಂಬಳೆ ಗ್ರಾಮದ ನಾರಾಯಣಮಂಗಲ ನಿವಾಸಿ ಕೆ.ವಿ.ಹರಿಹರ ಭಟ್ ಕಬೆಕೋಡು (80) ಜೂನ್ 27ರಂದು ನಿಧನರಾದರು.

ಸ್ಥಳೀಯವಾಗಿ ಜನಾನುರಾಗಿಯಾಗಿದ್ದ ಹರಿಹರ ಭಟ್ ಅವರು ಹಿರಿಯ ಕಾಂಗ್ರೆಸ್ ಕಾರ್ಯಕರ್ತರಾಗಿದ್ದರು. ದಿವಂಗತರು ಪತ್ನಿ ಸುಮತಿ, ಬದಿಯಡ್ಕ ನವಜೀವನ ಹೈಸ್ಕೂಲಿನ ವ್ಯವಸ್ಥಾಪಕರಾದ ಪುತ್ರ ವೆಂಕಟರಾಜ ಕಬೆಕೋಡು ಹಾಗೂ ಸಹೋದರ ಖ್ಯಾತ ವೈದ್ಯ ಡಾ. ಸರ್ವೇಶ್ವರ ಭಟ್ ಸಹಿತ ಅಪಾರ ಬಂಧು ಬಾಂಧವರನ್ನು ಅಗಲಿದ್ದಾರೆ.

ಕಾಂಗ್ರೆಸ್ ನಾಯಕ ಸ್ವಾಮಿ ಕುಟ್ಟಿ, ಕುತ್ತಿಕಾರು ಗಣೇಶ ಭಂಡಾರಿ, ಖ್ಯಾತ ಯಕ್ಷಗಾನ ಕಲಾವಿದ, ನಾಟ್ಯಗುರು ದಿವಾಣ ಶಿವಶಂಕರ ಭಟ್, ಹಿರಿಯ ಕವಿ ವಿ.ಬಿ. ಕುಳಮರ್ವ ಸಹಿತ ಅನೇಕರು ಮೃತರಿಗೆ ಅಂತಿಮ ನಮನ ಸಲ್ಲಿಸಿದರು.

Leave a Reply

Your email address will not be published. Required fields are marked *