Realtime blog statisticsweb statistics
udupibits.in
Breaking News
ಉಡುಪಿ: ಶಿರ್ವ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಆಗಿ ನರಸಿಂಹ ಶೆಟ್ಟಿ ಅಧಿಕಾರ ಸ್ವೀಕಾರ.

ಶಾಲಾ ಕಾಲೇಜುಗಳ ವಾಹನ ಚಾಲಕರಿಗೆ ಪಿಸಿಸಿ ನೀಡಲು ಪೊಲೀಸರಿಂದ ವಿಳಂಬನೀತಿ !

ಉಡುಪಿ: ಶಾಲಾ ಕಾಲೇಜುಗಳ ವಾಹನ  ಚಾಲಕರಿಗೆ ಪೊಲೀಸ್ ಠಾಣೆಗಳಲ್ಲಿ ಕೊಡಮಾಡುವ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ (ಪಿಸಿಸಿ)ಗಾಗಿ ಪೊಲೀಸರು ವಾಹನ ಚಾಲಕರನ್ನು ಹಣಕ್ಕಾಗಿ ಪೀಡಿಸುತ್ತಿದ್ದಾರೆ ಎಂಬ ದೂರುಗಳು ಕೇಳಿಬರತೊಡಗಿದೆ.

ಶಿಕ್ಷಣ ಸಂಸ್ಥೆಗಳಲ್ಲಿನ ವಾಹನಗಳಿಗೆ ಚಾಲಕರಾಗಿರುವವರು ಪ್ರತೀ ವರ್ಷ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಗಳನ್ನು ಮಾಡಿಸಿಕೊಂಡು ಇವುಗಳನ್ನು ಶಿಕ್ಷಣ ಸಂಸ್ಥೆಗಳಿಗೆ ನೀಡಬೇಕು ಎಂಬುದು ಕಳೆದ ವರ್ಷ ಹೊಸದಾಗಿ ಜಿಲ್ಲಾಡಳಿತ ಜಾರಿಗೆ ತಂದ ಒಂದು ಕಾರ್ಯಕ್ರಮ. ಈ ಸಂಬಂಧ ಜಿಲ್ಲಾಡಳಿತ ಶಿಕ್ಷಣ ಸಂಸ್ಥೆಗಳಿಗೆ ನೋಟೀಸ್ ನೀಡಿದೆ.

ಜಿಲ್ಲಾಡಳಿತದ ಆದೇಶವನ್ನು ಪಾಲಿಸುವ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳ ಅಧಿಕೃತರು ಸಹಜವಾಗಿಯೇ ಪಿಸಿಸಿ ಹಾಜರುಪಡಿಸುವಂತೆ ವಾಹನ ಚಾಲಕರಿಗೆ ಸೂಚನೆ ನೀಡುತ್ತದೆ. ವಾಹನ ಚಾಲಕರು ಪಿಸಿಸಿ ಸರ್ಟಿಫಿಕೇಟ್ ಗಾಗಿ ಎಸ್ ಬಿ ಐ ಮೂಲಕ 375 ರು. ಗಳ ಚಲನ್ ಪಾವತಿಸಿ, ಬಳಿಕ ಚಲನಿನ ರಶೀದಿ ಸಹಿತ ಪಿಸಿಸಿ ಕೋರಿ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಅರ್ಜಿ ಸಲ್ಲಿಸುವುದು ಮತ್ತು  ಜಿಲ್ಲಾ ಪೊಲೀಸ್ ಅಧೀಕ್ಷಕರು ವಾಹನ ಚಾಲಕರ ಈ ಅರ್ಜಿಯನ್ನು ವಾಹನ ಚಾಲಕರ ಊರಿನ ಪೊಲೀಸ್ ಠಾಣೆಗೆ ಆನ್ ಲೈನ್ ಮೂಲಕ ಕಳುಹಿಸಿಕೊಟ್ಟು ಕೈ ತೊಳೆದುಕೊಳ್ಳುತ್ತಾರೆ.

ಒಂದು ವರ್ಷದ ಪಿಸಿಸಿಗಾಗಿ 375 ರು. ಪಾವತಿಸಿ ಎಸ್ಪಿ ಕಚೇರಿಗೆ ಹೋಗುವ ವಾನಹ ಚಾಲಕ, ಮತ್ತೆ ಪೊಲೀಸ್ ಠಾಣೆಗೆ ಹೋಗಲೇಬೇಕು. ಮೊದಲಿಗೆ ಅಧಿಕೃತವಾಗಿ 375 ರು. ಕೇಳಿ ಪಡೆದುಕೊಳ್ಳುವ ಕೆಲಸವನ್ನು ಪೊಲೀಸ್ ಅಧೀಕ್ಷಕರ ಕಚೇರಿಯ ಅಧಿಕಾರಿಗಳು ಮಾಡುತ್ತಾರೆಯಾದರೆ, ಬಳಿಕ ಪೊಲೀಸ್ ಠಾಣಾ ಸಿಬ್ಬಂದಿಗಳು ಅನಧಿಕೃತವಾಗಿ ವಾಹನ ಚಾಲಕರಿಂದ ಹಣ ಕಿ್ತುಕೊಳ್ಳಲು ವಿಳಂಬ ನೀತಿ ಅನುಸರಿಸುತ್ತಾರೆ. ಮಾತ್ರವಲ್ಲ, ಲಂಚಕ್ಕಾಗಿ ಕೈಯೊಡ್ಡುತ್ತಾರೆ. ವಾಹನ ಚಾಲಕ ಹಣ ನೀಡದಿದ್ದಲ್ಲಿ, ಹಣ ಕೊಡುವವರೆಗೆ ನೆಪಗಳನ್ನು ಹೇಳುತ್ತಾ ವಾಹನ ಚಾಲಕರನ್ನು ಅಲೆದಾಡಿಸುತ್ತಾರೆ.

ಅನೇಕ ವಾಹನ ಚಾಲಕರು ಪಿಸಿಸಿ ಕೊಡಲು ಪೊಲೀಸರು ಅನಗತ್ಯವಾಗಿ ವಿಳಂಬ ನೀತಿ ಅನುಸರಿಸುತ್ತಿರುವ ಬಗ್ಗೆ, ಕ್ಷುಲ್ಲಕ ಕಾರಣಗಳನ್ನು ಮುಂದಿಟ್ಟುಕೊಂಡು ಲಂಚಕ್ಕಾಗಿ ಪೀಡಿಸುತ್ತಿರುವ ಬಗ್ಗೆ ವಾಹನ ಚಾಲಕರು ತೀವ್ರ ಆಕ್ರೋಶ ವ್ಯಕ್ತಪಡಿಸತೊಡಗಿದ್ದಾರೆ.

ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಅಗತ್ಯವೇ ಇರಲಿಲ್ಲ, ಅಗತ್ಯವಿಲ್ಲದ ಯೋಜನೆಯನ್ನು ಜಾರಿಗೊಳಿಸಿದ ಬಳಿಕ ಈ ಹೆಸರಲ್ಲಿ ವಾರ್ಷಿಕವಾಗಿ ಇದಕ್ಕೆ 375 ರು. ನಿಗದಿಪಡಿಸಿರುವುದು ಸಹ ಸರಿಯಾದ ಕ್ರಮವಲ್ಲ ಎಂದು ಅಭಿಪ್ರಾಯಪಟ್ಟಿರುವ ವಾಹನ ಚಾಲಕರು, ಇದೀಗ ಮತ್ತೆ ಪೊಲೀಸರು ಲಂಚಕ್ಕಾಗಿ ಪಿಸಿಸಿ ನೀಡಲು ವಿಳಂಬ ನೀತಿ ಅನುಸರಿಸುತ್ತಿರುವುದು ಮತ್ತು ನೆಪಗಳನ್ನು ಹೆಣೆಯುತ್ತಿರುವುದನ್ನು ನೋಡಿದರೆ ಇನ್ನು ನಾವು ಕೂಡಾ ಜಿಲ್ಲೆಯ ಭ್ರಷ್ಟ ಪೊಲೀಸ್ ವ್ಯವಸ್ಥೆಯ ವಿರುದ್ಧ ಹೋರಾಟಕ್ಕಿಳಿಯುವ ಅನಿವಾರ್ಯತೆ ಉಂಟಾಗಲಿದೆ ಎಂದು ತಿಳಿಸಿದ್ದಾರೆ

Leave a Reply

Your email address will not be published. Required fields are marked *