Realtime blog statisticsweb statistics
udupibits.in
Breaking News
ಉಡುಪಿ: ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ-ಮಕ್ಕಳ ಆಸ್ಪತ್ರೆಯಲ್ಲಿ ಶಿಶು ಮರಣ ?

ಉಡುಪಿಯಲ್ಲಿ ‘ಜನಪರ ಚಿಂತನ ವೇದಿಕೆ’ಗೆ ಚಾಲನೆ

ಉಡುಪಿ: ಮಳೆಯಿಂದ ರಕ್ಷಣೆ ಪಡೆಯಲು ಕೊಡೆ ಇರುವಂತೆ, ಗಾಳಿ, ಮಳೆ, ಬಿಸಿಲು ಇತ್ಯಾದಿಗಳಿಂದ ರಕ್ಷಣೆ ಪಡೆದುಕೊಳ್ಳಲು ಮನೆ ಇರುವಂತೆ ಜಾತಿ, ಮತ, ವರ್ಗ ಬೇಧವಿಲ್ಲದೆ ನಡೆಯುವ ಅನ್ಯಾಯ, ಶೋಷಣೆ, ದೌರ್ಜನ್ಯದಿಂದ ರಕ್ಷಣೆ ಪಡೆದುಕೊಳ್ಳಲು, ತಪ್ಪು ಮಾರ್ಗದಲ್ಲಿ ನಡೆಯುತ್ತಿರುವ ಆಳುವ ಸರಕಾರಗಳನ್ನು ಸರಿಮಾರ್ಗದಲ್ಲಿ ಮುನ್ನಡೆಸಲು ಸಂಘಟನೆಗಳು ಮತ್ತು ಸಂಘಟನಾತ್ಮಕವಾಗಿ ಧ್ವನಿ ಎತ್ತುವುದು ಮುಖ್ಯ ಮತ್ತು ಪ್ರಯೋಜನಕಾರಿ ಎಂದು ಪತ್ರಕರ್ತ ಶ್ರೀರಾಮ ದಿವಾಣ ಅವರು ಹೇಳಿದರು.

ಜನಪರ ಚಿಂತನ ವೇದಿಕೆಉಡುಪಿಎಂಬ ನೂತನ ಸಂಸ್ಥೆಯನ್ನು ಜುಲೈ 8ರಂದು ಬೀಡಿನಗುಡ್ಡೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿದ ಬಳಿಕ ಅವರು ಮಾತನಾಡುತ್ತಿದ್ದರು.

ಅಬ್ಬರ ಆಡಂಬರಕ್ಕೆ ಜೋತುಬೀಳದೆ, ಭ್ರಷ್ಟರೊಂದಿಗೆ ಯಾವುದೇ ರೀತಿಯಲ್ಲೂ ರಾಜಿ ಮಾಡಿಕೊಳ್ಳದೆ ಸ್ವಾಭಿಮಾನದಿಂದ ಸಂಘ ಸಂಸ್ಥೆಗಳು ಸಂಘಟನೆಗಳು ಕೆಲಸ ಮಾಡುವಂತಾಗಬೇಕು. ನಾಗರೀಕರ ಸಮಸ್ಯೆಗಳ ಪರಿಹಾರಕ್ಕಾಗಿ ಧ್ವನಿ ಎತ್ತುವುದರ ಜೊತೆಗೆ, ಸರಕಾರಗಳು ಜ್ಯಾರಿಗೊಳಿಸುವ ಕಾಯಿದೆ ಕಾನೂನುಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳ ಮೂಲಕ ಒಂದು ಮಾದರಿ ಸಂಸ್ಥೆಯಾಗಿಜನಪರ ಚಿಂತನ ವೇದಿಕೆಕೆಲಸ ಮಾಡುತ್ತಾ ಬೆಳೆಯಲಿ ಎಂದು ಶ್ರೀರಾಮ ದಿವಾಣ ಅವರು ಆಶಯ ವ್ಯಕ್ತಪಡಿಸಿದರು.

ಸಮಾಜದ, ದೇಶದ ನಿಜವಾದ ನಾಡಿಮಿಡಿತದ ಅರಿವಿಲ್ಲದ ವಿದ್ಯಾರ್ಥಿಗಳು ಪಠ್ಯವನ್ನು ಬಾಯಿ ಪಾಠ ಮಾಡಿ ಪಾಸು ಮಾಡಿಕೊಂಡು ಕಾರ್ಯಾಂಗದಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸುವ ಮೂಲಕ ಆಳುವ ವ್ಯವಸ್ಥೆಯ ಭಾಗವಾಗುತ್ತಿರುವುದು ಸಹ ನಮ್ಮ ದೇಶದ ಗಂಭೀರ ಸಮಸ್ಯೆಗಳಲ್ಲಿ ಒಂದಾದರೆ, ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳು ಸ್ವಾರ್ಥಿಗಳಾಗಿರುವುದು, ಅಧಿಕಾರಕ್ಕೇರುವುದೇ ಇವರ ಗುರಿಯಾಗುತ್ತಿರುವುದು ಹಾಗೂ ಜನಪ್ರತಿನಿಧಿ ಎಂಬ ಸ್ಥಾನಗಳು ಉದ್ಯಮಗಳಾಗುತ್ತಿರುವುದು ಇನ್ನೊಂದು ಸಮಸ್ಯೆಯಾಗಿರುವ ಈ ಕಾಲಘಟ್ಟದಲ್ಲಿ ಪ್ರಜೆಗಳು ಪ್ರಜ್ಞಾವಂತರಾಗುವುದು ಮತ್ತು ಪ್ರಜ್ಞಾವಂತ ಪ್ರಜೆಗಳು ಸಮಸ್ಯೆಯ ಪರಿಹಾರಕ್ಕಾಗಿ ಚಿಂತಿಸಿ ಸೂಕ್ತ ಜನಜಾಗೃತಿ ಕಾರ್ಯಕ್ರಮಗಳನ್ನು ರೂಪಿಸುವುದು ಇಂದಿನ ಅಗತ್ಯವಾಗಿದೆ ಎಂದು ಶ್ರೀರಾಮ ದಿವಾಣ ಹೇಳಿದರು.

   

ಸಾಮಾಜಿಕ ಕಾರ್ಯಕರ್ತರಾದ ಪ್ರಶಾಂತ್ ಪೂಜಾರಿ, ವಿನಾಯಕ ಶೆಣೈ, ಮಾಲತಿ, ಸವಿತಾ ಶೆಟ್ಟಿ, ಸುನೀತಾ, ಭಾರತಿ, ಸುಜಾತಾ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ವೇದಿಕೆಯ ಅಧ್ಯಕ್ಷರಾದ ಪ್ರಕಾಶ್ ಪೂಜಾರಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ಸುಮಾ ಜಿ. ಶೆಟ್ಟಿ ವಂದನಾರ್ಪಣೆ ಸಲ್ಲಿಸಿದರು.

Leave a Reply

Your email address will not be published. Required fields are marked *