Realtime blog statisticsweb statistics
udupibits.in
Breaking News
ಉಡುಪಿ: ಕನಿಷ್ಠ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ನಗರಸಭೆ, ಜಿಲ್ಲಾಡಳಿತ, ರಾಜ್ಯ-ಕೇಂದ್ರ ಸರಕಾರ ಸಂಪೂರ್ಣ ವಿಫಲ !

ಅನಧಿಕೃತ, ಅಪಾಯಕಾರಿ ಫ್ಲೆಕ್ಸ್: ವಾಹನ ಸವಾರರಿಗೆ ಸಂಕಷ್ಟ !

ವರದಿ: ಪ್ರಕಾಶ್ ಪೂಜಾರಿ

ಉಡುಪಿ: ನಗರದ ಹೃದಯ ಭಾಗದ ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಧಾರ್ಮಿಕ ಕ್ಷೇತ್ರವಾದ ಉಡುಪಿ ಶ್ರೀಕೃಷ್ಣ ಮಠದ ಪಾರ್ಕಿಂಗ್ ಸಂಪರ್ಕಿಸುವ ಉಡುಪಿ ನಗರ ಸಭೆಯ ರಸ್ತೆಯ ಪ್ರಮುಖ ಸರ್ಕಲ್ ನಲ್ಲಿ ಖಾಸಗಿ ಸಂಸ್ಥೆಯೊಂದು ಅಳವಡಿಸಿರುವ ಅನಧಿಕೃತ ಅಪಾಯಕಾರಿ ಶಾಶ್ವತ ಫ್ಲೆಕ್ಸ್ ಬ್ಯಾನರೊಂದು ಸಾರ್ವಜನಿಕರ, ಪಾದಚಾರಿಗಳ ಹಾಗೂ ವಾಹನ ಚಾಲಕರ ಪ್ರಾಣಕ್ಕೆ ಸಂಚಕಾರ ತರುತ್ತಿದ್ದು ಈ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ನಗರದ ನಾಲ್ಕು ರಸ್ತೆಗಳು ಜೊತೆಗೂಡುವ ಈ ಸರ್ಕಲ್ ನಲ್ಲಿ ಕೆಳಮಟ್ಟದಲ್ಲಿ ಅದೂ ಬೃಹದಾಕಾರವಾಗಿ ನಿರ್ಮಿಸಲಾಗಿರುವ ಈ ಅನಧಿಕೃತ ಫ್ಲೆಕ್ಸ್ ನಿಂದಾಗಿ ಸರ್ಕಲ್ ನ ಇನ್ನೊಂದು ಬದಿಯಿಂದ  ಬರುವ ಪಾದಾಚಾರಿಗಳಾಗಲಿ, ವಾಹನಗಳಾಗಲಿ ಕಾಣಿಸದೆ ಇಲ್ಲಿ ದಿನನಿತ್ಯ ಎಂಬಂತೆ ಅಪಘಾತಗಳು ನಡೆಯುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ಪರಿಸರದಲ್ಲಿ ದಿನನಿತ್ಯ ಸಾವಿರಾರು ಪ್ರವಾಸಿಗರು ಸಂಚರಿಸುವುದಲ್ಲದೆ ಪರಿಸರದಲ್ಲಿ ನಾಲ್ಕು ಶಾಲಾ ಕಾಲೇಜುಗಳಿದ್ದು, ಶಾಲಾ ಮಕ್ಕಳ ವಾಹನ, ಮಕ್ಕಳು ಇಲ್ಲಿ ಸಂಚರಿಸುವ ಜನ ನಿಬಿಡ ಸರ್ಕಲ್ ಇದಾಗಿದ್ದು, ಈ ಅನಧಿಕೃತ ಫ್ಲೆಕ್ಸ್ ನಿಂದಾಗಿ ಎಲ್ಲರೂ ಅಪಾಯದ ಭೀತಿಯಲ್ಲೇ ಸಂಚರಿಸುವಂತಾಗಿದೆ.

ಕಳೆದ ವಾರ ಶಾಲಾ ಮಕ್ಕಳನ್ನು ಕರೆತರುತ್ತಿದ್ದ ದ್ವಿಚಕ್ರ ವಾಹನ ಚಾಲಕ ಮಹಿಳೆಯೋರ್ವರು ಈ ಫ್ಲೆಕ್ಸ್ ನಿಂದಾಗಿ ಅಪಘಾತಕ್ಕೊಳಗಾಗಿದ್ಧಾರೆ ಎನ್ನಲಾಗಿದೆ.

ಈ ಫ್ಲೆಕ್ಸ್ ಅನಧಿಕೃತವಾಗಿದ್ದು, ಕಳೆಧ ಹಲವು ವರ್ಷಗಳಿಂದ ನಗರ ಸಭೆಯ ಭ್ರಷ್ಟಾಚಾರದ ಮುಖ ಪರಿಚಯವನ್ನು ಈ ಫ್ಲೆಕ್ಸ್ ಪ್ರವಾಸಿಗರಿಗೆ ಪರಿಚಯಿಸುತ್ತಿದೆ ಎಂದು ಸ್ಥಳೀಯರು ವ್ಯಂಗ್ಯವಾಡಿದ್ದಾರೆ.

ಇಂತಹ ಅಪಾಯಕಾರಿ ನಿಷೇಧಿತ ಪ್ಲಾಸ್ಟಿಕ್ ಫ್ಲೆಕ್ಸ್ ಬ್ಯಾನರ್ ಬಳಸಿ ನಿರ್ಮಿಸಿರುವ ಜಾಹೀರಾತು ಫಲಕವನ್ನು ಕಂಡೂ ಕಾಣದಂತೆ ಇರುವ ಜನ ಪ್ರತಿನಿಧಿಗಳು, ನಗರ ಸಭೆಯ ಭ್ರಷ್ಟ ಅಧಿಕಾರಿಗಳ ಸ್ವಜನ ಪಕ್ಷಪಾತ ಹಾಗೂ ಬೀದಿ ಬದಿ ವ್ಯಾಪಾರಿಗಳನ್ನಷ್ಟೇ ಗದರಿಸಿ ತಮ್ಮ ಪೌರುಷ ಪ್ರದರ್ಶಿಸುತ್ತಿರುವ ನಗರಾಡಳಿತ, ನಿದ್ರೆಯಲ್ಲಿರುವ ಪೊಲೀಸ್ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಈ ಅನಧಿಕೃತ ಅಪಾಯಕಾರಿ ಫ್ಲೆಕ್ಸ್ ಅನ್ನು ತೆರವುಗೊಳಿಸಿ ಸರ್ಕಲ್ ನಲ್ಲಿ ಮುಕ್ತ ವಾಹನ ಸಂಚಾರಕ್ಕೆ, ಪಾದಚಾರಿಗಳ ಮುಕ್ತ ನಡೆದಾಟಕ್ಕೆ ಅವಕಾಶ ಮಾಡಿಕೊಡುವರೆ ಕಾದು ನೋಡಬೇಕಾಗಿದೆ.

Leave a Reply

Your email address will not be published. Required fields are marked *