Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಮಾಸಿಕ, ತ್ರೈಮಾಸಿಕಗಳ ಪ್ರದರ್ಶನ…

# ‘ನಿರ್ಮಲಾ’, ಮೈಸೂರು ಕೃಷ್ಣಮೂರ್ತಿಪುರಂನಿಂದ ಪ್ರಕಟವಾಗುತ್ತಿದ್ದ ಮಾಸಪತ್ರಿಕೆ. 1960ರ ದಶಕದಲ್ಲಿ ಇದಕ್ಕೆ 60 ಪೈಸೆ ಇತ್ತು. ಪ್ರತೀ ಸಂಚಿಕೆಯ ಮುಖಪುಟಗಳಲ್ಲೂ ಎಸ್.ಕಲ್ಲಪ್ಪ ಅವರು ಬಿಡಿಸಿದ ವರ್ಣಚಿತ್ರ ಇರುತ್ತಿತ್ತು. ಅಜ್ಞಾತ, ಶ್ರೀಕಾಂತ ನಾಡಿಗ್, ಆರ್.ಎಸ್. ಮೋಹನ್, ಕೆ.ಆರ್.ಸ್ವಾಮಿ, ಟಿ.ಈ. ಶ್ಯಾಮ್ ಮೊದಲಾದವರ ವ್ಯಂಗ್ಯಚಿತ್ರಗಳು ಇರುತ್ತಿದ್ದುವು.

ಎಸ್. ಸತ್ಯನಾರಾಯಣ, ಶ್ರೀಮತಿ ಎಚ್.ಕೆ., ವಿ.ವಿ. ಗೂಳೂರು, ಸುದರ್ಶನ, ಮಾರ್ವಿ ಸಿರಿದತ್ತ, ಕುಮುದಾ ರಾ.ವೆಂ.ಶ್ರೀ., ‘ಸಿಂಹ’, ಪ್ರಾಣೇಶ್, ಎಸ್. ಮಂಗಳಾ ಸತ್ಯನ್, ಎನ್.ಕೆ.ಮುಳುಕುಂಟೆ, ಈಶ್ವರಯ್ಯ, ಗೋಪಾಲಕೃಷ್ಣ ವೆಂ. ಶೆಟ್ಟಿಗಾರ, ಕ್ಯಾತನಹಳ್ಳಿ ರಾಮಣ್ಣ, ಎಸ್.ವಿಶ್ವನಾಥ್, ಬಿ.ಪಿ.ಕೃಷ್ಣಪ್ಪ ರೆಡ್ಡಿ, ದೇ.ನಾ. ಶ್ರೀನಿವಾಸಮೂರ್ತಿ, ಕುಸುಮಾ ಎನ್. ಶಾನಭಾಗ, ಬಿ. ಉಮಾ ಮೊದಲಾದವರ ಕತೆಗಳು ಪ್ರಕಟವಾಗುತ್ತಿದ್ದುವು.

ಎಂ.ಎಸ್.ರಾಮರಾವ್, ‘ವಿಜಯೇಂದ್ರ’, ಎಂ.ಗೋಪಾಲ್, ಎಂ. ಈಶ್ವರಪ್ಪ, ಕೆ.ಶಿವರಾಮ ಐತಾಳ, ಶ್ರೀಕೃಷ್ಣ ಆಲನಹಳ್ಳಿ, ಕೃಷ್ಣಮೂರ್ತಿ ಪುರಾಣಿಕ, ಶಾರದಾ ರಾಮಸ್ವಾಮಿ, ಕೆ.ಲಕ್ಷ್ಮೀನರಸಮ್ಮ, ‘ಕೌಶಿಕ’, ಶ್ರೀಧರ, ಟಿ.ಇ. ಶ್ಯಾಮ್, ‘ಸಿಂಹ’, ಬಿ. ನರಸಿಂಗ ರಾವ್, ಎಂ.ಜಿ. ನಂಜುಂಡಾರಾಧ್ಯ, ಟಿ.ವಿ. ವೆಂಕಟರಮಣಯ್ಯ, ದಿಲೀಪ್ ಕುಮಾರ್, ಎಸ್.ವಿ. ಪರಮೇಶ್ವರ ಭಟ್ಟ, ಎಸ್. ನಾರಾಯಣ ರೆಡ್ಡಿ, ಅಪ್ಪಯ್ಯ, ತಾ.ಶ್ರೀ. ನಾಗರಾಜರಾಯ, ‘ಕೋವೆಂ’, ದೇ.ನಾ.ಶ್ರೀ., ಕಾ.ನಾ.ಭ., ಜಿ.ಪಿ.ಸುಬ್ಬರಾಯ, ಎಂ.ವಿ. ವೆಂಕಟಸುಬ್ಬ ರಾವ್, ಶಾರದಾ ರಾಮಸ್ವಾಮಿ, ಕೆ. ಲಕ್ಷ್ಮೀನರಸಮ್ಮ, ಪಿ.ಮೈಥಿಲಿ, ಎಸ್.ವಿ., ಬಿ.ಉಮಾ, ಕೆ.ರಾಮಕೃಷ್ಣ ಭಟ್ಟ, ಬಿ.ಪಿ. ಕೃಷ್ಣಪ್ಪ ರೆಡ್ಡಿ, ದಿಲೀಪ್ ಕುಮಾರ್, ಸೂ. ಸುಬ್ರಹ್ಮಣ್ಯಂ, ಜಿ.ಎಸ್. ಭೈರೋಜಿ ರಾವ್, ವಿ.ಕೆ. ಜನಾರ್ದನ್, ಬಸವರಾಜ ಕಟ್ಟೀಮನಿ, ಆರ್.ಜಿ.ಸುಬೋಧ, ರಾಮಚಂದ್ರ, ವಿಜಯಲಕ್ಷ್ಮಿ ಆರ್. ರಾವ್, ಯೂ.ಸಿ.ಎಸ್. ಮುಂತಾದವರ ವೈವಿಧ್ಯಮಯ ಬರೆಹಗಳು ಪ್ರಕಟವಾಗುತ್ತಿದ್ದುವು.

 # ‘ಉಷಾ’, ಬೆಂಗಳೂರಿನಿಂದ ಪ್ರಕಟವಾಗುತ್ತಿದ್ದ ಮಾಸಪತ್ರಿಕೆ. ಪಿ.ಮೋಹನ್ ಅವರು ಸಂಪಾದಕರು, ಸಂಚಾಲಕರು ಮತ್ತು ಪ್ರಕಾಶಕರಾಗಿದ್ದರು. ಉಡುಪಿಯ ಅ.ಗಣಪಯ್ಯ ಅಲ್ಸೆ ಅವರು ಸಹ ಸಂಪಾದಕರಾಗಿದ್ದರು. ಬೆಂಗಳೂರು ಕಾಟನ್ ಪೇಟೆ-ಅರಳೇಪೇಟೆಯ ಭಾಷ್ಯ ರಸ್ತೆಯ ಕೆಂಗೇರಿ ಗೇಟ್ ಪೊಲೀಸ್ ಠಾಣೆಯ ಎದುರುಗಡೆ ಇದ್ದ ಶ್ರೀ ಗಜಲಕ್ಷ್ಮಿ ಪ್ರೆಸ್ ನಲ್ಲಿ ಪ್ರಕಟವಾಗುತ್ತಿದ್ದ ಪತ್ರಿಕೆಯ ಕಾರ್ಯಾಲಯ ಸಹ ಇಲ್ಲಿಯೇ ಇತ್ತು.

1940ರ ಜುಲೈನಲ್ಲಿ ಆರಂಭವಾದ ‘ಉಷಾ’ ಪ್ರಗತಿಶೀಲ ಮಾಸಪತ್ರಿಕೆಗೆ 1968ರಲ್ಲಿ 20 ಪೈಸೆ ನಿಗದಿಪಡಿಸಲಾಗಿತ್ತು. 40+4 ಪುಟಗಳಲ್ಲಿ, ಪುಸ್ತಕ ರೂಪದಲ್ಲಿ ಪ್ರಕಟವಾಗುತ್ತಿದ್ದ ‘ಉಷಾ’, ಪ್ರತೀ ತಿಂಗಳ ಮೊದಲ ವಾರ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿತ್ತು. ಮುಖಪುಟ ರಕ್ಷಾಪುಟದಲ್ಲಿ ಚಿತ್ರ ಮತ್ತು ಹಿಂಬದಿ ರಕ್ಷಾಪುಟದಲ್ಲಿ ಜಾಹೀರಾತು ಪ್ರಕಟವಾಗುತ್ತಿತ್ತು.

ಬಿ.ನರಸಿಂಗ ರಾವ್ ಕಾಸರಗೋಡು, ಬಿ.ಜಿ.ಸತ್ಯಮೂರ್ತಿ ಬೆಂಗಳೂರು, ಜೆ.ಎಫ್. ಫೆರ್ನಾಂಡಿಸ್, ಟಿ.ಎಲ್. ಸತ್ಯಮೂರ್ತಿ ಬೆಂಗಳೂರು, ಪದ್ಮನಾಭಿ ಕೃಷ್ಣಮೂರ್ತಿ, ಮಲಕಣ್ಣ ಯಾಳವಾರ, ಮಾತಾತನಯ ಮೊದಲಾದವರ ಕತೆ, ಕವಿತೆ, ಚುಟುಕ, ಲೇಖನಗಳು ಇದರಲ್ಲಿ ಪ್ರಕಟವಾಗುತ್ತಿದ್ದುವು.

# ‘ಜೀವೋತ್ತಮ’, ಉತ್ತರ ಕನ್ನಡ ಜಿಲ್ಲೆಯ ಕುಮಟಾದಿಂದ ಪ್ರಕಟವಾಗುತ್ತಿರುವ ತ್ರೈಮಾಸಿಕ. ಕುಮಟಾದ ಶ್ರೀ ರಮಣ ಮುದ್ರಣಾಲಯದಲ್ಲಿ ಮುದ್ರಣಾಲಯದ ಮಾಲಕರಾದ ನಾಗಪ್ಪ ಶಂಕರ ಗಾಯತೊಂಡೆ ಅವರು ಇದನ್ನು ಪ್ರಕಟಿಸುತ್ತಿದ್ದರು. 1958ರ ಆಗೋಸ್ತ್ ನಲ್ಲಿ ಆರಂಭವಾದ ‘ಜೀವೋತ್ತಮ’ಕ್ಕೆ, 1968ರಲ್ಲಿ ಒಂದು ರೂಪಾಯಿ ದರ ಇತ್ತು. ಪುಸ್ತಕ ರೂಪದಲ್ಲಿದ್ದ ತ್ರೈಮಾಸಿಕವು, 100+6 ಪುಟಗಳನ್ನು ಹೊಂದಿತ್ತು. ಪತ್ರಿಕೆ ಕಚೇರಿಯನ್ನೂ ಹೊಂದಿತ್ತು. ಈ ತ್ರೈಮಾಸಿಕ ಈಗಲೂ ಪ್ರಕಟವಾಗುತ್ತಿದೆ.

ಕುಮಟಾದ ವಕೀಲರಾದ ನರಸಿಂಹ ಗೋವಿಂದ ಶಾನಭಾಗ ಅವರು ಸಂಪಾದಕರು ಮತ್ತು ಪ್ರಕಾಶಕರಾಗಿದ್ದರು. ಭದ್ರಗಿರಿ ಕೇಶವದಾಸರು ಬೆಂಗಳೂರು, ಶೇಷಗಿರಿ ಕೇಶವ ಪ್ರಭು ಮುಂಬಯಿ, ವಿದ್ಯಾಭೂಷಣ ರಾ.ಅ.ಭಟ್ಟ ಕಾಶೀಕರ ಹೊನ್ನಾವರ, ಡಾ.ದಯಾನಂದ ನರಸಿಂಹ ಶಾನಭಾಗ ಧಾರವಾಡ, ಗಿರಿಜಾತನಯ, ಸುಬ್ರಹ್ಮಣ್ಯ, ದಿಗಂಬರ ಜೋಶಿ ಬೆಳಗಾವಿ, ಸುದರ್ಶನ ಸಿಂಹಜಿ, ಕೊಡ್ಲೆಕೆರೆ ಸುಬ್ರಾಯ ಗಣೇಶ ಭಟ್ಟ ಗೋಕರ್ಣ, ವಿಠ್ಠಲ ಹರಿ ಭಟ್ಟ ಹೆರವಟ್ಟಾ, ಎಂ.ಬಿ. ಶಂಕರ ರಾವ್ ಐಎಎಸ್ ಉಡುಪಿ, ಹಾನಗಲ್ಲ ರಾಮ ದೀಕ್ಷಿತರು ಅಡೂರ ಶಿರಸಿ, ಬೆ.ವಾ. ಪ್ರಭಾಕರ ಮುಂಬಯಿ, ಬಿ.ನರಸಿಂಗ ರಾವ್ ಕಾಸರಗೋಡು, ದಯಾನಂದ ಹರಿ ಪೈ ಹಾವೇರಿ ಮೊದಲಾದವರ ಅಧ್ಯಾತ್ಮ ಬರೆಹಗಳು ಪ್ರಕಟವಾಗುತ್ತಿದ್ದುವು.

‘ಜೀವೋತ್ತಮ’ ತ್ರೈಮಾಸಿಕದ ಸಂಪಾದಕರಾದ ನರಸಿಂಹ ಗೋವಿಂದ ಶಾನಭಾಗ ಅವರು ‘ಚುನಾವಣೆ’ ಎಂಬ ವಾರಪತ್ರಿಕೆಯನ್ನೂ ನಡೆಸುತ್ತಿದ್ದರು. 1961ರಲ್ಲಿ ಆರಂಭವಾದ ಇದಕ್ಕೆ ಹನ್ನೆರಡು ಪೈಸೆ ದರ ನಿಗದಿಪಡಿಸಲಾಗಿತ್ತು.

# ‘ಅಜಂತ’, ಗಡಿನಾಡು ಕಾಸರಗೋಡುವಿನಿಂದ ಪ್ರಕಟವಾಗುತ್ತಿದ್ದ ಮಾಸಿಕ. ಎಂ.ವ್ಯಾಸ ಅವರು ಸಂಪಾದಕರು ಹಾಗೂ ಎಂ.ಶುಭಾಕರ ಶಾನುಭಾಗ್ ಅವರು ಪ್ರಕಾಶಕರಾಗಿದ್ದರು. ಕೆ.ಜಿ.ಶೆಣೈ ಅವರ ಶ್ರೀನಿವಾಸ ಪ್ರಿಂಟಿಂಗ್ಸ್ ವರ್ಕ್ಸ್ ನಲ್ಲಿ ಪ್ರಕಟವಾಗುತ್ತಿತ್ತು. 1966ರ ಫೆಬ್ರವರಿಯಲ್ಲಿ ಆರಂಭವಾದ, 72+4 ಪುಟಗಳ ಅಜಂತಕ್ಕೆ  50 ಪೈಸೆ ದರ ನಿಗದಿಪಡಿಸಲಾಗಿತ್ತು.

ಎಂ.ಗಂಗಾಧರ ಭಟ್ ಅವರು ಸಹ ಸಂಪಾದಕರಾಗಿದ್ದರು. ಕೆ.ಎಸ್.ಈಶ್ವರನ್ ಸಂಚಾಲಕರಾಗಿದ್ದರು. ನಾ.ಡಿ’ಸೋಜ, ನಾಗಭೂಷಣ ರಾವ್ ಸಿಂಧೆ, ”ಶ್ರೀ” ಕಾಸರಗೋಡು, ನಿಂಜೂರು ವ್ಯಾಸ ರಾವ್, ಶಶಾಂಕ, ಗಂಗಾಧರ್, ಕೆ.ಟಿ. ಶ್ರೀಧರ್, ಕೆ.ಎನ್, ಭಟ್, ಪ್ರಧಾನ್ ಕೃಷ್ಣಮೂರ್ತಿ, ”ಕಾ.ನಾ.ಭ.” (ಕಾಸರಗೋಡು ನಾರಾಯಣ ಭಟ್), ಶಶಿರಾಜ್, ಗಣೇಶ್, ಬಸವರಾಜ ಐವಳ್ಳಿ, ಗೋಪಾಲಕೃಷ್ಣ ಮಧ್ಯಸ್ಥ, ಬುದ್ದಣ್ಣ ಹಿಂಗಮಿರೆ, ಬಿ.ನರಸಿಂಗ್ ರಾವ್, ”ವ್ಯಾಧ” ಮೊದಲಾದವರ ಕತೆಗಳು, ಕವಿತೆಗಳು, ನಗೆ ಬರಹಗಳು, ವಿಮರ್ಶೆಗಳು, ಲೇಖನಗಳು, ವ್ಯಂಗ್ಯಚಿತ್ರಗಳು ‘ಅಜಂತ’ದಲ್ಲಿ ಪ್ರಕಟವಾಗುತ್ತಿದ್ದುವು.

\

# ‘ಭವ್ಯವಾಣಿ’, ಉಡುಪಿಯಿಂದ ಪ್ರಕಟವಾಗುತ್ತಿದ್ದ ಮಾಸಿಕ. 1957ರಲ್ಲಿ ಆರಂಭವಾದ ಭವ್ಯವಾಣಿ, ಉಡುಪಿಯ ಕೆ.ರಾಮಕೃಷ್ಣ ಅವರ ಲಕ್ಷ್ಮಿ ಪ್ರಿಂಟರ್ಸ್ ನಲ್ಲಿ ಮುದ್ರಣವಾಗುತ್ತಿತ್ತು. ಕೆ.ಲಕ್ಷ್ಮಿನಾರಾಯಣ ಭಟ್ (ಕೆ.ಎಲ್.ಭಟ್) ಅವರು ಸಂಪಾದಕರು, ಪ್ರಕಾಶಕರು ಮತ್ತು ಮಾಲಕರಾಗಿದ್ದರು. ಉಡುಪಿಯ ಪಡುಪೇಟೆಯಲ್ಲಿ ಪತ್ರಿಕಾ ಕಚೇರಿ ಇತ್ತು. 60+4 ಪುಟಗಳ, ಪುಸ್ತಕ ರೂಪದ ಭವ್ಯವಾಣಿಯ ಬಿಡಿ ಸಂಚಿಕೆಗೆ 75 ಪೈಸೆ ಬೆಲೆ  ನಿಗದಿಪಡಿಸಲಾಗಿತ್ತು.

ಟಿ.ಎ. ಪೈ, ಬಿ. ನರಸಿಂಗ ರಾವ್, ವಿದ್ಯಾಭೂಷಣ ರಾ.ಅ. ಭಟ್ಟ ಕಾಶೀಕರ ಹೊನ್ನಾವರ, ಬಳ್ಕೂರು ಸುಬ್ರಾಯ ಅಡಿಗ, ಡಾ//ಎಂ.ಯು. ಬಹದ್ದೂರ್, ಕುಸುಮಾ ಕೇಣಿಕರ ಅಂಕೋಲಾ, ಪಂ. ಪಂಢರೀನಾಥಾಚಾರ್ಯ ಗಲಗಲಿ ಗದಗ, ದಯಾನಂದ ಶೆಣೈ ಕೆ., ಡಾ//ವೈ.ಎನ್. ಜೆಫಿರೋವ್, ಎನ್. ರಂಗನಾಥ ಶರ್ಮಾ, ವಿಠ್ಠಲ ಶಹಾಣೆ, ಬಾ.ರಾ.ಸುಬ್ರಾಯ ಶಾಸ್ತ್ರಿ ತಿರುಮಂಗಲಂ, ಕೆ.ಜಿ. ವಸಂತ ಮಾಧವ ಮೊದಲಾದವರ ಬರೆಹಗಳು ಭವ್ಯವಾಣಿಯಲ್ಲಿ ಪ್ರಕಟವಾಗುತ್ತಿದ್ದುವು.

# ‘ಕೈಲಾಸ’, ಬೆಂಗಳೂರಿನಿಂದ ಪ್ರಕಟವಾಗುತ್ತಿದ್ದ ಮಾಸಪತ್ರಿಕೆ. ಎನ್.ಎಸ್. ಸೀತಾರಾಮ ಶಾಸ್ತ್ರಿ ಅವರು ಇದರ ಸಂಪಾದಕರಾಗಿದ್ದರು. 1964ರಲ್ಲಿ ಆರಂಭವಾದ ‘ಕೈಲಾಸ’ ಪುಸ್ತಕ ರೂಪದಲ್ಲಿ ಪ್ರಕಟವಾಗುತ್ತಿತ್ತು. 75 ಪೈಸೆ ಬೆಲೆ ನಿಗದಿಪಡಿಸಲಾಗಿತ್ತು.

ಕೈಪು ಲಕ್ಷ್ಮೀನರಸಿಂಹ ಶಾಸ್ತ್ರಿ, ಶ್ರೀಮತಿ ಎನ್.ಎಸ್. ಪರಿಮಳ, ಬಿ.ಎಸ್. ನರೇಂದ್ರನಾಥ್, ಶ್ರೀಮತಿ ಆನಂದಿ ಸದಾಶಿವ ರಾವ್, ಎನ್.ಕೆ. ಮುಳುಕುಂಟೆ, ಶ್ರೀಮತಿ ಸರೋಜ ನಾರಾಯಣ ರಾವ್, ಡಿ.ಎ.ಸುಬ್ಬ ರಾವ್, ಕೆ.ಆರ್. ಉಪಾಧ್ಯಾಯ, ಕುಮಾರಿ ನೇತ್ರಾವತಿ, ವಿಜಯೇಂದ್ರ, ಸಂತೋಷ ಕುಮಾರ್ ಗುಲ್ವಾಡಿ, ಅಬ್ದುಲ್ ಮಜೀದ್ ಖಾನ್, ಡಾ.ವೈ.ಎನ್.ಎಸ್.ಮೂರ್ತಿ, ರಾ. ಶಿವರಾಮಯ್ಯ, ಶ್ರೀಮತಿ ಕಮಲಾ ಲಕ್ಷ್ಮೀಕಾಂತ್, ಕ್ಯಾಪ್ಟನ್ ಎಂ.ಜಿ.ಕೆ. ಮೂರ್ತಿ, ಎಂ. ಲಕ್ಷ್ಮಣ, ಶ್ರೀಮತಿ ಅಂಬಿಕಾ, ಶ್ರೀಮತಿ ಪದ್ಮಾ ಗುರುರಾಜ್, ಪಿ. ರಾಮಕೃಷ್ಣ ಶಾಸ್ತ್ರಿ, ವತ್ಸಲ, ರಾಜೀವ, ಸ್ವಾತಿಭೂಷಣಂ, ಮಾಧು, ಎನ್.ಎಸ್. ಗದಗ್ ಕರ್ ಮುಂತಾದವರು ‘ಕೈಲಾಸ’ಕ್ಕೆ ಬರೆಯುತ್ತಿದ್ದರು.

 

 

 

 

# ‘ವಿನೋದ’, ಪುಸ್ತಕ ರೂಪದಲ್ಲಿ ಪ್ರಕಟವಾಗುತ್ತಿದ್ದ ಮಾಸಿಕ. 36 ಪುಟಗಳ ವಿನೋದದ ಬಿಡಿ ಸಮಚಿಕೆಯ ಬೆಲೆ 1970ರಲ್ಲಿ 30 ಪೈಸೆ. ಹೆಸರಿಗೆ ತಕ್ಕಂತೆ ವಿನೋದ ಹಾಸ್ಯ ಪ್ರಧಾನ ಮಾಸಿಕವಾಗಿತ್ತು. ಮುಖಪುಟದಲ್ಲಿಯೇ ವ್ಯಂಗ್ಯಚಿತ್ರವನ್ನು ಪ್ರಕಟಿಸುತ್ತಿದ್ದ ವಿನೋದವನ್ನು 1959ರಲ್ಲಿ ಆರಂಭಿಸಲಾಗಿತ್ತು. ಬೆಂಗಳೂರಿನ ಚಾಮರಾಜಪೇಟೆಯ ಪಂಪ ಮಹಾಕವಿ ರಸ್ತೆಯ ಬಿ.ಸಿ.ಸಿ. ಬ್ಯಾಂಕ್ ಬಿಲ್ಡಿಂಗ್ ನಲ್ಲಿ ಕಚೇರಿ ಹೊಂದಿದ್ದ ವಿನೋದದ ಸಂಪಾದಕರು, ಪ್ರಕಾಶಕರು ಮತ್ತು ಮುದ್ರಕರು ದೇಶಹಳ್ಳಿ ಜಿ. ನಾರಾಯಣ. ಅ.ರಾ. ಮಿತ್ರ ಸಹ ಸಂಪಾದಕರು.

ಹೀ.ಚಿ.ಶಾಂತವೀರಯ್ಯ, ಎ.ಎನ್. ಸ್ವಾಮಿ, ಶ್ರೀಮತಿ ಸುನೀತಿ ಕೃಷ್ಣಸ್ವಾಮಿ, ತಾ.ಶ್ರೀ. ನಾಗರಾಜ ರಾಯ, ಬಳ್ಕೂರು ಸುಬ್ರಾಯ ಅಡಿಗ, ಕೆ.ಸಿ. ಚೌಡಪ್ಪ ಶೆಟ್ಟಿ, ಡಿ. ಲಿಂಗಯ್ಯ, ಟಿ. ವೆಂಕಟರಾಮಯ್ಯ, ಎಂ.ಜಿ. ವೆಂಕಟೇಶಯ್ಯ, ಜಿ.ಪಿ. ಸುಬ್ಬರಾಯ, ಬಿ. ನರಸಿಂಗ ರಾವ್, ಪರಮೇಶ್ವರ ಶಮಱ, ಪ್ರೇಮಕುಮಾರ್ ಮೊದಲಾದವರು ‘ವಿನೋದ’ದ ಬರಹಗಾರರಾಗಿದ್ದರು.

# ‘ವೀರಭೂಮಿ’, ಉಡುಪಿಯಿಂದ ಪ್ರಕಟವಾಗುತ್ತಿದ್ದ ಪುಸ್ತಕ ರೂಪದ ಮಾಸಿಕ. ಆಗ ಇದರ ಬಿಡಿ ಸಂಚಿಕೆಯ ಬೆಲೆ 30 ಪೈಸೆ. ಉಡುಪಿ ತೆಂಕಪೇಟೆಯಲ್ಲಿ ಕಚೇರಿ ಹೊಂದಿದ್ದ ವೀರಭೂಮಿಯ ಸಂಪಾದಕರು ಮತ್ತು ಪ್ರಕಾಶಕರು ಎಸ್.ವೆಂಕಟರಾಜ. ಮುದ್ರಕರು ಮೆಜೆಸ್ಟಿಕ್ ಪ್ರೆಸ್ನ ಕೆ. ರಾಘವೇಂದ್ರ ರಾವ್. ಎಸ್.ವೆಂಕಟರಾಜ ಅವರು ಕವಿ- ಕಥೆ- ಕಾದಂಬರಿಕಾರರು, ನಾಟಕ ರಚನಾಕಾರರರು ಆಗಿದ್ದರು.

1963ರಲ್ಲಿ ಆರಂಭವಾದ ವೀರಭೂಮಿಯಲ್ಲಿ ವಿ.ಕೆ. ಉಮರಾಣಿ, ‘ಪ್ರಫುಲ್ಲ’ ಹೊನ್ನಾವರ, ‘ಕಾ.ನಾ.ಭ’ (ಕಾಸರಗೋಡು ನಾರಾಯಣ ಭಟ್ಟ), ‘ಕಾವ್ಯಾರಾಧಕ’, ಶ್ರೀಮತಿ ಸುಮಿತ್ರಾ ರಾಮಣ್ಣ, ಬಿ.ನರಸಿಂಗ ರಾವ್, ‘ನವಗಿರಿನಂದ’, ನಾರಾಯಣ ಕಾಗಾಲ, ಕುಮಾರಿ ಸುಶೀಲಾ ಭಟ್ ಬಿ.ಕೆ. ಮುಂತಾದವರು ‘ವೀರಭೂಮಿ’ ಬರಹಗಾರರಾಗಿದ್ದರು. ಸಾಲಿಗ್ರಾಮದ ಜ್ಯೋತಿಷ್ಯ ಶಿರೋಮಣಿ ಪಿ. ಲಕ್ಷ್ಮೀನಾರಾಯಣ ಅಡಿಗ ಬರೆಯುತ್ತಿದ್ದ ರಾಶಿ ಭವಿಷ್ಯ ಪ್ರತಿ ಸಂಚಿಕೆಯಲ್ಲೂ ಪ್ರಕಟವಾಗುತ್ತಿತ್ತು.

 

 

# ”ಕಾಸರಗೋಡು ಸಮಾಚಾರ”, ಗಡಿನಾಡು ಕಾಸರಗೋಡುವಿನಿಂದ ಪ್ರಕಟವಾಗುತ್ತಿದ್ದ ಪತ್ರಿಕೆ. ಕಾಸರಗೋಡು ಎಂಬ ಕನ್ನಡನಾಡನ್ನು ಅನ್ಯಾಯವಾಗಿ ಕೇರಳಕ್ಕೆ ಸೇರಿಸಿದಾಗ ಕನ್ನಡಿಗರಿಗಾದ ಅನ್ಯಾಯದ ವಿರುದ್ಧದ ಹೋರಾಟಕ್ಕೆ ಧ್ವನಿಯಾಗುವುದಕ್ಕಾಗಿಯೇ ಈ ಪತ್ರಿಕೆಯನ್ನು ಆರಂಭಿಸಲಾಗಿತ್ತು. ವೈ. ಮಹಾಲಿಂಗ ಭಟ್ ಅವರು ಇದರ ಸಂಪಾದಕರಾಗಿದ್ದರು. ಕಳ್ಳಿಗೆ ಮಹಾಬಲ ಭಂಡಾರಿ ಅವರು ಸಲಹೆಗಾರ ಮಂಡಳಿಯ ಅಧ್ಯಕ್ಷರಾಗಿದ್ದರು. ಕಾಸರಗೋಡಿನ ಸಿರಿಗನ್ನಡ ಪ್ರೆಸ್ ನ ಎಸ್.ಕೃಷ್ಣ ಭಟ್ ಅವರು ಮುದ್ರಕರು ಮತ್ತು ಪ್ರಕಾಶಕರಾಗಿದ್ದರು.

ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ, ಬೇಕಲ ರಾಮ ನಾಯಕ, ಎನ್.ಎ. ಶೀನಪ್ಪ ಹೆಗ್ಡೆ ಪೊಳಲಿ, ಜಿ.ಶಂಕರ ಭಟ್ ಉಜಿರೆ, ಅಚ್ಯುತ ವಿ. ಪುತ್ರನ್ ಮುಂಬಯಿ, ತಿರುಮಲೆ ತಾತಾಚಾರ್ಯ ಶರ್ಮ ಬೆಂಗಳೂರು, ವಿದ್ವಾನ್ ಪೆರಡಾಲ ಕೃಷ್ಣಯ್ಯ, ಜಿ.ಎ. ನರಸಿಂಹ ಮೂರ್ತಿ ಬೆಂಗಳೂರು, ಅರ್ಚಿಕ ವೆಂಕಟೇಶ ಬೆಂಗಳೂರು, ವೆಂಕಟರಾಜ ಪಾನಸೆ ಬೆಂಗಳೂರು, ಎನ್.ಡಿ. ಶಂಕರ್ ಬೆಂಗಳೂರು, ಪ್ರೊ.ಕೃಷ್ಣ ಕುಮಾರ್ ಕಲ್ಲೂರ್ ಮುಂಬಯಿ, ಗಣಪತಿ ಮೊಳೆಯಾರ, ಗಣಪತಿ ದಿವಾಣ, ಕೆ. ವೆಂಕಟಕೃಷ್ಣಯ್ಯ, ಶಾಮ ಭಟ್ ಪೊಸವಣಿಕೆ, ಎಸ್. ಕೃಷ್ಣ ಭಟ್, ‘ಶ್ರೀ ನಿಲಯ’ ಕಾಸರಗೋಡು, ವಿಚಿತ್ರ ಏತಡ್ಕ, ಅನಂತರಾಮ ಏತಡ್ಕ, ಪಿ.ಕೃಷ್ಣಯ್ಯ, ಕೆ.ಎಸ್.ಎನ್. ಭಟ್, ಪುಂಡೂರು ದಾಮೋದರ ಪುಣಿಂಚತ್ತಾಯ, ಸತ್ಯಕಾಮ ಕಾಸರಗೋಡು, ಕೆ.ಬಿ.ಎಸ್.ವಿಶ್ವಪ್ರಿಯ ಕಾಸರಗೋಡು, ಕೆ.ಎಂ. ಮಣಿಯಾಣಿ, ಎನ್. ಕೇಶವ ಅಲೆವೂರಾಯ, ಎ.ಬಾಬು ನಾಯಕ್, ‘ಕನ್ನಡತನಯ’ ಕಾಸರಗೋಡು, ಕೆ.ಪ್ರೇಮಾ ಕಿಣಿ ಕಾಸರಗೋಡು, ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್, ಕೆ.ಶಂಕರನಾರಾಯಣ ಭಟ್, ನಿರಂಜನ ಮೈಸೂರು, ‘ವಿಶಾರದ’ ಕೆ.ಎಸ್. ಶರ್ಮ ವಿದ್ವಾನ್, ಕೆ.ಎಸ್. ಸುಬ್ರಾಯ ಭಟ್, ಯು.ಪಿ. ಕುಣಿಕುಳ್ಳಾಯ, ಎಂ. ಉಮೇಶ್ ರಾವ್, ಡಾ.ಪಿ.ಎಸ್. ಶಾಸ್ತ್ರೀ ಪೆರಡಾಲ, ಕೆ. ಸೋಮಪ್ಪ ಶೆಟ್ಟಿ ಕೂಡ್ಲು, ಡಾ.ಕೆ. ಶಿವರಾಮ ಶೆಟ್ಟಿ ಕಾಸರಗೋಡು, ವರುಂಬುಡಿ ಶಂಕರನಾರಾಯಣ ಭಟ್ಟ ವಿಶಾರದ, ಶಿರಿಬಾಗಿಲು ವೆಂಕಪ್ಪಯ್ಯ, ಕೆ.ಆರ್. ಕಾರಂತ ಮಂಗಳೂರು, ಬಿ. ಶ್ರೀಧರ ಕಕ್ಕಿಲ್ಲಾಯ, ಎಂ.ಎಸ್. ಕಡಂಬಳಿತ್ತಾಯ, ಶಂ.ಪಾ. ದೈತೋಟ ಪಾಣಾಜೆ, ಕಯ್ಯಾರ ಕಿಞ್ಙಣ್ಣ ರೈ ಪೆರಡಾಲ, ಡಾ.ಪಿ.ಎನ್. ಭಟ್, ಡಾ.ಕೇಪ್ಟನ್ ಕೆ.ಎ. ಶೆಟ್ಟಿ ಕಾಸರಗೋಡು, ಕವಿರಾಜ ಡಾ.ಕೆ.ಸಿ. ಆಳ್ವ ಕಾಸರಗೋಡು ಮೊದಲಾದವರು ‘ಕಾಸರಗೋಡು ಸಮಾಚಾರ’ ಪತ್ರಿಕೆಗೆ ಬರೆಯುತ್ತಿದ್ದರು.

(ಕೊಡುಗೆ: ನರಸಿಂಗ ರಾವ್)

# ‘ಆಯುರ್ವೇದ’, ಉಡುಪಿ ಜಿಲ್ಲೆಯ ಹಿರಿಯಡ್ಕದಿಂದ ಪ್ರಕಟವಾಗುತ್ತಿದ್ದ ಮಾಸಪತ್ರಿಕೆ. ನಿಖಿಲ ಕರ್ನಾಟಕ ಾಯುರ್ವೇದ ಮಂಡಳದ ಮುಖ ಪತ್ರಿಕೆಯಾಗಿದ್ದ ‘ಆಯುರ್ವೇದ’, ಕಾರ್ಕಳದ ಶ್ರೀ ರಾಮ ಪ್ರಿಂಟಿಂಗ್ ಪ್ರೆಸ್ ನಲ್ಲಿ ಮುದ್ರಣವಾಗುತ್ತಿತ್ತು. ಕಾ.ರಾ.ಪುರಾಣಿಕ ಅವರು ಪ್ರಧಾನ ಸಂಪಾದಕರು ಮತ್ತು ಪ್ರಕಾಶಕರಾಗಿದ್ದರು. ರಾ. ಕೃ. ಕುಲಕರ್ಣಿ ಜಿನರಾಳಕರ್, ಡಾ. ಎ. ವಿ. ಗದಗ, ವೈದ್ಯರಾಜ ಪಾಂಗಳ ಲಕ್ಷ್ಮೀನಾರಾಯಣ ನಾಯಕ್ ಹಾಗೂ ಇನ್ನೂ ಕೆಲವರು ಸಂಪಾದಕ ಮಂಡಳಿಯಲ್ಲಿದ್ದರು. 1947ರಲ್ಲಿ ಆರಂಭವಾದ ‘ಆಯುರ್ವೇದ’ದ ಬಿಡಿ ಸಂಚಿಕೆಯ ದರ ಆರಂಭ ಕಾಲದಲ್ಲಿ ನಾಲ್ಕಾಣೆ ಮತ್ತು ವಾರ್ಷಿಕ ಚಂದಾ ಮೂರು ರೂ. ಇತ್ತು.

ವೈದ್ಯ ವಿನಾಯಕ ರಾವ್ ಭಾಪಟ್, ಬಿ. ಶಾಮ ಶೆಟ್ಟಿ ಬೆಳ್ಳಾರಿ, ರಾ. ಕೃ. ಕುಲಕರ್ಣಿ ಜಿನರಾಳಕರ್ ಆಯುರ್ವೇದಾಚಾರ್ಯ, ವೈದ್ಯ ಯು. ರತ್ನಾಕರ ಶೆಣೈ, ವೈದ್ಯ ಆರ್. ಟಿ. ಬಿ. ಕಾಶ್ಯಪ್, ಡಿ. ಶ್ರೀನಿವಾಸ ತಂತ್ರಿ ಎಗ್ಮೊರೆ ಮದ್ರಾಸ್ ಮೊದಲಾದವರ ಬರೆಹಗಳು ‘ಆಯುರ್ವೇದ’ದಲ್ಲಿ ಪ್ರಕಟವಾಗುತ್ತಿತ್ತು.

(ಕೊಡುಗೆ: ಡಾ. ಬಾಲಕೃಷ್ಣ ಭಟ್)

2 Comments

 1. ukhabbu@gmail.com'

  Uday Kumar Habbu

  July 14, 2018 at 7:32 pm

  ಈ ಮೂರೂ ಹಳೆಯ ಪತ್ರಿಕೆಗಳನ್ನೂ ಅವುಗಳಲ್ಲಿ ಲೇಖನಗಳನ್ನು ಬರೆದಿರುವ ಲೇಖಕರನ್ನೂ ಪರಿಚಯಿಸಿ ಉತ್ತಮ ನುಡಿನಮನಗಳನ್ನು ಬರೆದಿದ್ದೀರಿ. ಚುನಾವಣೆ ಪತ್ರಿಕೆಯಲ್ಲಿ ೧೯೭೦ರಲ್ಲಿ ನನ್ನ ಲೇಖನವೊಂದು ಪ್ರಕಟಗೊಂಡಿತ್ತು.ಮಾಂಜ್ರೇಕರ್ ಎಂಬ ಕಾರವಾರದ ಪತ್ರಿಕಾಕರ್ತರು ಲೇಖನ ಓದಿ “ಚುನಾವಣೆ” ಪತ್ರಿಕೆಗೆ ಕಳಿಸುವಂತೆ ಹೇಳಿದ್ದರು. ಧನ್ಯವಾದಗಳು ಸರ್

 2. muralismtk@gmail.com'

  Muralidhar

  January 16, 2019 at 10:36 pm

  So Nice collection of weekly, monthly books and its détails.

  We expect more books to see in your collections

  Thnk. U

Leave a Reply

Your email address will not be published. Required fields are marked *