Realtime blog statisticsweb statistics
udupibits.in
Breaking News
ಉಡುಪಿ: ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ-ಮಕ್ಕಳ ಆಸ್ಪತ್ರೆಯಲ್ಲಿ ಶಿಶು ಮರಣ ?

ಕೇಂದ್ರ ಸರಕಾರದಿಂದ ಗೋಮಾಂಸ ರಫ್ತು ನಿಷೇಧ !

ಉಡುಪಿ: ಪ್ರಸ್ತುತ ಆಡಳಿತದಲ್ಲಿರುವ ಭಾರತ ಸರಕಾರದ ರಫ್ತು ನೀತಿಯಂತೆ, ಗೋಮಾಂಸ ರಫ್ತು ಮಾಡುವುದನ್ನು ಸರಕಾರ ನಿಷೇಧಿಸಿದೆ ಮತ್ತು ಗೋಮಾಂಸ (ದನ, ಎತ್ತು, ಕರು) ರಫ್ತು ಮಾಡಲು ಸರಕಾರ ಅನುಮತಿ ನೀಡುವುದಿಲ್ಲ ಎಂದು ಕೇಂದ್ರ ಸರಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದಡಿಯಲ್ಲಿರುವ ವಾಣಿಜ್ಯ ಇಲಾಖೆ ಅಧಿಕೃತ ಸ್ಪಷ್ಟನೆ ನೀಡಿದೆ.

ಉಡುಪಿಯ ಮಾಹಿತಿ ಹಕ್ಕು ಕಾರ್ಯಕರ್ತರಾದ ಚರಣ್ ನಾಯಕ್ ಸೂಡ ಅವರು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಕೇಳಿದ ಮಾಹಿತಿ ಕೋರಿಕೆ ಅರ್ಜಿಗೆ ಪ್ರತಿಯಾಗಿ ಮಾಹಿತಿ ನೀಡಿದ ಇಲಾಖೆಯ ಸಾರ್ವಜನಿಕ ಮಾಹಿತಿ ಅಧಿಕಾರಿ ಮತ್ತು  ಅಧೀನ ಕಾರ್ಯದರ್ಶಿ ಪಿ. ಬೆಹೆರ ಅವರು

ಚರಣ್ ನಾಯಕ್ ಅವರು ಜೂನ್ 7ರಂದು ಮಾಹಿತಿ ಹಕ್ಕು ಅರ್ಜಿ ಸಲ್ಲಿಸಿದ್ದರು. ವಾಣಿಜ್ಯ ಇಲಾಖೆಯ ಅಧಿಕೃತರು ಜುಲೈ 10ರಂದು ಮಾಹಿತಿ ನೀಡಿದ್ದು, ಕೇಂದ್ರ ಸರಕಾರ ಗೋಮಾಂಸ ರಫ್ತನ್ನು ನಿಷೇಧಿಸಿದೆ ಮತ್ತು ರಫ್ತು ಮಾಡಲು ಅನುಮತಿ ನೀಡುವುದಿಲ್ಲ ಹಾಗೂ ಇದು ಪ್ರಸ್ತುತ ಆಡಳಿತದಲ್ಲಿರುವ ಭಾರತ ಸರಕಾರದ ರಫ್ತು ನೀತಿಯಾಗಿದೆ ಎಂದು ಸ್ಪಷ್ಟಪಡಿಸಿದೆ.

ಕೇಂದ್ರ ಸರಕಾರ ನೀಡಿದ ಈ ಮಾಹಿತಿಯಿಂದಾಗಿ ಗೋಮಾಂಸ ರಫ್ತಿನ ಸತ್ಯಾಸತ್ಯತೆಯ ಬಗ್ಗೆ ಗೊಂದಲ ಮತ್ತು ಚರ್ಚೆಗೆ ಕಾರಣವಾಗಿದೆ.

 

Leave a Reply

Your email address will not be published. Required fields are marked *