Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಬಿಲ್ಲವ ಸಮಾಜದ ಗುರಿಕಾರ ಎಡ್ಮೇರು ಕರಿಯ ಪೂಜಾರಿ ನಿಧನ

ಉಡುಪಿ: ಮೂಡುಬೆಳ್ಳೆ ಸಮೀಪದ ಎಡ್ಮೇರು ಸಾವಿರಾಳ ಧೂಮಾವತಿ ದೈವಸ್ಥಾನದಲ್ಲಿ 40ಕ್ಕೂ ಅಧಿಕ ವರ್ಷಗಳ ಕಾಲ ಸೇವೆ ಸಲ್ಲಿಸಿದ ಬಿಲ್ಲವ ಸಮುದಾಯದ ಗುರಿಕಾರ, ಹಿರಿಯ ಕೃಷಿಕ ಎಡ್ಮೇರು ಕರಿಯ ಪೂಜಾರಿ (82) ಅವರು ಮರ್ಣೆ ಕುಕ್ಕುಪಲ್ಕೆಯಲ್ಲಿರುವ ತಮ್ಮ ಸ್ವಗೃಹದಲ್ಲಿ ಇಂದು (ಜುಲೈ 16,2018)ನಿಧನರಾದರು.

ಬೆಳ್ಳೆ ಗ್ರಾಮ ಪಂಚಾಯತ್ ಸದಸ್ಯ, ನೀರು ಮತ್ತು ನೈರ್ಮಲ್ಯ ಸಮಿತಿ ಅಧ್ಯಕ್ಷ, ಬಿಜೆಪಿ ಬೆಳ್ಳೆ ಘಟಕದ ಕಾರ್ಯದರ್ಶಿ, ಸಾಮಾಜಿಕ ಕಾರ್ಯಕರ್ತರಾದ ಸುಧಾಕರ ಪೂಜಾರಿ, ‘ವಿಜಯ ಕರ್ನಾಟಕ’ ವರದಿಗಾರ, ಛಾಯಾಗ್ರಾಹಕ, ಪಕ್ಷಿತಜ್ಞ ಉಮೇಶ್ ಕುಕ್ಕುಪಲ್ಕೆ, ಉಪನ್ಯಾಸಕ ರತ್ನಾಕರ ಪೂಜಾರಿ ಸಹಿತ ಆರು ಮಂದಿ ಪುತ್ರರನ್ನು, ಓರ್ವ ಸಹೋದರ, ಮೂವರು ಸಹೋದರಿಯರು ಹಾಗೂ ಅಪಾರ ಬಂಧು ಬಳಗವನ್ನು ಅವರು ಅಗಲಿದ್ದಾರೆ.

ಕರಿಯ ಪೂಜಾರಿಯವರ ನಿಧನಕ್ಕೆ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಟ್ಠಲದಾಸ ಸ್ವಾಮೀಜಿ ಸಂತಾಪ ವ್ಯಕ್ತಪಡಿಸಿದ್ದಾರೆ. ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಲಾಲಾಜಿ ಆರ್. ಮೆಂಡನ್, ಬೆಳ್ಳೆ ಬಿಜೆಪಿ ಅಧ್ಯಕ್ಷರೂ, ಗ್ರಾಮ ಪಂಚಾಯತ್ ಸದಸ್ಯರೂ, ಮಾಜಿ ಅಧ್ಯಕ್ಷರೂ, ಸಾಮಾಜಿಕ ಕಾರ್ಯಕರ್ತರೂ ಆದ ರಾಜೇಂದ್ರ ಶೆಟ್ಟಿ, ಬೆಳ್ಳೆ ಗ್ರಾಮ ಪಂಚಾಯತ್ ಅಧ್ಯಕ್ಷೆ ರಂಜನಿ ಎಸ್.  ಹೆಗ್ಡೆ, ಗ್ರಾಪಂ ಸದಸ್ಯರೂ, ಬೆಳ್ಳೆ ಸೊಸೈಟಿ ಅಧ್ಯಕ್ಷರೂ ಆದ ಶಿವಾಜಿ ಎಸ್. ಸುವರ್ಣ, ತಾಲೂಕು ಪಂಚಾಯತ್ ಸದಸ್ಯೆ ಸುಜಾತಾ ಸುವರ್ಣ, ಗ್ರಾಪಂ ಸದಸ್ಯರಾದ ಗುರುರಾಜ ಭಟ್, ಮಾಜಿ ಜಿ.ಪಂ.ಸದಸ್ಯರಾದ ಜೆರಾಲ್ಡ್ ಫೆರ್ನಾಂಡಿಸ್, ಐಡ ಗಿಬ್ಬ ಡಿ’ಸೋಜಾ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೈವಪಾತ್ರಿ ಬೊಗ್ಗು ಪರವ, ಪಾಣರ ಸಂಘದ ಅಧ್ಯಕ್ಷರಾದ ಸುಧಾಕರ ಪಾಣಾರ, ಬಿಜೆಪಿ ಮುಖಂಡರಾದ ಸಂತೋಷ್ ಕುಮಾರ್ ಬೊಳ್ಜೆ, ಬೆಳ್ಳೆ ಗ್ರಾಪಂ ಪಿಡಿಒ ಶಿವಾನಂದ ಬೆಣ್ಣೂರ, ಬೆಳ್ಳೆ ಗ್ರಾಮ ಲೆಕ್ಕಾಧಿಕಾರಿ ಪ್ರದೀಪ್, ಮಾಹಿತಿ ಹಕ್ಕು ಕಾರ್ಯಕರ್ತರಾದ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ, ಮಾನವ ಹಕ್ಕು ಕಾರ್ಯಕರ್ತರಾದ ಶ್ರೀರಾಮ ದಿವಾಣ ಸಹಿತ ಅನೇಕ ಮಂದಿ ಮೃತರ ಅಂತಿಮ ದರ್ಶನ ಪಡೆದರು.

ಮೃತರ ಅಂತ್ಯ ಸಂಸ್ಕಾರ ಜುಲೈ 17ರಂದು ಪೂರ್ವಾಹ್ನ ಕುಕ್ಕುಪಲ್ಕೆಯಲ್ಲಿ ನಡೆಯಿತು.

Leave a Reply

Your email address will not be published. Required fields are marked *