Realtime blog statisticsweb statistics
udupibits.in
Breaking News
ಉಡುಪಿ: ನೌಕರರಿಗೆ ಕಿರುಕುಳ ಆರೋಪ- ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಮಹೇಶ್ ಐತಾಳ್ ಅಮಾನತಿಗೆ ಶ್ರೀರಾಮ ದಿವಾಣ ಒತ್ತಾಯ

ಉಡುಪಿ ಕೂಸಮ್ಮ ಶಂಭು ಶೆಟ್ಟಿ ಆಸ್ಪತ್ರೆಯಲ್ಲಿ ಮಹಿಳೆಗೆ ಅಪಮಾನ- ಚಿಕಿತ್ಸೆ ನಿರಾಕರಣೆ

ಉಡುಪಿ: ಉಡುಪಿಯ ‘’ಕರ್ನಾಟಕ ಸರಕಾರ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ-ಮಕ್ಕಳ ಆಸ್ಪತ್ರೆ’’ಯಲ್ಲಿನ ವೈದ್ಯೆಯೊಬ್ಬರು ಬಡ ಕುಟುಂಬಕ್ಕೆ ಸೇರಿದ ಮಹಿಳೆಯೊಬ್ಬರಿಗೆ ಅವಮಾನವೆಸಗಿ, ಚಿಕಿತ್ಸೆ ನಿರಾಕರಿಸಿ ಆಸ್ಪತ್ರೆಯಿಂದ ಕಳಿಸಿದ ಅಮಾನವೀಯ ವಿದ್ಯಾಮಾನ ನಡೆದಿದೆ.

ಜುಲೈ 14ರಂದು ಘ          ಟನೆ ನಡೆದಿದೆ. ಶನಿವಾರ ಬೆಳಗ್ಗೆ 10 ಗಂಟೆಗೆ ಅಗತ್ಯ ಚಿಕಿತ್ಸೆಗಾಗಿ ಮಹಿಳೆ ಆಸ್ಪತ್ರೆಗೆ ಬಂದಿದ್ದಾರೆ. ಇತರ ಮಹಿಳೆಯರು ಸರತಿ ಸಾಲಲ್ಲಿ ನಿಂತಿದ್ದ ಕಾರಣ ಮತ್ತು ಬಾಣಂತಿಯರಿಗೆ ಮೊದಲ ಆದ್ಯತೆಯಲ್ಲಿ ಕರೆಯುತ್ತಿದ್ದ ಕಾರಣ ಇವರು ವೈದ್ಯೆಯನ್ನು ಭೇಟಿಯಾಗುವಾಗ 12.15 ಆಗಿದೆ. ಮಹಿಳೆ ತಮ್ಮ ಸಮಸ್ಯೆಯನ್ನು ಹೇಳಿಕೊಂಡ ಕೂಡಲೇ ವೈದ್ಯೆ ‘’ಫ್ರೀ ಆಗ್ತದೆ ಅಂತ ನೀವು ಇಲ್ಲಿಗೆ ಬಂದದ್ದ’’ ಎಂದು ಪ್ರಶ್ನಿಸಿದ್ದಾರೆ. ಇವರು ಸಹಜವಾಗಿಯೇ ‘’ಹೌದು’’ ಎಂದು ಒಪ್ಪಿಕೊಂಡಿದ್ದಾರೆ. ಬಳಿಕ ವೈದ್ಯೆ ಯಾವುದೇ ರೀತಿಯಲ್ಲಿಯೂ ಸ್ಪಂದಿಸದ ಕಾರಣ, ಮಹಿಳೆ ಬೇಸರದಿಂದ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ.

ಮಹಾದಾನಿ ಹಾಜಿ ಅಬ್ದುಲ್ಲಾ ಅವರು ಸರಕಾರಕ್ಕೆ ದಾನ ಮಾಡಿದ ಬಹುಕೋಟಿ ಮೌಲ್ಯದ ಜಮೀನಿನಲ್ಲಿ ಅನಿವಾಸಿ ಉದ್ಯಮಿ ಬಿ.ಆರ್.ಶೆಟ್ಟಿ ಅವರು ಬಡವರಿಗೆ ಉಚಿತ ಚಿಕಿತ್ಸೆ ನೀಡುವುದಾಗಿ ಸರಕಾರದೊಮದಿಗೆ ಒಪ್ಪಂದ ಮಾಡಿಕೊಂಡು ನಿರ್ಮಿಸಿದ ‘’ಕರ್ನಾಟಕ ಸರಕಾರ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ-ಮಕ್ಕಳ ಆಸ್ಪತ್ರೆ’’ಯಲ್ಲಿ ಚಿಕಿತ್ಸೆ ನೀಡುವ ಪ್ರಕ್ರಿಯೆ ಆರಂಭಗೊಂಡು ತಿಂಗಳು ಪೂರ್ಣವಾಗುವ ಮೊದಲೇ, ಆಸ್ಪತ್ರೆಯ ವೈದ್ಯೆಯೊಬ್ಬರು ಚಿಕಿತ್ಸೆ ಪಡೆಯಲು ಬಂದ ಬಡ ಮಹಿಳೆಯನ್ನು ಅಪಮಾನಿಸಿ ಚಿಕಿತ್ಸೆ ನಿರಾಕರಿಸಿದ ಪ್ರಕರಣವೊಂದು ಇದೀಗ ಈ ಮೂಲಕ ಬಹಿರಂಗಗೊಂಡಂತಾಗಿದೆ.

ಇಂಥ ಬೇರೆ ಘಟನೆಗಳೂ ಈ ಆಸ್ಪತ್ರೆಯಲ್ಲಿ ನಡೆದಿರುವ ಸಾಧ್ಯತೆಗಳಿವೆ. ನೊಂದವರು, ಅವಕಾಶ ವಂಚಿತರು ತಮ್ಮ ಹಕ್ಕಿನ ಅರಿವಿಲ್ಲದ ಕಾರಣ ಮತ್ತು ಅನ್ಯಾಯವನ್ನು ಎದುರಿಸಿ ಹೋರಾಡಲು ಹಿಂದೇಟು ಹಾಕುತ್ತಿರುವುದರಿಂದ ಬಹುತೇಕ ಯಾವುದೇ ಘಟನೆಗಳು ಬೆಳಕಿಗೆ ಬರುತ್ತಿಲ್ಲ ಎನ್ನಲಾಗಿದೆ.

 

 

Leave a Reply

Your email address will not be published. Required fields are marked *