Realtime blog statisticsweb statistics
udupibits.in
Breaking News
ಉಡುಪಿ: ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ-ಮಕ್ಕಳ ಆಸ್ಪತ್ರೆಯಲ್ಲಿ ಶಿಶು ಮರಣ ?

ಶಿರ್ವ ಕಾಲೇಜಿನ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾಗಿ ಅರುಣ್ ಬರ್ಬೋಝ ಆಯ್ಕೆ

ಉಡುಪಿ: ಶಿರ್ವ ಸಂತ ಮೇರಿ ಕಾಲೇಜಿನ ರಕ್ಷಕ-ಶಿಕ್ಷಕ ಸಂಘದ 2018-19ನೇ ಸಾಲಿನ ಅಧ್ಯಕ್ಷರಾಗಿ ಅರುಣ್ ಬರ್ಬೋಝ ಬಂಟಕಲ್ ಅವರು ಆಯ್ಕೆಯಾಗಿದ್ದಾರೆ.

ಇಂದು (ಜುಲೈ 24, 2018) ಅಪರಾಹ್ನ ಕಾಲೇಜಿನ ಸಮಾಲೋಚನಾ ಸಭಾಂಗಣದಲ್ಲಿ ಪ್ರಾಂಶುಪಾಲರಾದ ರಾಜನ್ ವಿ.ಎನ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಕ್ಷಕ-ಶಿಕ್ಷಕ ಸಂಘದ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ನೀಲ್ ಕ್ವಾಡ್ರಸ್ ಹಾಗೂ ಜೊತೆ ಕಾರ್ಯದರ್ಶಿಯಾಗಿ ಶಾಂತಿ ಅಂದ್ರಾದೆ ಅವರನ್ನು ಆಯ್ಕೆ ಮಾಡಲಾಯಿತು. ಶ್ರೀರಾಮ ದಿವಾಣ ಮೂಡುಬೆಳ್ಳೆ ಸಹಿತ ಐವರು ಕಾರ್ಯಕಾರೀ ಸಮಿತಿ ಸದಸ್ಯರು ಹಾಗೂ ಪ್ರೊ.ವಿಠಲ ನಾಯಕ್, ಪ್ರೊ.ಥೋಮಸ್ ಜಿ.ಎಂ., ಲೆ/ಪ್ರವೀಣ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *