Realtime blog statisticsweb statistics
udupibits.in
Breaking News
ಉಡುಪಿ: ನೌಕರರಿಗೆ ಕಿರುಕುಳ ಆರೋಪ- ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಮಹೇಶ್ ಐತಾಳ್ ಅಮಾನತಿಗೆ ಶ್ರೀರಾಮ ದಿವಾಣ ಒತ್ತಾಯ

‘ನಾಡಪ್ರೇಮಿ’ ಯಂ.ವಿ. ಬಳ್ಳುಳ್ಳಾಯ ನೆನಪಿನ ಪುನರವಲೋಕನ

ಕಾಸರಗೋಡು: ಯಕ್ಷತೂಣೀರ ಸಂಪ್ರತಿಷ್ಠಾನ ( ರಿ ) ಕೋಟೂರು ಇದರ ವತಿಯಿಂದ ಮಾತೃ ಸಂಸ್ಥೆ ಶ್ರೀ ಕಾರ್ತಿಕೇಯ ಕಲಾನಿಲಯದ ಸ್ಥಾಪಕ ಕಾರ್ಯದರ್ಶಿ, ಪ್ರಮುಖ ನಾಟಕ ನಟರಾಗಿದ್ದ ದಿ/ ಯಂ. ವಿ. ಬಳ್ಳುಳ್ಳಾಯ ಇವರ ದಿವ್ಯ ಚೇತನಕ್ಕೆ ಶ್ರದ್ಧಾಂಜಲಿಗಳೊಂದಿಗೆ “ನೆನಪಿನ ಪುನರವಲೋಕನ” ಕಾರ್ಯಕ್ರಮವು ಮುಳಿಯಾರು ಶ್ರೀ ಸುಬ್ರಹ್ಮಣ್ಯಸ್ವಾಮೀ ಕ್ಷೇತ್ರ ಸಭಾಂಗಣದಲ್ಲಿ ಇತ್ತೀಚೆಗೆ ಜರಗಿತು.

ಸೀತಾರಾಮ ಬಳ್ಳುಳ್ಳಾಯ ಅವರ ಅದ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಹಿರಿಯರಾದ ಅಡ್ಕ ಗೋಪಾಲಕೃಷ್ಣ ಭಟ್ ಅವರು ದಿ / ಯಂ. ವಿ. ಬಳ್ಳುಳ್ಳಾಯ ಇವರ ಗಡಿನಾಡು ಕಾಸರಗೋಡಿನ ಕನ್ನಡ ಹೋರಾಟ, ಪತ್ರಿಕೋದ್ಯಮ, ಕಲಾಸೇವೆ, ಸಾಮಾಜಿಕ ರಂಗ ಹೀಗೆ ಹತ್ತು ಹಲವು ಕ್ಷೇತ್ರಗಳ ಬಗ್ಗೆ ಸಮಗ್ರ ಚಿತ್ರಣವನ್ನು ವಿವರಿಸಿ ನೆನಪಿನ ಸರಮಾಲೆಯನ್ನು ಬಿತ್ತರಿಸಿದರು. ವೇಣು ಕಾಸರಗೋಡು ಅವರು ಯಂ. ವಿ. ಬಳ್ಳುಳ್ಳಾಯರ ಪ್ರಭಾವೀ ವ್ಯಕ್ತಿತ್ವದ ಬಗ್ಗೆ ಮಾತನಾಡಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಪೆರಡಂಜಿ ಗೋಪಾಲ ಕೃಷ್ಣ ಭಟ್ ಅವರು ರಂಗ ನಟ ಯಂ. ವಿ. ಬಳ್ಳುಳ್ಳಾಯರೊಂದಿಗಿನ ನಾಟಕ ಕ್ಷೇತ್ರದ ಬಗ್ಗೆ ಮಾತನಾಡುತ್ತಾ ಕಾರ್ತಿಕೇಯ ಕಲಾನಿಲಯ ಮತ್ತು ಯಕ್ಷತೂಣೀರ ಸಂಪ್ರತಿಷ್ಠಾನಕ್ಕೆ ಅವರು ನೀಡಿದ ಕೊಡುಗೆಗಳ ಬಗ್ಗೆ ಪುನರವಲೋಕನ ಮಾತುಗಳನ್ನಾಡಿದರು. ಎ ಜಿ ನಾಯರ್, ವೆಂಕಟ ಭಟ್ ಎಡನೀರು, ಭಾಗೀರತಿ ಟೀಚರ್ ಅವರು ಸಂಸ್ಮರಣಾ ಭಾಷಣ ಮಾಡಿದರು.

ಯಂ. ವಿ. ಬಳ್ಳುಳ್ಳಾಯ ಅವರು ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸಿದ ರಾಜ್ಯ ರಾಜ್ಯಾಂತರಗಳಲ್ಲಿ ಸುಪ್ರಸಿದ್ಧವಾದ ಅಡ್ಕ ಗೋಪಾಲಕೃಷ್ಣ ಭಟ್ ಅವರು ರಚಿಸಿ ನಿರ್ದೇಶಿಸಿದ ‘ಮಾಂಗಲ್ಯ ಭಾಗ್ಯ’ ಎಂಬ ನಾಟಕದ ಕೆಲವು ಭಾಗಗಳನ್ನು ರಂಗದಲ್ಲಿ ಅಭಿನಯಿಸಿ ಪ್ರಸ್ತುತಪಡಿಸಲಾಯಿತು. ಅಮ್ಮು ಮಾಸ್ಟರ್ ಅಮ್ಮಂಗೋಡು ಅವರು ಹಿನ್ನೆಲೆ ಸಂಗೀತವನ್ನು ನುಡಿಸಿ ನಾಟಕವನ್ನು ಯಶಸ್ವಿಗೊಳಿಸಿದರು.
ಪೆರಡಂಜಿ ಗೋಪಾಲ ಕೃಷ್ಣ ಭಟ್, ಅನುಪಮಾ ರಾಘವೇಂದ್ರ ಉಡುಪುಮೂಲೆ, ಡಾ ಶಿವಕುಮಾರ್ ಅಡ್ಕ, ಮುರಳಿ ಸ್ಕಂದ, ಕೃಷ್ಣ ಭಟ್ ಅಡ್ಕ, ಸುಬ್ರಹ್ಮಣ್ಯ ಭಟ್ ಅಡ್ಕ, ಅನಿರುದ್ಧ ವಾಸಿಷ್ಥ ಶರ್ಮ ಇವರ ಅಭಿನಯದೊಂದಿಗೆ ನಾಟಕವು ಸಂಪನ್ನವಾಯಿತು.

ಗೋವಿಂದಬಳ್ಳಮೂಲೆ ಪ್ರಾಸ್ಥಾವಿಕ ನುಡಿಗಳನ್ನಾಡಿ ನಾಟಕದ ಹಾಡುಗಳನ್ನು ಹಾಡಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಈಶ್ವರ ಭಟ್ ಬಳ್ಳಮೂಲೆ, ರಾಜೇಶ್ವರಿ ಬಳ್ಳಮೂಲೆ, ವಿಜಯ ಮುರಳಿ, ಹರಿಕೃಷ್ಣ ಪೆರಡಂಜಿ , ರಾಘವೇಂದ್ರ ಉಡುಪುಮೂಲೆ, ಅನಂತಪದ್ಮನಾಭ ಮಯ್ಯ ಇವರು ಸಾಂದರ್ಭಿಕ ಸಹಕಾರವನ್ನಿತ್ತರು. ಡಾ// ಶಿವಕುಮಾರ್ ಅಡ್ಕ ಅವರು ಸ್ವಾಗತಿಸಿದರು. ಸೀತಾರಾಮ ಬಳ್ಳುಳ್ಳಾಯ ಅವರು ಅಧ್ಯಕ್ಷಸ್ಥಾನ ವಹಿಸಿ ನೆನಪಿನ ನುಡಿಗಳನ್ನಾಡಿದರು.

Leave a Reply

Your email address will not be published. Required fields are marked *