Realtime blog statisticsweb statistics
udupibits.in
Breaking News
# ಮಾಹಿತಿ ಹಕ್ಕು ಕಾಯಿದೆ ಜಾರಿಯಾಗಿ 13 ವರ್ಷ ಕಳೆದರೂ ಸಾರ್ವಜನಿಕ ಮಾಹಿತಿ ಅಧಿಕಾರಿಯನ್ನು ನೇಮಕ ಮಾಡದ ಬೀದರ್ ಜಿಲ್ಲಾ ಸರಕಾರಿ ಆಸ್ಪತ್ರೆ !

ರಸ್ತೆಯಲ್ಲಿ ಬಿದ್ದಿದ್ದ ವ್ಯಕ್ತಿಯ ರಕ್ಷಣೆ

ಉಡುಪಿ: ರಾಜ್ಯ ಹೆದ್ದಾರಿಯಲ್ಲಿ ಅಸ್ವಸ್ಥಗೊಂಡು ಬಿದ್ದಿದ್ದ ವ್ಯಕ್ತಿಯೋರ್ವರನ್ನು ಸ್ಥಳೀಯರು ಉಡುಪಿ ಜಿಲ್ಲಾಸ್ಪತ್ರೆಗೆ ಸಾಗಿಸಿದ ಘಟನೆ ಜು. 31ರಂದು ಮಧ್ಯಾಹ್ನ ನಡೆದಿದೆ.

ಉಡುಪಿ-ಮೂಡುಬೆಳ್ಳೆ ರಾಜ್ಯ ಹೆದ್ದಾರಿಯ ನೆಲ್ಲಿಕಟ್ಟೆ-ತೋಕೋಳಿ ಬಳಿ ವ್ಯಕ್ತಿಯೊಬ್ಬರು ಅಸ್ವಸ್ಥಗೊಂಡು ರಸ್ತೆಯಲ್ಲಿ ಬಿದ್ದಿದ್ದರು. ಇದನ್ನು ಕಂಡ ರಿಕ್ಷಾ ಚಾಲಕ ದೀಪಕ್‍ ಮೂಡುಬೆಳ್ಳೆ ಅವರು ವ್ಯಕ್ತಿಯನ್ನು ಎತ್ತಿ ರಸ್ತೆ ಬದಿಯಲ್ಲಿ ನೆರಳಿಗೆ ಮಲಗಿಸಿ ನೀರು ಕೊಟ್ಟಿರುತ್ತಾರೆ. ಬಳಿಕ ಅವರು ಈ ಬಗ್ಗೆ ಬೆಳ್ಳೆ ಗ್ರಾಮ ಪಂಚಾಯತ್ ಸದಸ್ಯ, ಮಾಜಿ ಅಧ್ಯಕ್ಷ ರಾಜೇಂದ್ರ ಶೆಟ್ಟಿ ಅವರ ಗಮನಕ್ಕೆ ತಂದಿದ್ದಾರೆ.

ವಿಷಯ ತಿಳಿದಾಕ್ಷಣ ರಾಜೇಂದ್ರ ಶೆಟ್ಟಿ ಅವರು ತಮ್ಮ ಆಪ್ತ ಬಳಗದೊಂದಿಗೆ ಕಾರ್ಯಪ್ರವೃತ್ತರಾಗಿದ್ದು ಸ್ಥಳಕ್ಕೆ ಧಾವಿಸಿದ್ದಾರೆ. ಅವರು ಆ್ಯಂಬುಲೆನ್ಸ್‍ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಶಿರ್ವ ಪಿಸಿ ಎಚ್‍.ಸಿ. ದೊಣ್ಣಗುಡ್ಡ ಅವರು ಆಗಮಿಸಿ ಪಿಎಸ್‍ಐ ಅವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದ 108 ಆ್ಯಂಬುಲೆನ್ಸ್‍ ಮೂಲಕ ವ್ಯಕ್ತಿಯನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು.

Leave a Reply

Your email address will not be published. Required fields are marked *