Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ವೇದ ಸಂಬಂಧಿ ಪುಸ್ತಕಗಳ ಪ್ರದರ್ಶನ

# ‘ಸತ್ಯಾರ್ಥ ಪ್ರಕಾಶ’, ಶ್ರೀಮತ್ ಪರಮಹಂಸ ಪರಿವ್ರಾಜಕಾಚಾರ್ಯ ಸ್ವಾಮೀ ದಯಾನಂದ ಸರಸ್ವತಿ ಅವರು ರಚಿಸಿದ ಗ್ರಂಥ. ವೇದಗಳು, ಧರ್ಮ, ದೇವರು, ಶಿಕ್ಷಣ, ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ವಿಚಾರಗಳನ್ನು ಹೊಂದಿರುವ ಕ್ರಾಂತಿಕಾರಿ, ಸರ್ವಶ್ರೇಷ್ಠ, ಪವಿತ್ರ ಗ್ರಂಥವಾಗಿದೆ ‘ಸತ್ಯಾರ್ಥ ಪ್ರಕಾಶ’.

ಆರ್ಯ ಸಮಾಜದ ಸ್ಥಾಪಕರಾದ ಸ್ವಾಮೀ ದಯಾನಂದ ಸರಸ್ವತಿ ಅವರು ಹಿಂದಿಯಲ್ಲಿ ರಚಿಸಿದ ಈ ಮೂಲ ಸರ್ವ ಮಾನವ ಜನಾಂಗದ ಧರ್ಮ ಗ್ರಂಥವನ್ನು ವೇದ ವಿಜ್ಞಾನಿ, ಶತಾಯಿಷಿ, ಪಂಡಿತ ಸುಧಾಕರ ಚತುರ್ವೇದಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಉಪೇಂದ್ರ ಭೂಪಾಲ ಅವರು ಸಂಪಾದಕತ್ವದಲ್ಲಿ ಪ್ರಕಟವಾದ ಗ್ರಂಥವನ್ನು, ವೈ.ವಿ. ಕೇಶವ ಮೂರ್ಇತ ಅವರು ತಮ್ಮ ಪ್ರಜಾ ಪ್ರಿಂಟರ್ಸ್ ಪ್ರೈವೆಟ್ ಲಿಮಿಟೆಡ್ ನಲ್ಲಿ ಮುದ್ರಿಸಿದ್ದಾರೆ.

ಬೆಂಗಳೂರಿನ ಆರ್ಯ ಸಮಾಜ ಇದನ್ನು ಪ್ರಕಟಿಸಿದೆ. 780+32 ಪುಟಗಳ ಈ ಗ್ರಂಥ, ‘ಸತ್ಯಾರ್ಥ ಪ್ರಕಾಶ’ದ ಉತ್ತರಾರ್ಧ ಗ್ರಂಥವಾಗಿದೆ. 1909ರಲ್ಲಿ ಮೊದಲ ಮುದ್ರಣ ಕಂಡ ಇದು, ಬಳಿಕ 1939, 1955, 1974 ಮತ್ತು 1990ರಲ್ಲಿ ಮರು ಮುದ್ರಣಗಳನ್ನು ಕಂಡಿದೆ. ಬೆಲೆ: 160.00 ರೂಪಾಯಿಗಳು.

# ‘ರಾಷ್ಟ್ರ ಪುರುಷ ಯೋಗಿರಾಜ ಮಹರ್ಷಿ ದಯಾನಂದ ಸರಸ್ವತಿ’ ಗ್ರಂಥವು, ಸತ್ಯ ಸನಾತನ ವೈದಿಕ ಧರ್ಮದ ಪುನರುಸ್ಥಾಪಕರಾದ ವೇದಕಾನನ ವಿಹಾರೀ ಆದಿತ್ಯ ಬ್ರಹ್ಮಚಾರೀ ಮಹರ್ಷಿಪ್ರವರ ಶ್ರೀ ಮದ್ದಯಾನಂದ ಸರಸ್ವತಿ (1824-1883) ಅವರ ಜೀವನ ಚರಿತ್ರೆಯಾಗಿದೆ. ವೇದ ವಿಜ್ಞಾನಿ, ಶತಾಯುಷಿ ಪಂಡಿತ ಸುಧಾಕರ ಚತುರ್ವೇದಿ ಬೆಂಗಳೂರು ಅವರು ಗ್ರಂಥಕರ್ತರು.

ಉಡುಪಿಯ ‘ವೇದ ಪ್ರಕಾಶನ’ವು ಈ ಗ್ರಂಥವನ್ನು ಪ್ರಕಟಿಸಿದೆ. 1995ರಲ್ಲಿ ತೃತೀಯ ಮುದ್ರಣವನ್ನು ಕಂಡಿರುವ 343+14 ಪುಟಗಳ ಗ್ರಂಥದ ಮುಖಬೆಲೆ 45 ರೂಪಾಯಿಗಳು.

# ‘ವೇದಜ್ಯೋತಿ’ (ಚತುರ್ವೇದ ಶತಕ) ಗ್ರಂಥವು, ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ ಎಂಬ ನಾಲ್ಕು ವೇದಗಳಿಂದ ಆಯ್ದ ತಲಾ ನೂರು ನೂರು ಮಂತ್ರಗಳಂತೆ ಒಟ್ಟು ನಾನ್ನೂರು ವೇದ ಮಂತ್ರಗಳಿರುವ ಗ್ರಂಥವಾಗಿದೆ. ಈ ನಾನ್ನೂರು ವೇದ ಮಂತ್ರಗಳ ಜೊತೆಗೆ ಪ್ರತೀ ಪದದ ಅರ್ಥ ಮತ್ತು ಮಂತ್ರದ ಭಾವಾರ್ಥಗಳಿಂದ ಕೂಡಿದೆ.

ಸ್ವಾಮೀ ಅಚ್ಯುತಾನಂದ ಸರಸ್ವತೀ ಅವರು ಹಿಂದಿಯಲ್ಲಿ ರಚಿಸಿರುವ ಈ ಮೂಲ ಗ್ರಂಥವನ್ನು, ‘ಶ್ರುತಿಪ್ರಿಯ’ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಮೈಸೂರು ಆರ್ಯ ಸಮಾಜದ ಪ್ರಭುಮುನಿ ವಾನಪ್ರಸ್ಥ ಅವರು ಗ್ರಂಥವನ್ನು ಪ್ರಕಟಿಸಿದ್ದಾರೆ. ಬೆಂಗಳೂರಿನ ಶ್ರೀ ವೀಣಾ ಪ್ರಿಂಟರ್ಸ್ ನಲ್ಲಿ ಗ್ರಂಥವನ್ನು ಮುದ್ರಿಸಲಾಗಿದೆ. 254+14 ಪುಟಗಳ ಗ್ರಂಥದ ಮುಖಬೆಲೆ 40 ರೂಪಾಯಿಗಳಾಗಿವೆ. 1995ರ ಎಪ್ರಿಲ್ ನಲ್ಲಿ ಪ್ರಥಮ ಮುದ್ರಣವನ್ನು ಕಂಡಿದೆ.

# ‘ವೇದ ಪ್ರಕಾಶ’ವು ಉಡುಪಿಯಿಂದ ಪ್ರಕಟವಾಗುತ್ತಿದ್ದ ಮಾಸಿಕ. 1975ರಲ್ಲಿ ಆರಂಭವಾದ ‘ವೇದ ಪ್ರಕಾಶ’ ದಶಕಕ್ಕೂ ಅಧಿಕ ಕಾಲ ನಿರಂತರವಾಗಿ ಪ್ರಕಟವಾಗುತ್ತಿತ್ತು. ಬಳಿಕ ಪ್ರಕಟಣೆ ಸ್ಥಗಿತವಾಯಿತು. ಆಗಾಗ ವೇದ ಸಂಬಂಧವಾದ ವಿಶೇಷ ಸಂಚಿಕೆಗಳೂ ಪ್ರಕಟವಾಗುತ್ತಿತ್ತು.

ಉಡುಪಿಯ ವೈದಿಕ ಸಾಹಿತ್ಯ ಪ್ರಕಾಶನ ಸಮಿತಿಯು ವೇದ ಪ್ರಕಾಶವನ್ನು ಪ್ರಕಟಿಸುತ್ತಿತ್ತು. ಪಂಡಿತ ಸುಧಾಕರ ಚತುರ್ವೇದಿ ಅವರು ಸಂಪಾದಕರಾಗಿದ್ದರು. ಪಿ. ಸಂಜೀವ ಕಾಮತ್ ಅವರು ಪ್ರಕಾಶಕರಾಗಿದ್ದರು. ಮಂಗಳೂರಿನ ಕೆ.ಗಣೇಶ ಪೈ ಅವರು ತಮ್ಮ ಗಣೇಶ್ ಪ್ರಿಂಟರ್ಸ್ ನಲ್ಲಿ ಇದನ್ನು ಪ್ರಕಟಿಸುತ್ತಿದ್ದರು.

 

Leave a Reply

Your email address will not be published. Required fields are marked *