Realtime blog statisticsweb statistics
udupibits.in
Breaking News
ಉಡುಪಿ: ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ-ಮಕ್ಕಳ ಆಸ್ಪತ್ರೆಯಲ್ಲಿ ಶಿಶು ಮರಣ ?

ಹೋಟೆಲ್ ಉದ್ಯಮಿ ಕೃಷ್ಣಮೂರ್ತಿ ಭಟ್ ನಿಧನ

ಉಡುಪಿ: ಹೋಟೆಲ್ ಉದ್ಯಮಿ, ಮೂಡುಬೆಳ್ಳೆ ಸಮೀಪದ ಎಡ್ಮೇರು ನಿವಾಸಿ ಕೃಷ್ಣಮೂರ್ತಿ ಭಟ್ (85) ಅವರು ಅಲ್ಪಕಾಲದ ಅಸೌಖ್ಯದಿಂದ ಜುಲೈ 6ರಂದು ನಿಧನ ಹೊಂದಿದರು. ಅವರು ಪತ್ನಿ, ಬೆಳ್ಳೆ ಗ್ರಾಮ ಪಂಚಾಯತ್ ಸದಸ್ಯ, ಬಿಜೆಪಿ ಬೆಳ್ಳೆ ಸ್ಥಾನೀಯ ಸಮಿತಿ ಮಾಜಿ ಅಧ್ಯಕ್ಷ ಗುರುರಾಜ್ ಭಟ್ ಸಹಿತ ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಅವರು ಹೈದರಾಬಾದ್, ಮುಂಬಯಿ, ಬೆಂಗಳೂರು, ಶಿರ್ವ, ಬಂಟಕಲ್ಲಿನಲ್ಲಿ ಹೊಟೇಲ್/ಕ್ಯಾಂಟೀನ್ ಉದ್ಯಮವನ್ನು ಸುಧೀರ್ಘ ಕಾಲ ನಡೆಸಿದ್ದರು. ‘ಉಡುಪಿ ಕೃಷ್ಣ’ ಹೆಸರಿನಲ್ಲಿ ಅವರು ನಡೆಸುತ್ತಿದ್ದ ಹೊಟೇಲ್‌ಗಳು ಜನಪ್ರಿಯತೆ ಗಳಿಸಿದ್ದವು. ಅವರು ಉತ್ತಮ ಪಾಕತಜ್ಞರೂ ಆಗಿದ್ದರು.

ಕೃಷ್ಣಮೂರ್ತಿ ಭಟ್ಟರ ನಿಧನಕ್ಕೆ ಕೇಮಾರು ಶ್ರೀ ಈಶ ವಿಟ್ಠಲದಾಸ ಸ್ವಾಮೀಜಿ, ಹಿರಿಯ ಸಾಹಿತಿ ಮುದ್ದು ಮೂಡುಬೆಳ್ಳೆ, ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಉಡುಪಿ ಶಾಸಕ ರಘುಪತಿ ಭಟ್, ಉದ್ಯಮಿ, ಬಿಜೆಪಿ ನಾಯಕ ಸುರೇಶ್ ಶೆಟ್ಟಿ ಗುರ್ಮೆ, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶ್ರೀಶ ನಾಯಕ್, ಆಗಮ ಪಂಡಿತ ಕೇಂಞ ಶ್ರೀಧರ ತಂತ್ರಿ, ಬಿಜೆಪಿ ಬೆಳ್ಳೆ ಸ್ಥಾನೀಯ ಸಮಿತಿ ಅಧ್ಯಕ್ಷ ರಾಜೇಂದ್ರ ಶೆಟ್ಟಿ, ಕಾರ‍್ಯದರ್ಶಿ ಸುಧಾಕರ ಪುಜಾರಿ ಸಂತಾಪ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *