Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಮೂಡುಬೆಳ್ಳೆ: ಅಪ್ರಾಪ್ತನಿಗೆ ಕಿರುಕುಳ- ಪೊಲೀಸರ ಜಾಣಮೌನ !

ಉಡುಪಿ: ಯುವಕನೋರ್ವ ಅಪ್ರಾಪ್ತ ಪ್ರಾಯದ ಬಾಲಕನ ಜೊತೆಗೆ ವಿಕೃತವಾಗಿ ನಡೆದುಕೊಂಡ ಘಟನೆ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಮೂಡುಬೆಳ್ಳೆ ಸಮೀಪದ ತಿರ್ಲಪಲ್ಕೆಯಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.

ಮೂರು ದಿನದ ಹಿಂದೆ ಘಟನೆ ನಡೆದಿದೆ. ಹೆತ್ತವರು ಹುಡುಗನನ್ನು ಸಾಮಾನು ತರಲೆಂದು ಮನೆಯಿಂದ ಅನತಿ ದೂರದಲ್ಲಿರುವ ಅಂಗಡಿಗೆ ಕಳಿಸಿಕೊಟ್ಟಿದ್ದಾರೆ. ಅಂಗಡಿಗೆಂದು ತಿರ್ಲಪಲ್ಕೆಗೆ ಬಂದ ಹುಡುಗನನ್ನು ಯುವಕನೋರ್ವ ಮನೆಗೆ ಬಿಡುವುದಾಗಿ ನಂಬಿಸಿ ಬೈಕಿನಲ್ಲಿ ಕುಳ್ಳಿರಿಸಿ ಕಾಡಿಗೆ ಕರೆದೊಯ್ದು ಅನುಚಿತವಾಗಿ ನಡೆದುಕೊಂಡನೆಂದು ಹೇಳಲಾಗಿದೆ.

ಸಂತ್ರಸ್ತ ಬಾಲಕ, ಮೂಡುಬೆಳ್ಳೆಯ ಶಾಲೆಯೊಂದರಲ್ಲಿ ಪೂರ್ವ ಪ್ರಾಥಮಿಕ ತರಗತಿಯಲ್ಲಿ ಕಲಿಯುತ್ತಿದ್ದಾನೆ. ಬಾಲಕನ ಜೊತೆ ಅಸಭ್ಯವಾಗಿ ನಡೆದುಕೊಂಡ ಬಗ್ಗೆ ಬಾಲಕ ಮನೆಗೆ ಬಂದು ಮನೆಯವರಲ್ಲಿ ತಿಳಿಸಿದ್ದು, ಈ ಬಗ್ಗೆ ಯುವಕನನ್ನು ಪ್ರಶ್ನಿಸಲು ಬಾಲಕನ ಮನೆಯವರೋರ್ವರು ಯುವಕನ ಬಳಿಗೆ ತೆರಳಿ ಪ್ರಶ್ನಿಸಿದಾಗ, ಯುವಕ ಪ್ರಶ್ನಿಸಿದವರ ಮೇಲೆಯೇ ಹಲ್ಲೆ ನಡೆಸಿದ್ದಾನೆ ಎಂದು ದೂರಲಾಗಿದೆ.

ಈ ಬಗ್ಗೆ ಸಂತ್ರಸ್ತ ಬಾಲಕನ ಅಜ್ಜ ಪೊಲೀಸರಿಗೆ ಮಾಹಿತಿ ನೀಡಿದ್ದರೂ, ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ದೂರಲಾಗಿದೆ.

ಯಾವುದೇ ಉದ್ಯೋಗವಿಲ್ಲದೆ ತಿರ್ಲಪಲ್ಕೆ ಪರಿಸರದಲ್ಲಿ ಕುಳಿತುಕೊಂಡಿರುವ ಯುವಕನ ಅಸಭ್ಯ ನಡವಳಿಕೆ ಬಹಿರಂಗಗೊಂಡ ಬಳಿಕ ಪರಿಸರ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ. ಪರಿಸರವಾಸಿ ಮನೆಯವರು ಇದೀಗ ತಮ್ಮ ತಮ್ಮ ಮನೆಗಳ ಮಕ್ಕಳನ್ನು ಒಂಟಿಯಾಗಿ ಶಾಲೆಗಾಗಲೀ, ಅಂಗಡಿಗಳಿಗಾಗಲೀ ಕಳುಹಿಸಲು ಹಿಂದೇಟು ಹಾಕುವ ಪರಿಸ್ಥಿತಿ ಸೃಷ್ಟಿಯಾಗಿದೆ.

ಯಾವುದೇ ಕೆಲಸ ಮಾಡದೆ ಮೊಬೈಲ್ ಒತ್ತುತ್ತಾ ಬಸ್ ನಿಲ್ದಾಣದಲ್ಲಿ ಕುಳಿತುಕೊಂಡು ಟೈಂಪಾಸ್ ಮಾಡುತ್ತಾ ಸಮಾಜ ಕಂಟಕರಾಗಿ ಬೆಳೆಯುತ್ತಿರುವವರಿಗೆ ಕಡಿವಾಣ ಹಾಕುವಲ್ಲಿ ಶಿರ್ವ ಪೊಲೀಸ್ ಗಸ್ತು ವಿಫಲವಾಗಿದೆ ಎಂದೂ ಸ್ಥಳೀಯರು ದೂರಿದ್ದಾರೆ.

Leave a Reply

Your email address will not be published. Required fields are marked *