Realtime blog statisticsweb statistics
udupibits.in
Breaking News
# ಮಾಹಿತಿ ಹಕ್ಕು ಕಾಯಿದೆ ಉಲ್ಲಂಘನೆ ಮಾಡಿದವರಿಗೆ ದಂಡ, ಅರ್ಜಿದಾರರಿಗೆ ಪರಿಹಾರ ಕೊಡಿಸುವಲ್ಲಿ ರಾಜ್ಯ ಮಾಹಿತಿ ಆಯುಕ್ತರುಗಳ ಹಿಂದೇಟು: ಶ್ರೀರಾಮ ದಿವಾಣ ಆರೋಪ.

ಮಳೆ-ಗಾಳಿ: ಮೂಡುಬೆಳ್ಳೆ, ಕಟ್ಟಿಂಗೇರಿಯಲ್ಲಿ ಮರ ಬಿದ್ದು ರಸ್ತೆ ಸಂಚಾರ ಸ್ಥಗಿತ, ವಿದ್ಯುತ್ ಸಂಪರ್ಕ ಕಡಿತ- ಕುಂತಳನಗರದಲ್ಲಿ ಮನೆ ಧ್ವಂಸ

ಉಡುಪಿ: ಮಳೆ ಮತ್ತು ಗಾಳಿ ಕಾರಣ, ಉಡುಪಿ-ಮೂಡುಬೆಳ್ಳೆ-ಕಾರ್ಕಳ ರಾಜ್ಯಹೆದ್ದಾರಿಯ ಮೂಡುಬೆಳ್ಳೆ ಬಳಿ ಪಡುಬೆಳ್ಳೆ ಕ್ರಾಸ್ ಪಕ್ಕ ರಸ್ತೆ ಬದಿಯ ಬೃಹತ್ ಮರವೊಂದು ಇಂದು (ಆಗಸ್ಟ್ 13) ಮಧ್ಯಾಹ್ನ ಬುಡ ಸಹಿತ ರಸ್ತೆಗಡ್ಡವಾಗಿ ಬಿದ್ದು ಗಂಟೆಗಳ ಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತು.

ಮೂಡುಬೆಳ್ಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಟ್ಟಿಂಗೇರಿ ಬಳಿ ರಸ್ತೆಗಡ್ಡವಾಗಿ ಮರ ಬಿದ್ದು ರಸ್ತೆ ಸಂಚಾರ ಸ್ಥಗಿತಗೊಂಡಿದ್ದು, ಮಣಿಪುರ ಮತ್ತು ಬೆಳ್ಳೆ ಗ್ರಾಮದ ಗಡಿ ಭಾಗವಾದ ಕುಂತಳನಗರದಲ್ಲಿ ಮನೆಯೊಂದರ ಮೇಲೆ ಮರ ಬಿದ್ದು ಮನೆ ಧ್ವಂಸಗೊಂಡ ಘಟನೆ ನಡೆದಿದೆ.

ಮೂಡುಬೆಳ್ಳೆ ಬಳಿ ರಸ್ತೆಗಡ್ಡವಾಗಿ ಬಿದ್ದ ಮರವನ್ನು ಮೆಸ್ಕಾಂ ಸಿಬ್ಬಂದಿಗಳು ಹಾಗೂ ಗ್ರಾಪಂ ಸದಸ್ಯ ರಾಜೇಂದ್ರ ಶೆಟ್ಟಿ ಸಹಿತ ಸ್ಥಳೀಯ ನಾಗರೀಕರು ಸೇರಿ ತೆರವುಗೊಳಿಸಿದ್ದರು. ಇಲ್ಲಿ ಮರ ವಿದ್ಯುತ್ ತಂತಿಯ ಮೇಲೆ ಬಿದ್ದ ಕಾರಣ, ಪರಿಸರದಲ್ಲಿ ವಿದ್ಯುತ್ ಸಂಪರ್ಕವೂ ಹೋಗಿತ್ತು. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೆಲವು ತುರ್ತು ಕ್ರಮಗಳನ್ನು ತೆಗೆದುಕೊಂಡರು.

ಮೆಸ್ಕಾಂ ಮತ್ತು ಅರಣ್ಯ ಇಲಾಖಾ ಅಧಿಕಾರಿಗಳು, ಸಿಬ್ಬಂದಿಗಳು, ಗ್ರಾಪಂ ಸದಸ್ಯ ರಾಜೇಂದ್ರ ಶೆಟ್ಟಿ ಹಾಗೂ ಇತರ ನಾಗರಿಕರು ಪರಿಹಾರ ಕಾರ್ಯದಲ್ಲಿ ಸಕ್ರಿಯವಾಗಿ ಶ್ರಮಿಸಿದ್ದರಿಂದ ಸಂಜೆಯೊಳಗೆ ರಸ್ತೆಯಲ್ಲಿ ವಾಹನ ಸಂಚಾರ ಸುಗಮಗೊಂಡಿತು. ಮಾತ್ರವಲ್ಲ, ವಿದ್ಯುತ್ ಸಂಪರ್ಕವನ್ನು ಮರುಸ್ಥಾಪಿಸಲು ಸಾಧ್ಯವಾಯಿತು.

 

Leave a Reply

Your email address will not be published. Required fields are marked *