Realtime blog statisticsweb statistics
udupibits.in
Breaking News
ಉಡುಪಿ: ಅಂಚೆ ಕಚೇರಿಗಳಲ್ಲಿ ಇಂಡಿಯನ್ ಪೋಸ್ಟಲ್ ಆರ್ಡರ್ ಅಲಭ್ಯತೆ- ಸಮಸ್ಯೆ ಪರಿಹರಿಸಲು ಮಾಹಿತಿ ಹಕ್ಕು ಕಾರ್ಯಕರ್ತರಿಂದ ಪ್ರಧಾನಿಗೆ ಪತ್ರ

ಮೂಡುಬೆಳ್ಳೆ: ಮತ್ತೆ ವಿದ್ಯುತ್ ತಂತಿ ಸಹಿತ ರಸ್ತೆಗಡ್ಡ ಬಿದ್ದ ಕೊಂಬೆ- ವಾಹನ ಸಂಚಾರಕ್ಕೆ ಅಡ್ಡಿ

ಉಡುಪಿ: ಭಾರೀ ಮಳೆ ಮತ್ತು ಗಾಳಿಯ ಪರಿಣಾಮ ಇಂದು (ಆಗಸ್ಟ್ 14) ಮಧ್ಯಾಹ್ನ ಉಡುಪಿ-ಮೂಡುಬೆಳ್ಳೆ-ಕಾರ್ಕಳ ರಾಜ್ಯ ಹೆದ್ದಾರಿಯ ಮೂಡುಬೆಳ್ಳೆ ಬಳಿಯ ತಿರ್ಲಪಲ್ಕೆಯಲ್ಲಿ ರಸ್ತೆ ಬದಿಯಲ್ಲಿರುವ ಬೃಹತ್ ಮರದ ಕೊಂಬೆಯೊಂದು ವಿದ್ಯುತ್ ತಂತಿಯ ಸಹಿತ ರಸ್ತೆಗೆ ಅಡ್ಡವಾಗಿ ಬಿದ್ದು ವಾಹನ ಸಂಚಾರಕ್ಕೆ ಅಡ್ಡಿಯುಂಟಾಯಿತು ಹಾಗೂ ವಿದ್ಯುತ್ ಸ್ಥಗಿತಗೊಳ್ಳಲು ಕಾರಣವಾಯಿತು.

ಘಟನೆಯ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ಸ್ಥಳಕ್ಕೆ ಬಂದ ಸ್ಥಳೀಯ ಮೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಸಾರ್ವಜನಿಕರ ಸಹಕಾರದೊಂದಿಗೆ ರಸ್ತೆಗಡ್ಡವಾಗಿ ಬಿದ್ದ ಕೊಂಬೆಯನ್ನು ತೆರವುಗೊಳಿಸುವ ಮೂಲಕ ವಾಹನ ಸಂಚಾರವನ್ನು ಸುಗಮಗೊಳಿಸಿದರು.

ಈ ಬೃಹತ್ ಮರ ರಸ್ತೆ ಬದಿಯಲ್ಲೇ ಇದ್ದು, ಅಪಾಯಕಾರಿಯಾಗಿದೆ. ಮರ ಸಹಿತ ಉಳಿದ ಕೊಂಬೆಗಳು ಯಾವುದೇ ಕ್ಷಣ ವಿದ್ಯುತ್ ತಂತಿಯ ಸಹಿತ ಧರೆಗುರುಳುವ ಭೀತಿ ಇದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ವಿಳಂಬಿಸದೆ ಈ ಮರದ ಅಪಾಯಕಾರೀ ಕೊಂಬೆಗಳನ್ನು ಕಡಿದು ಸಂಭವಿಸಬಹುದಾದ ಅನಾಹುತವನ್ನು ತಪ್ಪಿಸಬೇಕಾಗಿದೆ.

ಈ ನಡುವೆ, ಕಾಪು ತಾಲೂಕಿನ ಇನ್ನಂಜೆ ಗ್ರಾಮದಲ್ಲೂ ಮನೆ ಮೇಲೆ ಮರ ಬಿದ್ದ ಬಗ್ಗೆ ವರದಿಯಾಗಿದೆ.

 

 

Leave a Reply

Your email address will not be published. Required fields are marked *