Realtime blog statisticsweb statistics
udupibits.in
Breaking News
ಉಡುಪಿ: ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹಾಗೂ ಬಿಜೆಪಿ ಬೆಂಬಲಿಸಿ ವರದಿ ಪ್ರಕಟಿಸಿದ ಉದಯವಾಣಿ ವಿರುದ್ಧ ಶ್ರೀರಾಮ ದಿವಾಣರಿಂದ ಚುನಾವಣಾ ಆಯೋಗಕ್ಕೆ ದೂರು

ಕಂದಾಯ ಇಲಾಖೆ ಸಮಸ್ಯೆ: ಪತ್ರಕ್ಕೆ ಶಾಸಕರ ಸ್ಪಂದನೆ-ಎಸಿಯೊಂದಿಗೆ ಶಾಸಕರ ಸಮಾಲೋಚನಾ ಸಭೆ

ಉಡುಪಿ: ಕಾಪು ಹೋಬಳಿ ಉಡುಪಿ ತಾಲೂಕಿನಿಂದ ಪ್ರತ್ಯೇಕಿಸಲ್ಪಟ್ಟು ನೂತನ ಕಾಪು ತಾಲೂಕು ಎಂದು ಘೋಷಣೆಯಾದ ಬಳಿಕ ತಾಲೂಕಿನ ಜನರ ಪಾಲಿಗೆ ಕಂದಾಯ ಇಲಾಖೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದ್ದು, ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಕಂದಾಯ ಇಲಾಖೆಯಲ್ಲಿನ ಅವ್ಯವಸ್ಥೆಗಳಿಂದಾಗಿ ಕಾಪು ತಾಲೂಕಿನ ಜನರಿಗಾಗುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ಸಾಮಾಜಿಕ ಕಾರ್ಯಕರ್ತರಾದ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಅವರು ಜುಲೈ 25ರಂದು ಕ್ಷೇತ್ರದ ಶಾಸಕ ಲಾಲಾಜಿ ಆರ್. ಮೆಂಡನ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ ಅವರಿಗೆ ಪತ್ರ ಬರೆದಿದ್ದು, ಇವರಲ್ಲಿ ಶಾಸಕ ಲಾಲಾಜಿ ಮೆಂಡನ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸಮಸ್ಯೆ ಪರಿಹಾರಕ್ಕೆ ಕ್ರಮ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.

ಸಾಫ್ಟ್ ವೇರ್ ಸಮಸ್ಯೆ ಮತ್ತು ಸರ್ವರ್ ವ್ಯತ್ಯಯದಿಂದಾಗಿ ಭೂಮಿ ಕೇಂದ್ರದಲ್ಲಿ ಅವ್ಯವಸ್ಥೆ ಸೃಷ್ಟಿಯಾಗಿದೆ. ಪರಿಣಾಮ, ಪಹಣಿ ಪತ್ರಗಳ ವಿತರಣೆಯಲ್ಲಿ ತೊಂದರೆ ಉಂಟಾಗಿದೆ. ಖಾಸಗಿ ಸೈಬರ್ ಕೇಂದ್ರಗಳ ಮೂಲಕವೂ ಪಹಣಿ ಪತ್ರಗಳನ್ನು ಪಡೆದುಕೊಳ್ಳವ ವ್ಯವಸ್ಥೆಯನ್ನು ಸರಕಾರ ಒದಗಿಸಿಕೊಟ್ಟಿದ್ದು, ಪ್ರಸ್ತುತ ಈ ಸೌಲಭ್ಯವೂ ಸಾರ್ವಜನಿಕರಿಗೆ ಮರೀಚಿಕೆಯಾಗಿ ಪರಿಣಮಿಸಿದೆ ಎಂದು ಅಶ್ವಿನ್ ಲಾರೆನ್ಸ್ ಅವರು ಶಾಸಕರ ಹಾಗೂ ಸಚಿವರ ಗಮನ ಸೆಳೆದಿದ್ದಾರೆ.

ಪಹಣಿ ಸಮಸ್ಯೆ ಮಾತ್ರವಲ್ಲದೆ, ಕಳೆದ ಕೆಲ ತಿಂಗಳುಗಳಿಂದ ಉಡುಪಿ ತಾಲೂಕು ಕಚೇರಿಯಲ್ಲಿ ಕಾಪು ತಾಲೂಕಿಗೆ ಸಂಬಂಧಿಸಿದ ಅರ್ಜಿಗಳನ್ನು ಸ್ವೀಕರಿಸುವುದನ್ನು ಕೂಡಾ ನಿಲ್ಲಿಸಲಾಗಿದ್ದು, ಕಚೇರಿಯಲ್ಲಿ ಈ ಬಗ್ಗೆ ಫಲಕವನ್ನು ಸಹ ಅಳವಡಿಸಲಾಗಿದೆ ಎಂದು ಅಶ್ವಿನ್ ಲಾರೆನ್ಸ್ ಪತ್ರದಲ್ಲಿ ವಿವರಿಸಿದ್ದಾರೆ.

ಕಂದಾಯ ಇಲಾಖೆಯಲ್ಲಿನ ಸಮಸ್ಯೆಗಳಿಂದಾಗಿ ಸಾರ್ವಜನಿಕರಿಗಾಗುತ್ತಿರುವ ತೊಂದರೆಗಳ ಬಗ್ಗೆ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಅವರು ಬರೆದ ಪತ್ರವನ್ನು ಗಂಭೀರವಾಗಿ ಪರಿಗಣಿಸಿರುವ ಶಾಸಕ ಲಾಲಾಜಿ ಮೆಂಡನ್ ಅವರು ಆಗಸ್ಟ್ 14ರಂದು ವಿಷಯ ತಜ್ಞರ ನಿಯೋಗದೊಂದಿಗೆ ಕುಂದಾಪುರ ಉಪವಿಭಾಗದ ಅಸಿಸ್ಟೆಂಟ್ ಕಮಿಷನರ್ ಭೂಬಾಲನ್ ಅವರೊಂದಿಗೆ ಸಮಾಲೋಚನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *