Realtime blog statisticsweb statistics
udupibits.in
Breaking News
# ಮಾಹಿತಿ ಹಕ್ಕು ಕಾಯಿದೆ ಉಲ್ಲಂಘನೆ ಮಾಡಿದವರಿಗೆ ದಂಡ, ಅರ್ಜಿದಾರರಿಗೆ ಪರಿಹಾರ ಕೊಡಿಸುವಲ್ಲಿ ರಾಜ್ಯ ಮಾಹಿತಿ ಆಯುಕ್ತರುಗಳ ಹಿಂದೇಟು: ಶ್ರೀರಾಮ ದಿವಾಣ ಆರೋಪ.

ಸಾಹಿತಿ, ಅಂಕಣಕಾರ, ಪತ್ರಕರ್ತ ದಿ/ಗಣಪತಿ ದಿವಾಣರ ಕೃತಿಗಳು

# ‘‘ಅನ್ನಕ್ಕಾಗಿ’’ (ನೀಳ್ಗತೆ), ಗಣಪತಿ ದಿವಾಣ ಅವರ ಸಂಕಲನವಾಗಿ ಮೊದಲ ಪ್ರಕಟಿತ ಕೃತಿ. ಕೃತಿಯಲ್ಲಿ ಕೃತಿಕಾರರನ್ನು ‘’ಪುಟ್ಟ’’ ಎಂದು ಪ್ರಕಟಿಸಲಾಗಿದೆ. ‘’ಪುಟ್ಟ’’ ಎಂಬುದು ಗಣಪತಿ ದಿವಾಣರ ಮೊದಲ ಕಾವ್ಯನಾಮವಾಗಿದೆ. 1951ರಲ್ಲಿ ‘ಕರ್ನಾಟಕ ಸಾಹಿತ್ಯ ಸಾಹಿತ್ಯ ಪ್ರಕಾಶನ, ಬೇಳ, ಕುಂಬಳೆ’ ಇವರು ಕೃತಿಯನ್ನು ಪ್ರಕಟಿಸಿದೆ. 19+7 ಪುಟಗಳ ಈ ಕೃತಿಯ ಬೆಲೆ ಮೂರಾಣೆ.

‘ಕರ್ನಾಟಕ ಸಾಹಿತ್ಯ ಪ್ರಕಾಶನ’, ರಾ.ಮೋ.ವಿಶ್ವಾಮಿತ್ರ (ರಾಮ ಮೊಳೆಯಾರ) ಅವರ ಪ್ರಕಾಶನ ಸಂಸ್ಥೆ. ‘’ಅನ್ನಕ್ಕಾಗಿ’’ ಈ ಸಂಸ್ಥೆಯ ಮೊದಲ ಪ್ರಕಟಿತ ಕೃತಿ.

# ‘’ಕಲ್ಲು ಸಕ್ಕರೆ’’, ಒಗಟು ರೂಪದ ಪ್ರಾಸಬದ್ದ ಚುಟುಕುಗಳು. ಇದರಲ್ಲಿ 37 ಚುಟುಕುಗಳಿವೆ. ಲೇಖಕ ಗಣಪತಿ ದಿವಾಣರೇ ಪ್ರಕಾಶಕರು. 1964ರಲ್ಲಿ ಪ್ರಕಟಿಸಿದ ಕೃತಿಯ ಬೆಲೆ 15 ಪೈಸೆ. 16+4 ಪುಟಗಳ ಕೃತಿಯನ್ನು ಮಂಗಳೂರಿನ ಶ್ರೀನಿವಾಸ ಪ್ರಿಂಟಿಂಗ್ ವರ್ಕ್ಸ್ ಮುದ್ರಿಸಿದೆ. ವಿದ್ವಾನ್ ಡಿ. ಮಹಾಲಿಂಗ ಭಟ್ ಅವರು ಕೊಳ್ಳೆಗಾಲ ತಾಲೂಕು ಸಿಂಗನಲ್ಲೂರು ಎಂಬಲ್ಲಿದ್ದಾಗ 1964ರ ಜೂನ್ 20ರಂದು ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ. ಜುಲೈ 5ರಂದು ಲೇಖಕರು ‘ಒಂದು ಮಾತು’ ಬರೆದಿದ್ದಾರೆ.

ಈ ಕೃತಿ, 1965ರಲ್ಲಿ ಎರಡನೇ ಮುದ್ರಣವನ್ನು ಕಂಡಿತು. ಎರಡನೇ ಮುದ್ರಣದ ಪ್ರಕಾಶಕರು, ಕೆ.ಎನ್.ಪೈ ಬ್ರದರ್ಸ್ ಅಡ್ಯನಡ್ಕ. ಇದರ ಬೆಲೆ 20 ಪೈಸೆ. ಮೊದಲ ಮುದ್ರಣದ ಕೃತಿಯ ಬಗ್ಗೆ ಮಂಗಳೂರಿನ ‘ರಾಷ್ಟ್ರಮತ, ‘ಯುಗಪುರುಷ’, ‘ಅಮೃತ’ ಪತ್ರಿಕೆಗಳು ಮತ್ತು ಪ್ರಸಿದ್ಧ ನ್ಯಾಯವಾದಿ, ಹೋರಾಟಗಾರ ಕಳ್ಳಿಗೆ ಮಹಾಬಲ ಭಂಡಾರಿ ಇವರು ಬರೆದ ಅಭಿಪ್ರಾಯಗಳನ್ನು ಎರಡನೇ ಮುದ್ರಣದ ಕೃತಿಯಲ್ಲಿ ಹೆಚ್ಚುವರಿಯಾಗಿ ಪ್ರಕಟಿಸಲಾಗಿದೆ.

# ‘’ದಿವಾಣ ದರ್ಪಣ’’ (ಕವನ, ಹನಿಕವನ, ಚುಟುಕುಗಳು). ಈ ಕೃತಿಯನ್ನು ಕುಂಬಳೆ ಎಡನಾಡುವಿನ ದಿವಾಣ ಪ್ರಕಾಶನ ಪ್ರಕಟಿಸಿದೆ. 1993ರಲ್ಲಿ ಪ್ರಕಟವಾದ, 72 ಪುಟಗಳ ದಿವಾಣ ದರ್ಪಣದ ಬೆಲೆ 15 ರೂಪಾಯಿಗಳು. ಕೃತಿಯ ಮುಖಪುಟ ವಿನ್ಯಾಸ ‘ಬಾಲ’ ಮಧುರಕಾನನ ಅವರದ್ದು. ನೀರ್ಚಾಲುವಿನ ವಿದ್ಯಾ ಪ್ರಿಂಟರ್ಸ್ ನಲ್ಲಿ ಕೃತಿ ಮುದ್ರಣವಾಗಿದೆ.

ದಿವಾಣ ದರ್ಪಣಕ್ಕೆ ಕಾಂತಾವರದ ಡಾ.ನಾ.ಮೊಗಸಾಲೆ ಅವರು ಮುನ್ನುಡಿ ಬರೆದಿದ್ದಾರೆ. ಕೃತಿಯ ಕವಿ ಗಣಪತಿ ದಿವಾಣರು ಈ ಕೃತಿಗೆ 1993ರ ಸೆಪ್ಟೆಂಬರ್ 23ರಂದು ‘ಅಭಿವಂದನೆಗಳು-ಕೃತಜ್ಞತೆಗಳು’ ಸಲ್ಲಿಸಿದ್ದಾರೆ. ಅಡ್ಯನಡ್ಕದ ವಿ.ಗ.ನಾಯಕ ಅವರು ಬೆನ್ನುಡಿ ಬರೆದಿದ್ದಾರೆ.

# ‘’ಅಣ್ಣ ಕಳ್ಳಿಗೆ’’ ಪ್ರಸಿದ್ಧ ನ್ಯಾಯವಾದಿ, ಕಾಸರಗೋಡಿನ ಅಗ್ರಗಣ್ಯ ಕನ್ನಡ ಹೋರಾಟಗಾರ, ಕಾದಂಬರಿಕಾರ, ಲೇಖಕ, ಶಾಸಕ ದಿ/ ಕಳ್ಳಿಗೆ ಮಹಾಬಲ ಭಂಡಾರಿ ಅವರ ವ್ಯಕ್ತಿ ಚಿತ್ರ. 1994ರಲ್ಲಿ ಕೆ.ವೆಂಕಟಕೃಷ್ಣಯ್ಯ ಅವರ ಕಾಸರಗೋಡುವಿನ ಗೀತಾ ಪ್ರಕಾಶನ ಪ್ರಕಟಿಸಿದ್ದು, ಸಿರಿಗನ್ನಡ ಪ್ರೆಸ್ ಮುದ್ರಿಸಿದೆ. 17+9 ಪುಟಗಳಿವೆ. ವ್ಯಕ್ತಿ ಚಿತ್ರದ ಜೊತೆಗೆ ಕಳ್ಳಿಗೆ, ಕಾಸರಗೋಡು ಮತ್ತು ಮಹಾಜನ ಆಯೋಗದ ಬಗ್ಗೆ ಬರೆದ ಕವನಗಳಿವೆ.

ಕೆ.ವೆಂಕಟಕೃಷ್ಣಯ್ಯ ಅವರ ‘ನಮ್ಮ ಮಾತು’, ಎಂ.ಗಂಗಾಧರ ಭಟ್ ಅವರ ‘ಇದು ನಮ್ಮ ಕರ್ತವ್ಯ’, ಕಳ್ಳಿಗೆ ಮಹಾಬಲ ಭಂಡಾರಿಯವರ ಧರ್ಮಪತ್ನಿ ಸುವಾಸಿನಿ ಭಂಡಾರಿ ಅವರ ‘ನನ್ನ ಸ್ವಾಮಿಯ ಬಗ್ಗೆ’ ಮಾತುಗಳಿವೆ.

# ‘’ಕನ್ನಾಟಿ’’ ಹವೀಕ ಅಥವಾ ಹವ್ಯಕ ಭಾಷಾ ಪದ್ಯ ಸಂಕಲನ. 1995ರಲ್ಲಿ ದಿವಾಣ ಪ್ರಕಾಶನ ಎಡನಾಡು, ಕುಂಬಳೆ ಸಂಕಲನವನ್ನು ಪ್ರಕಟಿಸಿದೆ. 35 ಪುಟಗಳ ಸಂಕಲನದ ಬೆಲೆ ಎಂಟು ರೂಪಾಯಿ. ಬದಿಯಡ್ಕದ ಬೆನಕ ಪ್ರಿಂಟರ್ಸ್ ಸಂಕಲನವನ್ನು ಮುದ್ರಿಸಿದೆ. ಡಾ.ರಮಾನಂದ ಬನಾರಿ ಅವರ ‘ಮುದದಿಂದ’ ಈ ಸಂಕಲನಕ್ಕಿದೆ.

 

 

# ‘’ಅಕ್ಷರ ಕಜ್ಜಾಯ’’, ಕನ್ನಡ ಅಕ್ಷರ ಮಾಲೆಯ 19 ಅಕ್ಷರಗಳಿಗೆ 19 ಪದ್ಯಗಳು. ಕಿನ್ನಿಗೋಳಿಯ ಯುಗಪುರುಷ ಗ್ರಂಥಮಾಲೆಯ 343ನೇ ಕೃತಿಯಾಗಿ 1997ರಲ್ಲಿ ಪ್ರಕಟವಾದ 20+10 ಪುಟಗಳ ಕೃತಿಯ ಬೆಲೆ 6 ರೂಪಾಯಿ. ಮಿತ್ತಬೈಲು ಶಿಶು ಸಾಹಿತ್ಯ ಮಾಲೆಯ ಪಳಕಳ ಸೀತಾರಾಮ ಭಟ್ಟರು 1996ರ ಸೆಪ್ಟೆಂಬರ್ 16ರಂದು ಕೃತಿಗೆ ‘ಮುನ್ನುಡಿ’ ಬರೆದಿದ್ದಾರೆ.

 

Leave a Reply

Your email address will not be published. Required fields are marked *