Realtime blog statisticsweb statistics
udupibits.in
Breaking News
# ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಮಲಾದೇವಿ ಚಟ್ಟೋಪಾಧ್ಯಾಯ ಹೆಸರಿಡಲು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಿವೃತ್ತ ಪತ್ರಕರ್ತ ಅಮ್ಮೆಂಬಳ ಆನಂದರಿಂದ ಸಿಎಂ ಕುಮಾರಸ್ವಾಮೀಗೆ ಮನವಿ.

‘ಆರ್ಮಿ ಡಾಕ್ಟ್ರು’ ಎಂದೇ ಖ್ಯಾತರಾದ ಡಾ.ಕ್ಯಾಪ್ಟನ್ ಸುಬ್ಬಣ ಭಟ್ ನಿಧನ

ಉಡುಪಿ: ಮೂಲತಹ ಕೇರಳ ರಾಜ್ಯ ಕಾಸರಗೋಡು ಜಿಲ್ಲೆ ಮಂಜೇಶ್ವರ ತಾಲೂಕು ಉಪ್ಪಳ ಸಮೀಪದ ಚಿಪ್ಪಾರು ಕಜೆಯವರಾದ, ಪ್ರಸ್ತುತ ಅಮೇರಿಕಾದ ನ್ಯೂವರ್ಕ್ ನಲ್ಲಿ ವಾಸವಾಗಿರುವ ಡಾ. ಕ್ಯಾಪ್ಟನ್ ಸುಬ್ಬಣ್ಣ ಭಟ್ (79) ಆಗಸ್ಟ್ 6ರಂದು ನ್ಯೂವರ್ಕ್ ನಲ್ಲಿನ ತಮ್ಮ ನಿವಾಸದಲ್ಲಿ ನಿಧನರಾದರು.

ಕ್ಯಾಪ್ಟನ್ ಡಾ.ಕೆ.ಎಸ್.ಭಟ್ (ಆರ್ಮಿ ಡಾಕ್ಟ್ರು) ಎಂದೇ ಖ್ಯಾತರಾಗಿರುವ ಸುಬ್ಬಣ್ಣ ಭಟ್ಟರು ಪತ್ನಿ, ಇಬ್ಬರು ಮಕ್ಕಳು, ಮೊಮ್ಮಕ್ಕಳು, ಉಡುಪಿ ಕೊಡಂಕೂರಿನಲ್ಲಿ ವಾಸವಾಗಿರುವ ಡಾ.ಕಜೆ ಬಾಲಕೃಷ್ಣ ಭಟ್ ಸಹಿತ ನಾಲ್ವರು ಸಹೋದರರು ಹಾಗೂ ನಾಲ್ವರು ಸಹೋದರಿಯರನ್ನು ಅಗಲಿದ್ದಾರೆ.

ಚಿಪ್ಪಾರು ಕಜೆ ಪಟೇಲ್ ಗಣಪತಿ ಭಟ್ ಹಾಗೂ ಪರಮೇಶ್ವರಿ ದಂಪತಿಗಳ ಹಿರಿಯ ಮಗನಾಗಿರುವ ಸುಬ್ಬಣ್ಣ ಭಟ್ ಅವರು ಪ್ರಾಥಮಿಕ ವಿಧ್ಯಾಭ್ಯಾಸವನ್ನು ಕೊಡವೂರು ಶಾಲೆಯಲ್ಲೂ, ಹೈಸ್ಕೂಲ್ ವಿಧ್ಯಾಭ್ಯಾಸವನ್ನು ಸೋಮೇಶ್ವರ ಆನಂದಾಶ್ರಮ ಶಾಲೆಯಲ್ಲೂ, ಕಾಲೇಜು ವ್ಯಾಸಂಗವನ್ನು ಮಂಗಳೂರು ಸೈಂಟ್ ಅಲೋಶಿಯಸ್ ಕಾಲೇಜಿನಲ್ಲೂ, ವೈದ್ಯಕೀಯ ವ್ಯಾಸಂಗವನ್ನು ನವದೆಹಲಿಯ ಎಐಎಂಎಸ್ ನಲ್ಲೂ ಮಾಡಿದ ಬಳಿಕ ಕೆನಡಾ ದೇಶದಲ್ಲಿ ಸರ್ಜರಿ ಉನ್ನತ ವೈದ್ಯಕೀಯ ಶಿಕ್ಷಣ ಪಡೆದ ಬಳಿಕ ಕೆಲವು ವರ್ಷಗಳ ಕಾಲ ಪೂನಾ, ಅಲಹಾಬಾದ್ ಮೊದಲಾದೆಡೆಗಳಲ್ಲಿ ಮಿಲಿಟರಿಯಲ್ಲಿ ವೈದ್ಯರಾಗಿ ಕ್ಯಾಪ್ಟನ್ ಆಗಿ ಸ್ವಯಂ ನಿವೃತ್ತರಾಗಿದ್ದರು.

ಮಿಲಿಟರಿಯಿಂದ ಸ್ವಯಂ ನಿವೃತ್ತರಾದ ಬಳಿಕ ನ್ಯೂವಾರ್ಕ್ ನಲ್ಲಿ ನೆಲೆಸಿ ವೈದ್ಯಕೀಯ ಸೇವೆಯಲ್ಲಿ ನಿರತರಾಗಿದ್ದರು.

Leave a Reply

Your email address will not be published. Required fields are marked *