Realtime blog statisticsweb statistics
udupibits.in
Breaking News
ಉಡುಪಿ: ಅಂಚೆ ಕಚೇರಿಗಳಲ್ಲಿ ಇಂಡಿಯನ್ ಪೋಸ್ಟಲ್ ಆರ್ಡರ್ ಅಲಭ್ಯತೆ- ಸಮಸ್ಯೆ ಪರಿಹರಿಸಲು ಮಾಹಿತಿ ಹಕ್ಕು ಕಾರ್ಯಕರ್ತರಿಂದ ಪ್ರಧಾನಿಗೆ ಪತ್ರ

ಉಡುಪಿ ನಗರಸಭೆಗೆ ನಾಮಪತ್ರ ಸಲ್ಲಿಕೆ

ಉಡುಪಿ: ಉಡುಪಿ ನಗರಸಭೆಗೆ ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಿಕೆಗೆ ಕೊನೆಯ ದಿನವಾದ ಇಂದು (ಆಗಸ್ಟ್ 18) ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷೇತರ ಅಭ್ಯರ್ಥಿಗಳು ತಮ್ಮ ಬೆಂಬಲಿಗರ ಜೊತೆಗೆ ನಗರಸಭಾ ಕಚೇರಿಗೆ ಆಗಮಿಸಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.

ಅಜ್ಜರಕಾಡು ವಾರ್ಡ್ ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಸುಜಾತಾ ಪ್ರಕಾಶ್ ಪೂಜಾರಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಮಾಜ ಸೇವಕರಾದ ಪ್ರಕಾಶ್ ಪೂಜಾರಿ, ಯೋಗೀಶ್ ಪೂಜಾರಿ ಹಾಗೂ ಜನಪರ ಹೋರಾಟಗಾರರಾದ ಶ್ರೀರಾಮ ದಿವಾಣ ಉಪಸ್ಥಿತರಿದ್ದರು.

ಚಿಟ್ಪಾಡಿ ವಾರ್ಡ್ ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಜೋಕಿಂ ವಿಜಯ್ ಡಿಸೋಜ ನಾಮಪತ್ರ ಸಲ್ಲಿಸಿದರು. ಜನಪರ ಹೋರಾಟಗಾರರಾದ ಶ್ರೀರಾಮ ದಿವಾಣ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *