Realtime blog statisticsweb statistics
udupibits.in
Breaking News
ಉಡುಪಿ: ನೌಕರರಿಗೆ ಕಿರುಕುಳ ಆರೋಪ- ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಮಹೇಶ್ ಐತಾಳ್ ಅಮಾನತಿಗೆ ಶ್ರೀರಾಮ ದಿವಾಣ ಒತ್ತಾಯ

3 ತಿಂಗಳ ಮಗುವಿನ ಕೊಲೆ ?: ಮುಚ್ಚಿ ಹಾಕಿದ ಶಿರ್ವ ಪೊಲೀಸ್ !

ಉಡುಪಿ: ಉತ್ತರ ಕರ್ನಾಟಕ ಮೂಲದ ಮನೆ ಕೆಲಸದ ಮಹಿಳೆಯ ಮೂರು ತಿಂಗಳ ಮಗುವನ್ನು ಹಿರಿಯ ಮಹಿಳೆಯೊಬ್ಬಳು ಕೊಲೆಗೈದ ಪ್ರಕರಣವನ್ನು ಶಿರ್ವ ಪೊಲೀಸ್ ಠಾಣಾಧಿಕಾರಿ ಮುಚ್ಚಿ ಹಾಕಿದ ವಿದ್ಯಾಮಾನ ನಡೆದಿದೆ ಎಂದು ಹೇಳಲಾಗಿದೆ.

ಸೆಪ್ಟೆಂಬರ್ 15ರಂದು ಬೆಳಗ್ಗೆ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಪಾದೂರಿನ ರತಿ ಶೆಟ್ಟಿ ಎಂಬವರ ಮನೆಯಲ್ಲಿ ಈ ಪ್ರಕರಣ ನಡೆದಿದೆ. ಕೊಲೆಗೀಡಾದ ಮಗುವಿನ ತಾಯಿಯನ್ನು ಹನುಮವ್ವ (28) ಎಂದು ತಿಳಿದುಬಂದಿದೆ. ಈಕೆಗೆ ಬೆದರಿಕೆ ಹಾಕಿ, ಅಮಿಷ ಒಡ್ಡಿ ಪೊಲೀಸ್ ಅಧಿಕಾರಿಗಳು ತಮಗೆ ಹಾಗೂ ಕೊಲೆಗೈದ ಮಹಿಳೆಯ ಕಡೆಯವರಿಗೆ ಬೇಕಾದಂತೆ ಸುಳ್ಳು ಹೇಳಿಕೆಯನ್ನು ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮಗುವಿನ ತಲೆಗೆ ನೀರಿನ ಬಾಟಲಿಯಿಂದ ಬಡಿದು ಕೊಲೆಗೈಯ್ಯಲಾಗಿದೆ ಎಂದು ಹೇಳಲಾಗಿದೆ. ಸೆಪ್ಟೆಂಬರ್ 15ರಂದು ಬೆಳಗ್ಗೆ ಮೊದಲಿಗೆ ಮಗುವಿನ ಮೃತದೇಹವನ್ನು ಉಡುಪಿ ಅಜ್ಜರಕಾಡಿನಲ್ಲಿರುವ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆತರಲಾಗಿದೆ. ಬಳಿಕ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ವರ್ಗಾಯಿಸಿ ಇಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಸುಳ್ಳು ಪ್ರಕರಣ ಸಂಬಂಧ ಲಕ್ಷಾಂತರ ರೂ. ಕೈ ಬದಲಾಗಿದೆ ಎಂಬ ಅನುಮಾನವನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.

ಶಿರ್ವ ಠಾಣಾಧಿಕಾರಿಗಳು ಪ್ರಕರಣವನ್ನು ‘ಅಸಹಜ ಸಾವು’ ಎಂದು ದಾಖಲಿಸಿಕೊಂಡು ಮುಚ್ಚಿಹಾಕಿದ್ದಾರೆ.

ಮೂಡುಬೆಳ್ಳೆ ಸಮೀಪದ ನೆಲ್ಲಿಕಟ್ಟೆ ಚೆಕ್ ಪೋಸ್ಟ್ ನಲ್ಲಿ ಕಳೆದ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರತರಾಗಿದ್ದ ಪೊಲೀಸ್ ಸಿಬ್ಬಂದಿ ದ್ವಿಚಕ್ರ ವಾಹನ ಸವಾರ ದಲಿತ ಯುವಕನ ಮೇಲೆ ದೈಹಿಕ ಮತ್ತು ಮಾನಸಿಕ ದೌರ್ಜನ್ಯ ನಡೆಸಿದ್ದರು. ಬಳಿಕ ಇದೇ ಪೊಲೀಸ್ ಠಾಣೆಯ ಪಿ ಎಸ್ ಐ ಅಬ್ದುಲ್ ಖಾದರ್  ಈ ಪ್ರಕರಣವನ್ನು ಮುಚ್ಚಿ ಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು.

(ಸಾಂದರ್ಬಿಕ ಚಿತ್ರ)

Leave a Reply

Your email address will not be published. Required fields are marked *