Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಉಡುಪಿ ಲೋಕೋಪಯೋಗಿ ಅಧಿಕಾರಿಗಳ ಕರ್ತವ್ಯಲೋಪ: ದೂರು

ಉಡುಪಿ: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿಯ ಸಾಲ್ಮರ-ದುರ್ಗಾನಗರ ನಡುವೆ ಹೆದ್ದಾರಿಯ ಇಕ್ಕಲೆಗಳಲ್ಲಿ ಒಳಚರಂಡಿ ನಿರ್ಮಿಸದೆ ಗಂಭೀರ ಕರ್ತವ್ಯಲೋಪವೆಸಗಿದ ಕಾರಣದಿಂದ ಮಳೆ ನೀರು ಹರಿದು ಬಂದ ಪರಿಣಾಮವಾಗಿ ಮನೆಯೊಂದರ ಆವರಣ ಗೋಡೆ ಕುಸಿದು ಬಿದ್ದು, ಇನ್ನೊಂದು ಮನೆಯೊಳಗೆ ನೀರು ನುಗ್ಗಿದ ಘಟನೆ ನಡೆದಿದ್ದು, ಈ ಬಗ್ಗೆ ಸರಕಾರಕ್ಕೆ ದೂರು ಸಲ್ಲಿಕೆಯಾಗಿದೆ.

ಕಟಪಾಡಿ-ಬಂಟಕಲ್-ಶಿರ್ವ ರಾಜ್ಯ ಹೆದ್ದಾರಿಯನ್ನು, 2016-17ರ ಅವಧಿಯಲ್ಲಿ ಹೆದ್ದಾರಿಯ ಎರಡೂ ಬದಿಗಳಲ್ಲಿದ್ದ ನೂರಾರು ಮರಗಳನ್ನು ಕಡಿದು ಅಗಲೀಕರಣ ಮಾಡಲಾಗಿತ್ತು. ಆದರೆ, ಈ ಸಂದರ್ಭದಲ್ಲಿ ಕುರ್ಕಾಲು ಗ್ರಾಮದ ಸಾಲ್ಮರ-ದುರ್ಗಾನಗರ ನಡುವೆ ಹೆದ್ದಾರಿಯ ಇಕ್ಕಲೆಗಳಲ್ಲಿ ಮಳೆ ನೀರು ಹರಿದು ಹೋಗಲು ಬೇಕಾದ ಸರಿಯಾದ ಒಳಚರಂಡಿ ನಿರ್ಮಿಸದೇ ನಿರ್ಲಕ್ಷಿಸಿದ್ದಾರೆ ಮತ್ತು ಬೇಜವಾಬ್ದಾರಿ ಪ್ರದರ್ಶಿಸಿದ್ದಾರೆ. ಇದು ಲೋಕೋಪಯೋಗಿ ಇಲಾಖೆಯ ಸಂಬಂಧಿಸಿದ ಅಧಿಕಾರಿಗಳ ಗಂಭೀರ ಕರ್ತವ್ಯಲೋಪವಾಗಿದೆ. ಆದುದರಿಂದ, ಈ ಬಗ್ಗೆ ತನಿಖೆ ನಡೆಸಬೇಕು ಮತ್ತು ನಿರ್ಲಕ್ಷ್ಯ, ಬೇಜವಾಬ್ದಾರಿಯ ಜೊತೆಗೆ ಕರ್ತವ್ಯಲೋಪ ಎಸಗಿದ ಸಂಬಂಧಿಸಿದ ಲೋಕೋಪಯೋಗಿ ಇಲಾಖಾಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.

ಸಾಲ್ಮರ-ದುರ್ಗಾನಗರ ಹೆದ್ದಾರಿಯ ಇಕ್ಕಲೆಗಳಲ್ಲಿ ಒಳ ಚರಂಡಿ ನಿರ್ಮಿಸದ ಕಾರಣದಿಂದ, ಈ ಭಾಗದ ಸರ್ವೇ ನಂಬ್ರ ೧೧೨-೨ರಲ್ಲಿರುವ ಶ್ರೀ ಮತಿ ಆಶಾ ದಾಮೋದರ ಆಚಾರ್ಯ ಅವರ ವಾಸ್ತವ್ಯ ಇರುವ ಮನೆ ಆವರಣಕ್ಕೆ ಜುಲೈ 6 ಮತ್ತು 7ರಂದು ಸುರಿದ ಭಾರೀ ಮಳೆಗೆ ಮಳೆ ನೀರು ಹರಿದು ಬಂದು ಆವರಣ ಗೋಡೆ ಕುಸಿದು ಬಿದ್ದು ನಾಶ ನಷ್ಟ ಉಂಟಾಗಿತ್ತು.

ಈ ಬಗ್ಗೆ, ಜುಲೈ 10ರಂದು ಕಾಪು ತಾಲೂಕು ತಹಶೀಲ್ದಾರರಿಗೆ ಹಾಗೂ ಉಡುಪಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಮತ್ತು ಜುಲೈ 28ರಂದು ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಲಾಲಾಜಿ ಆರ್. ಮೆಂಡನ್ ಅವರಿಗೆ ಲಿಖಿತ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಿರುವುದಿಲ್ಲ ಎಂದು ದೂರಿನಲ್ಲಿ ಬೇಸರ ವ್ಯಕ್ತಪಡಿಸಲಾಗಿದೆ.

ಮನೆಯ ಆವರಣ ಗೋಡೆ ಕುಸಿದು ನಷ್ಟ ಉಂಟಾಗಲು, ರಾಜ್ಯ ಹೆದ್ದಾರಿಯ ಇಕ್ಕಲೆಗಳಲ್ಲಿ (ಮುಖ್ಯವಾಗಿ ಸಾಲ್ಮರ-ದುರ್ಗಾನಗರ ನಡುವೆ) ಒಳಚರಂಡಿ ನಿರ್ಮಿಸದಿರುವುದು ಮತ್ತು ಈ ನಿಟ್ಟಿನಲ್ಲಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಗಂಭೀರ ಕರ್ತವ್ಯಲೋಪ ಎಸಗಿರುವುದೇ ಕಾರಣವಾಗಿರುವುದಿರಂದ, ಈ ಬಗ್ಗೆ ತನಿಖೆ ನಡೆಸಿ, ಕರ್ತವ್ಯಲೋಪವೆಸಗಿದ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಮನವಿಯಲ್ಲಿ ಕೋರಲಾಗಿದೆ.

ಹೆದ್ದಾರಿಯ ಇಕ್ಕಲೆಗಳಲ್ಲಿ ಒಳಚರಂಡಿ ನಿರ್ಮಿಸದ ಕಾರಣಕ್ಕೆ ಮನೆ ಆವರಣಕ್ಕೆ ಮಳೆ ನೀರು ನುಗ್ಗಿ ಆವರಣ ಗೋಡೆ ಕುಸಿದು ಬಿದ್ದು ನಷ್ಟ ಉಂಟಾಗಿರುವುದರಿಂದ ನಷ್ಟ ಪರಿಹಾರವನ್ನು ಒದಗಿಸಿಕೊಡಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.

Leave a Reply

Your email address will not be published. Required fields are marked *