Realtime blog statisticsweb statistics
udupibits.in
Breaking News
ಉಡುಪಿ: ನೌಕರರಿಗೆ ಕಿರುಕುಳ ಆರೋಪ- ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಮಹೇಶ್ ಐತಾಳ್ ಅಮಾನತಿಗೆ ಶ್ರೀರಾಮ ದಿವಾಣ ಒತ್ತಾಯ

ಓದುವ ಹವ್ಯಾಸದಿಂದ ಜ್ಞಾನದ ಅಕ್ಷಯ: ಕವಿ ಅಂಶುಮಾಲಿ

ಉಡುಪಿ: ಓದುವ ಅಭಿರುಚಿ ಬೆಳೆಸಿಕೊಂಡಾಗ ಸಾಹಿತ್ಯ ನಮ್ಮೊಳಗಿಂದ ಸಹಜವಾಗಿಯೇ ಪ್ರಕಾಶವಾಗುತ್ತದೆ. ಓದುವುದನ್ನು ಹವ್ಯಾಸವನ್ನಾಗಿ ಮಾಡಿಕೊಂಡಾಗ ಜ್ಞಾನದ ಅಕ್ಷಯವಾಗುತ್ತದೆ. ಇದಕ್ಕಿಂತ ಲಾಭ ಬೇರೆ ಯಾವುದೂ ಇಲ್ಲ. ದೇವಸ್ಥಾನಗಳಿಗೆ ಹೋಗುವಂತೆ ಗ್ರಂಥಾಲಯವನ್ನು ಸರಸ್ವತಿಯ ದೇವಸ್ಥಾನವೆಂದು ತಿಳಿದು ಹೋಗಿ ಪುಸ್ತಕವನ್ನು ಓದುವ ಹವ್ಯಾಸವನ್ನು ಮೈಗೂಡಿಸಿಕೊಳ್ಳಬೇಕು ಎಂದು ಖ್ಯಾತ ಕವಿ, ಬಹುಭಾಷಾ ಲೇಖಕ ಅಂಶುಮಾಲಿ ಅವರು ಹೇಳಿದರು.

ಜನಪರ ಚಿಂತನ ವೇದಿಕೆ ವತಿಯಿಂದ ಉಡುಪಿ ಬೀಡಿನಗುಡ್ಡೆಯಲ್ಲಿ ಕು. ನವಮಿ ಪ್ರಕಾಶ್ ಪೂಜಾರಿ ಅವರ ಹುಟ್ಟುಹಬ್ಬದ ನಿಮಿತ್ತ ಆಯೋಜಿಸಿದ ಕಾರ್ಯಕ್ರಮದಲ್ಲಿ `ಓದುವ ಹವ್ಯಾಸ ಮತ್ತು ಸಾಹಿತ್ಯಾಭಿರುಚಿ’ ಬಗ್ಗೆ ಉಪನ್ಯಾಸ ನೀಡಿ ಅವರು ಮಾತನಾಡುತ್ತಿದ್ದರು.

ಹಿಂದೆ ಯಾವುದೇ ಸೌಕರ್ಯ ಇಲ್ಲದಿದ್ದರೂ, ಬಡತನವಿದ್ದರೂ, ಕಷ್ಟ ನಷ್ಟಗಳಿದ್ದರೂ ಸಾಹಿತ್ಯವೇ ಮುಂತಾದ ಉತ್ತಮ ಹವ್ಯಾಸಗಳನ್ನು ಜನರು ಮೈಗೂಡಿಸಿಕೊಂಡಿರುತ್ತಿದ್ದರು. ಇಂದು ಎಲ್ಲಾ ಸೌಕರ್ಯಗಳಿದ್ದರೂ ಓದುವ ಹವ್ಯಾಸ, ಸಾಹಿತ್ಯಾಭಿರುಚಿಗೆ ಕೊರತೆಯುಂಟಾಗಿರುವುದು ವಿಷಾದನೀಯ. ಇದು ಬದಲಾಗಬೇಕು ಎಂದು ಅಂಶುಮಾಲಿ ತಿಳಿಸಿದರು.

ಆರ್ಗಂ ಲಕ್ಷ್ಮಣ ರಾವ್ ಅವರು ರಚಿಸಿದ ‘ಮೂರ್ಛೆ ಬಂದಿತ್ತು”, ಪಾ.ವೆಂ. ಆಚಾರ್ಯರ ”ಬಯ್ಯ ಮಲ್ಲಿಗೆ” ತುಳು ಕವನ ಸಂಕಲನದ ‘ಗೋಪಿ’ ಎಂಬ ಕವನ ಮತ್ತು ತಮ್ಮದೇ ಸ್ವರಚನೆಯ ಹನಿಕವನಗಳನ್ನು ಕವಿ ಅಂಶುಮಾಲಿ ಅವರು ವಾಚಿಸಿದರು.

ಸಮಾಜಸೇವಕರಾದ ಸುಜಯ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಶ್ರೀರಾಮ ದಿವಾಣ ಪ್ರಸ್ತಾವನೆಗೈದರು. ಶ್ರೀಮತಿ ಅಕ್ಷತಾ ವಿಶ್ವನಾಥ್ ಸ್ವಾಗತಿಸಿದರು. ಕು. ನವಮಿ ಕವಿ ಅಂಶುಮಾಲಿ ಅವರಿಗೆ ಪುಸ್ತಕ ಸ್ಮರಣಿಕೆ ನೀಡಿ ಗೌರವಾರ್ಪಣೆ ಸಲ್ಲಿಸಿದರು. ಪ್ರಕಾಶ್ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *