Realtime blog statisticsweb statistics
udupibits.in
Breaking News
ಉಡುಪಿ: ನೌಕರರಿಗೆ ಕಿರುಕುಳ ಆರೋಪ- ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಮಹೇಶ್ ಐತಾಳ್ ಅಮಾನತಿಗೆ ಶ್ರೀರಾಮ ದಿವಾಣ ಒತ್ತಾಯ

ಉಡುಪಿಯ ಕೂಸಮ್ಮ ಶಂಭು ಶೆಟ್ಟಿ ಸರಕಾರಿ ಆಸ್ಪತ್ರೆಯಲ್ಲಿ ಮಹಿಳೆಗೆ ಚಿಕಿತ್ಸೆ ನಿರಾಕರಣೆ !

ಉಡುಪಿ: ಮಹಿಳೆಯೊಬ್ಬರನ್ನು ಒಳರೋಗಿಯಾಗಿ ದಾಖಲಿಸಿಕೊಂಡ ಉಡುಪಿಯ ”ಕರ್ನಾಟಕ ಸರಕಾರ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ-ಮಕ್ಕಳ ಆಸ್ಪತ್ರೆ”ಯ ಅಧಿಕೃತರು ಚಿಕಿತ್ಸೆ ನೀಡಲು ನಿರಾಕರಿಸಿದ ಗಂಭೀರ ಕರ್ತವ್ಯಲೋಪವೆಸಗಿದೆ.

ಚಿಕಿತ್ಸೆ ಒದಗಿಸುವುದು ಆಸ್ಪತ್ರೆ ಅಧಿಕೃತರ ಕರ್ತವ್ಯವಾಗಿದ್ದು, ಸೂಕ್ತ ಚಿಕಿತ್ಸೆಯಿಂದ ವಂಚಿತವಾಗುವುದು ಎಂದರೆ ಮಾನವ ಹಕ್ಕುಗಳಿಂದ ವಂಚಿತವಾದಂತೆ. ಕರ್ನಾಟಕ ಸರಕಾರ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮಕ್ಕಳ ಆಸ್ಪತ್ರೆಯ ಅಧಿಕೃತರ ಬೇಜವಾಬ್ದಾರಿ, ನಿರ್ಲಕ್ಷ್ಯ ಮತ್ತು ಅಮಾನವೀಯ ಕ್ರಮದಿಂದ ನೊಂದ ಕುಟುಂಬ ಇದೀಗ ಈ ಬಗ್ಗೆ ರಾಜ್ಯ ಸರಕಾರಕ್ಕೆ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಲು ನಿರ್ಧರಿಸಿದ್ದಾರೆ.

ಗರ್ಭಕೋಶದ ಸಮಸ್ಯೆಗೆ ಸಂಬಂಧಿಸಿದಂತೆ ಸೆಪ್ಟೆಂಬರ್ ತಿಂಗಳಲ್ಲಿ ಎರಡು ಬಾರಿ ಕಟಪಾಡಿ ಬಳಿಯ 55 ವರ್ಷ ಪ್ರಾಯದ ಮಹಿಳೆಯ  ಆರೋಗ್ಯ ತಪಾಸಣೆ ಮಾಡಿದ ಆಸ್ಪತ್ರೆ ಅಧಿಕೃತರು 15 ದಿನ ಬಿಟ್ಟು ಆಸ್ಪತ್ರೆಗೆ ಬಂದು ಒಳರೋಗಿಯಾಗಿ ದಾಖಲಾಗುವಂತೆ ಸೂಚಿಸಿದ್ದರು.

ಆಸ್ಪತ್ರೆ ಅಧಿಕೃತರ ಸೂಚನೆಯಂತೆ ಅಕ್ಟೋಬರ್ 3ರಂದು ಬೆಳಗ್ಗೆ 10 ಗಂಟೆಗೆ ಮನೆಯವರ ಜೊತೆಗೆ ಆಸ್ಪತ್ರೆಗೆ ಬಂದ ಮಹಿಳೆಯನ್ನು ಆಸ್ಪತ್ರೆ ಅಧಿಕೃತರು ಮಹಿಳೆಯ ಹೆಸರು ಬರೆದುಕೊಂಡು ಮತ್ತೆ ಪ್ರಾಥಮಿಕ ತಪಾಸಣೆ ನಡೆಸಿ ಕುಳಿತುಕೊಳ್ಳುವಂತೆ ತಿಳಿಸಿದ್ದರು. ಮಹಿಳೆ ಸಂಜೆ ಐದು ಗಂಟೆಯ ವರೆಗೆ ಕುಳಿತದ್ದೇ ಬಂತು. ಸಂಜೆ 5 ಗಂಟೆಗೆ ಸಂಬಂಧಿಸಿದ ವೈದ್ಯೆ ”ನನ್ನಿಂದಾಗದು’ ಎಂದು ಹೇಳಿ ಮಹಳೆಯನ್ನು ದಾಖಲಿಸಿಕೊಳ್ಳದೆ ಆಸ್ಪತ್ರೆಯಿಂದ ನಿರ್ಗಮಿಸಿದ್ದರು.

ಗರ್ಭಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆ ವಿಪರೀತ ನೋವು ಅನುಭವಿಸುತ್ತಿದ್ದ ಕಾರಣ, ಮನೆಯವರು ಮಹಿಳೆಯನ್ನು ಮನೆಯಿಂದ ಆಸ್ಪತ್ರೆಗೆ, ಆಸ್ಪತ್ರೆಯಿಂದ ಮನೆಗೆ ಪದೇ ಪದೇ ಕರೆದುಕೊಂಡು ಹೋಗುವುದು, ಬರುವುದು ಮಾಡುವ ಸ್ಥಿತಿಯಲ್ಲಿದ್ದ ಕಾರಣಕ್ಕೆ, ಸಂಜೆ ಮತ್ತೆ ಆಸ್ಪತ್ರೆಯಲ್ಲಿದ್ದ ಇತರ ವೈದ್ಯರನ್ನು ಕಳಕಳಿಯಿಂದ ವಿನಂತಿಸಿದ ಬಳಿಕ ಆಸ್ಪತ್ರೆ ಅಧಿಕೃತರು ಮಹಿಳೆಯನ್ನು ದಾಖಲಿಸಿಕೊಂಡಿದ್ದರು.

ಒಳರೋಗಿಯಾಗಿ ದಾಖಲಿಸಿಕೊಂಡ ಬಳಿಕ ”ನಾಳೆ ರಿಂಗ್ ಇಡುತ್ತೇವೆ, ನಾಳೆ ರಿಂಗ್ ಇಡುತ್ತೇವೆ” ಎಂದು ಪ್ರತೀ ದಿನ ಹೇಳುತ್ತಾ ಹೋದರು. ಹೀಗೆ ಮೂರು ದಿನಗಳೇ ಕಳೆಯಿತಾದರೂ, ರಿಂಗ್ ಅಳವಡಿಸುವ ಕೆಲಸವನ್ನು ಮಾತ್ರ ಆಸ್ಪತ್ರೆ ಅಧಿಕೃತರು ಮಾಡಲೇ ಇಲ್ಲ. ಅಕ್ಟೋಬರ್ 7ರಂದು ಮಧ್ಯಾಹ್ನ ಮತ್ತೆ ಆಸ್ಪತ್ರೆ ಅಧಿಕೃತರು ಮಹಿಳೆಗೆ ಚಿಕಿತ್ಸೆ ನೀಡಲು ನಿರಾಕರಿಸಿದ ಘಟನೆ ನಡೆಯಿತು. ನಂತರ ಗತ್ಯಂತರವಿಲ್ಲದೆ, ಮಹಿಳೆ ಆಸ್ಪತ್ರೆಯಿಂದ ಬಿಡುಗಡೆಪಡೆದುಕೊಂಡು ಮನೆಯವರ ಜೊತೆಗೆ ಮನೆಗೆ ಮರಳಿದ ಘಟನೆ ನಡೆದಿದೆ.

ಕರ್ನಾಟಕ ಸರಕಾರದ ಆಸ್ಪತ್ರೆಯಲ್ಲಿ ಮಹಿಳೆಗೆ ಕನಿಷ್ಟ ಚಿಕಿತ್ಸೆಯನ್ನೂ ಒದಗಿಸದೆ ಚಿಕಿತ್ಸೆ ನಿರಾಕರಿಸಿದ ಬಗ್ಗೆ ಮಾನವ ಹಕ್ಕುಗಳ ಕಾರ್ಯಕರ್ತ ಶ್ರೀರಾಮ ದಿವಾಣ ಅವರು ಅಕ್ಟೋಬರ್ 7ರಂದು ಜಿಲ್ಲಾ ಸರಕಾರಿ ಆಸ್ಪತ್ರೆಯ ಜಿಲ್ಲಾ ಸರ್ಜನ್ ರವರಿಗೆ ಮೌಖಿಕ ದೂರು ನೀಡಿದ್ದಾರೆ. ಮಾತ್ರವಲ್ಲ, ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೂ ತಂದಿದ್ದಾರೆ.

One Comment

  1. sujalabudnar@gmail.com'

    Mrs. Sujala Sathish

    October 8, 2018 at 9:51 am

    Good job Sir…

Leave a Reply

Your email address will not be published. Required fields are marked *