Realtime blog statisticsweb statistics
udupibits.in
Breaking News
# ಮಾಹಿತಿ ಹಕ್ಕು ಕಾಯಿದೆ ಉಲ್ಲಂಘನೆ ಮಾಡಿದವರಿಗೆ ದಂಡ, ಅರ್ಜಿದಾರರಿಗೆ ಪರಿಹಾರ ಕೊಡಿಸುವಲ್ಲಿ ರಾಜ್ಯ ಮಾಹಿತಿ ಆಯುಕ್ತರುಗಳ ಹಿಂದೇಟು: ಶ್ರೀರಾಮ ದಿವಾಣ ಆರೋಪ.

ಘನತೆಯ ಬದುಕಿನಿಂದ ಮಹಿಳಾ ಸಬಲೀಕರಣ: ಕೆ.ಶಾರದಾ ಭಟ್

ಉಡುಪಿ: ಎಲ್ಲಿ ಮಹಿಳೆಯರಿಗೆ ಗೌರವ ಇಲ್ಲವೋ, ಅಲ್ಲಿನ ಎಲ್ಲಾ ಕಾರ್ಯಗಳೂ ವಿಫಲವಾಗುತ್ತವೆ. ಮಹಿಳೆಗೆ ಘನಸ್ಥಿಕೆಯ ಮತ್ತು ಗೌರವದ ಬದುಕು ಸಿಕ್ಕಿದಾಗ, ಆರ್ಥಿಕವಾಗಿ ಸಬಲಳಾದಾಗ ಮಾತ್ರ ಮಹಿಳೆ ಎಂದರೆ ಮಾತೆ, ಮಹಿಳೆ ಪೂಜನೀಯಳು ಎಂಬಿತ್ಯಾದಿ ಮಾತುಗಳಿಗೆ ಅರ್ಥ. ಈ ನಿಟ್ಟಿನಲ್ಲಿ ಮಹಾತ್ಮಾ ಗಾಂಧೀಜಿಯವರು ಮಹಿಳಾ ಸಬಲೀಕರಣಕ್ಕೆ ನೀಡಿದ ಕೊಡುಗೆ ಅನನ್ಯವಾದುದು ಎಂದು ಹಿರಿಯ ಕಥೆ-ಕಾದಂಬರಿಕಾರ್ತಿ, ಕವಿ, ಲೇಖಕಿ ಕೆ. ಶಾರದಾ ಭಟ್ ಅವರು ಹೇಳಿದರು.

ಉಡುಪಿ ಬೀಡಿನಗುಡ್ಡೆಯ ‘ಶ್ರೀ ಮುಖ್ಯಪ್ರಾಣ’ದಲ್ಲಿ ನಡೆದ ಜನಪರ ಚಿಂತನ ವೇದಿಕೆಯ ತಿಂಗಳ ಕಾರ್ಯಕ್ರಮದಲ್ಲಿ ‘ಮಹಿಳಾ ಸಬಲೀಕರಣ’ದ ಬಗ್ಗೆ ಉಪನ್ಯಾಸ ನೀಡಿ ಅವರು ಮಾತನಾಡುತ್ತಿದ್ದರು. ಮಹಿಳಾ ಸಬಲೀಕರಣಕ್ಕೆ ಅಪಾರ ಕೊಡುಗೆ ನೀಡಿದ ಮಹಿಳಾ ಸಾಧಕಿಯರ ಸಾಹಸಗಾಥೆಗಳನ್ನು ಶಾರದಾ ಭಟ್ ಅವರು ಸಭಿಕರ ಮುಂದೆ ಸೋದಾಹರಣವಾಗಿ ತೆರೆದಿಟ್ಟರು.

ಅಕ್ಷತಾ ವಿಶ್ವನಾಥ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜನಪರ ಚಿಂತನ ವೇದಿಕೆಯ ಅಧ್ಯಕ್ಷರಾಧ ಪ್ರಕಾಶ್ ಪೂಜಾರಿ ಪ್ರಸ್ತಾವನೆಗೈದರು. ಸುಮಾ ಜಿ. ಶೆಟ್ಟಿ ಸ್ವಾಗತಿಸಿದರು. ಸವಿತಾ ವಿ. ಶೆಟ್ಟಿ ವಂದಿಸಿದರು. ಶ್ರೀರಾಮ ದಿವಾಣ ಕಾರ್ಯಕ್ರಮ ನಿರ್ವಹಿಸಿದರು. ಕು.ಸ್ವರ್ಣಾ ಹಾಗೂ ಕು. ನವಮಿ ಪ್ರಾರ್ಥನಾ ಗೀತೆ ಹಾಡಿದರು.

Leave a Reply

Your email address will not be published. Required fields are marked *