Realtime blog statisticsweb statistics
udupibits.in
Breaking News
# ಮಾಹಿತಿ ಹಕ್ಕು ಕಾಯಿದೆ ಉಲ್ಲಂಘನೆ ಮಾಡಿದವರಿಗೆ ದಂಡ, ಅರ್ಜಿದಾರರಿಗೆ ಪರಿಹಾರ ಕೊಡಿಸುವಲ್ಲಿ ರಾಜ್ಯ ಮಾಹಿತಿ ಆಯುಕ್ತರುಗಳ ಹಿಂದೇಟು: ಶ್ರೀರಾಮ ದಿವಾಣ ಆರೋಪ.

ನರ್ಮ್ ಬಸ್ ಸೇವೆ: ಸಂಜೆ ಟ್ರಿಪ್ ಆರಂಭಿಸದ ಬಗ್ಗೆ ಎಸಿಬಿಗೆ ದೂರು

ಉಡುಪಿ: ಕೆಎಸ್‌ಆರ್‌ಟಿಸಿ ಉಡುಪಿ ಡಿಪೊ ಮ್ಯಾನೇಜರ್ ಉದಯಕುಮಾರ್ ಶೆಟ್ಟಿ ಅವರು ಜನರಿಗೆ ತೀರಾ ಅಗತ್ಯವಾಗಿದ್ದ ಮತ್ತು ಅನುಕೂಲವಾಗಿದ್ದ ಹಾಗೂ ಸರಕಾರಕ್ಕೆ ಆದಾಯದ ದೃಷ್ಟಿಯಿಂದಲೂ ಲಾಭದಾಯಕವಾಗಿದ್ದ ಸಂಜೆ ಗಂಟೆ 4.05 (ಉಡುಪಿಯಿಂದ ಮೂಡುಬೆಳ್ಳೆ), 5.20 (ಮೂಡುಬೆಳ್ಳೆಯಿಂದ ಉಡುಪಿ), 6.05 (ಉಡುಪಿಯಿಂದ ಮೂಡುಬೆಳ್ಳೆ) ಮತ್ತು 6.50 (ಮೂಡುಬೆಳ್ಳೆಯಿಂದ ಉಡುಪಿ) ಟ್ರಿಪ್‌ಗಳನ್ನು ಕಟ್ ಮಾಡಿದ್ದಾರೆ. ಅವರು ಆರ್ಥಿಕ ದೃಷ್ಟಿಯಿಂದಲೂ ಲಾಭದಾಯಕವಾಗಿರುವ ಈ ಟ್ರಿಪ್‌ಗಳನ್ನು ರದ್ದು ಮಾಡಿರುವ ಕ್ರಮ ಸರಿಯಲ್ಲ. ಸಾರಿಗೆ ನಿಯಮಗಳ ಅನುಸಾರವೂ ಬಸ್ ಪರ್ಮಿಟ್ ವೇಳೆಯಲ್ಲಿ ಸಂಚರಿಸುವುದು ಕಡ್ಡಾಯ ಎಂಬುದು ಸಾರಿಗೆ ಅಧಿಕಾರಿಗಳ ಅಭಿಪ್ರಾಯವೂ ಆಗಿದೆ. ಮಧ್ಯಾನ್ಹದ ಟ್ರಿಪ್‌ಗಳಿಗಿಂತಲೂ  ಸಂಜೆಯ ಟ್ರಿಪ್‌ಗಳು ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾದುದರಿಂದ ಸಂಜೆಯ ಟ್ರಿಪ್ ಗಳನ್ನು ಕಡ್ಡಾಯವಾಗಿ ಅನುಷ್ಠಾನಿಸಬೇಕು. ಆದುದರಿಂದ, ಈ ಬಗ್ಗೆ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಅವರು ಉಡುಪಿಯ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದಾರೆ.

ಸಂಜೆಯ ಟ್ರಿಪ್‌ಗಳನ್ನು ನಡೆಸಿದಾಗ ಮಾತ್ರವೇ ಬಸ್‌ನ ಕಡಿಮೆ ಕಲೆಕ್ಷನ್ ಇರುವ ಟ್ರಿಪ್‌ಗಳ ಆರ್ಥಿಕ ಹಿನ್ನಡೆಯನ್ನು ಸರಿ ಹೊಂದಿಸುವುದು ಸಾಧ್ಯವಾಗುತ್ತದೆ. ಮೇಲ್ನೋಟಕ್ಕೆ ಇದು ಮತ್ತೆ ನಷ್ಟದ ಲೆಕ್ಕಾಚಾರ ನೀಡಿ ಬಸ್ ನಿಲ್ಲಿಸುವ ಪ್ರಯತ್ನವೋ ಎಂಬಂತೆ ಕಾಣುತ್ತದೆ ಎಂದು ಅವರು ದೂರಿನಲ್ಲಿ ಕೆ ಎಸ್ ಆರ್ ಟಿ ಸಿ ಡಿಪೊ ಮ್ಯಾನೇಜರ್ ಕ್ರಮದ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *