Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಪ್ರಶಸ್ತಿ-ಪುರಸ್ಕಾರ ಪ್ರದಾನ, ನೂತನ 13 ಕೃತಿಗಳ ಬಿಡುಗಡೆ, ತಾಳಮದ್ದಳೆ

ಉಡುಪಿ: ಕಾರ್ಕಳ ತಾಲೂಕು ಕಾಂತಾವರದ ಕನ್ನಡ ಸಂಘ (ರಿ) ಇದರ 42ರ ಸಂಭ್ರಮವು ‘ಕಾಂತಾವರ ಉತ್ಸವ’ವಾಗಿ ವಿವಿಧ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನವೆಂಬರ್ 1 ಮತ್ತು 2ರಂದು ಕಾಂತಾವರ ಕನ್ನಡ ಭವನದಲ್ಲಿ ಜರುಗಿತು.

ನವೆಂಬರ್ ಒಂದು ಗುರುವಾರ ಮಧ್ಯಾಹ್ನ ಕೇಂದ್ರ ಸರಕಾರದ ಹಿರಿಯ ವಾರ್ತಾಧಿಕಾರಿ ಡಾ.ಟಿ.ಸಿ.ಪೂರ್ಣಿಮಾ ಮೈಸೂರು ಅವರು ಕಾಂತಾವರ ಉತ್ಸವವನ್ನು ಉದ್ಘಾಟಿಸಿದರು. ಸೆಲ್ಕೋ ಸೋಲಾರ್ ಲೈಟ್ ಪ್ರೈವೆಟ್ ಲಿಮಿಟೆಡ್ ನ ಪ್ರಧಾನ ನಿರ್ವಹಣಾಧಿಕಾರಿ ಮೋಹನ ಭಾಸ್ಕರ ಹೆಗಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ಹರಿಕೃಷ್ಣ ಪುನರೂರು ಅವರು ಪ್ರಶಸ್ತಿ ಮತ್ತು ದತ್ತಿ ನಿಧಿ ಪುರಸ್ಕಾರಗಳನ್ನು ಪ್ರಧಾನ ಮಾಡಿದರು.

 

ಪ್ರಶಸ್ತಿ ಪ್ರದಾನ

ಕರ್ನಾಟಕ ಸಾಂಸ್ಕೃತಿಕ ಏಕೀಕರಣ ಪ್ರಶಸ್ತಿಯನ್ನು ಕುಂಬಳೆಯ ಡಾ.ಹರಿಕೃಷ್ಣ ಭರಣ್ಯ, ವಿದ್ವತ್ ಪರಂಪರಾ ಪುರಸ್ಕಾರವನ್ನು ಬೆಂಗಳೂರಿನ ಕೆ.ಎಸ್.ನಾರಾಯಣಾಚಾರ್ಯ, ಸಂಶೋಧನಾ ಮಹೋಪಾಧ್ಯಾಯ ಪುರಸ್ಕಾರವನ್ನು ಬೆಂಗಳೂರಿನ ಡಿ.ವಿಷ್ಣು ಭಟ್ ಡೋಂಗ್ರೆ, ಕಾಂತಾವರ ಸಾಹಿತ್ಯ ಪುರಸ್ಕಾರವನ್ನು ಹೊನ್ನಾವರದ ಡಾ.ಶ್ರೀಪಾದ ಶೆಟ್ಟಿ ಹಾಗೂ ಕಾಂತಾವರ ಲಲಿತಕಲಾ ಪುರಸ್ಕಾರವನ್ನು ಸಾಗರದ ಡಾ. ಎಸ್. ಚಂದ್ರಗುತ್ತಿ ಅವರು ಸ್ವೀಕರಿಸಿದರು.

ಡಾ.ಹರಿಕೃಷ್ಣ ಭರಣ್ಯರಿಗೆ ಪ್ರಶಸ್ತಿ ಪ್ರದಾನ

ನವೆಂಬರ್ 2ರ ಬೆಳಗ್ಗೆ ‘ನಾಡಿಗೆ ನಮಸ್ಕಾರ’ ಗ್ರಂಥಮಾಲೆಯ ನೂತನ ಕೃತಿಗಳ ಬಿಡುಗಡೆ ಸಮಾರಂಭ ನಡೆಯಿತು. ಹಿರಿಯ ಪ್ರಶಸ್ತಿ ಪುರಸ್ಕೃತ ಪತ್ರಕರ್ತರೂ, ಸಮಾಜವಾದಿ ಹೋರಾಟಗಾರರೂ ಆದ ಮಣಿಪಾಲದ ಅಮ್ಮೆಂಬಳ ಆನಂದ ಅವರು ‘ನಾಡಿಗೆ ನಮಸ್ಕಾರ’ ಗ್ರಂಥಮಾಲೆಯ ನೂತನ 12 ಕೃತಿಗಳನ್ನು ಬಿಡುಗಡೆ ಮಾಡಿದರು.

ಕಾಂತಾವರ ಕನ್ನಡ ಸಂಘದ ‘ಸಂಸ್ಕೃತಿ ಸಂಭ್ರಮ ಮಾಲೆ’ಯ ನೂತನ ಕೃತಿ ಡಾ.ಹರಿಕೃಷ್ಣ ಭರಣ್ಯ ಅವರು ಸಂಪಾದಿಸಿದ ‘ಹವಿಗನ್ನಡದ ಸವಿನಾಟಕಗಳು’ ಕೃತಿಯನ್ನು ಮೂಡಬಿದಿರೆಯ ಎಂ.ಸಿ.ಎಸ್. ಬ್ಯಾಂಕ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಚಂದ್ರಶೇಖರ್ ಅವರು ಬಿಡುಗಡೆ ಮಾಡಿದರು. ಬೆಂಗಳೂರಿನ ಶ್ರೀ ಕಂಠೀರವ ಸ್ಟುಡಿಯೋದ ನಿರ್ದೇಶಕರಾದ ಕೆ. ಮೋಹನದೇವ ಆಳ್ವ ಅವರು ಅಧ್ಯಕ್ಷತೆ ವಹಿಸಿದ್ದರು. ಸಾಧಕರನ್ನು ಹಾಗೂ ಕೃತಿಕಾರರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಡಾ/ಹರಿಕೃಷ್ಣ ಭರಣ್ಯ ಸಂಪಾದಕತ್ವದ ‘ಹವಿಗನ್ನಡದ ಸವಿನಾಟಕಗಳು’ ಬಿಡುಗಡೆ ಮತ್ತು ‘ಹಿರಿಯ ಸಮಾಜವಾದಿ ಪತ್ರಕರ್ತ, ‘ಸಂಗಾತಿ’ಯ ಮ.ನವೀನಚಂದ್ರ ಪಾಲ್’ ಕೃತಿಯ ಲೇಖಕ ಶ್ರೀರಾಮ ದಿವಾಣರಿಗೆ ಸನ್ಮಾನ.

ಬಿಡುಗಡೆಯಾದ ‘ನಾಡಿಗೆ ನಮಸ್ಕಾರ’ ಕೃತಿಗಳು

ಉನ್ನತ ಶಿಕ್ಷಣ ತಜ್ಞ ಡಾ. ನಿಟ್ಟೆ ರಮಾನಂದ ಶೆಟ್ಟಿ (ಲೇಖಕರು: ಡಾ. ಎಚ್. ದಿವಾಕರ ಭಟ್ ಯಾಜಿ), ವಿದ್ವಾಂಸ ಪ್ರೊ. ಪಿ. ಸುಬ್ರಾಯ ಭಟ್ ಕಾಸರಗೋಡು (ಲೇ: ಡಾ. ಶ್ರೀಕೃಷ್ಣ ಭಟ್), ಸಾಹಿತಿ, ಸಂಶೋಧಕ ಸಿರಿಬಾಗಿಲು ವೆಂಕಪ್ಪಯ್ಯ (ಲೇ: ರಾಧಾಕೃಷ್ಣ ಉಳಿಯತ್ತಡ್ಕ), ಅಪ್ಪಟ ಸಮಾಜವಾದಿ, ಧೀಮಂತ ಪತ್ರಿಕೋದ್ಯಮಿ, ‘ಸಂಗಾತಿ’ ಮ. ನವೀನಚಂದ್ರ ಪಾಲ್ (ಲೇ: ಶ್ರೀರಾಮ ದಿವಾಣ), ವೇದಚ ವಿದ್ವಾಂಸ ವಿಷ್ಣು ಭಟ್ ಡೋಂಗ್ರೆ (ಲೇ: ಶ್ರೀಕರ ಭಟ್), ಶಾಸ್ತ್ರ ಸಾಹಿತ್ಯ ವಿಹಾರಿ ಡಾ. ಶ್ರೀಕೃಷ್ಣ ಭಟ್ (ಲೇ: ರಾಧಾಕೃಷ್ಣ ಬೆಳ್ಳೂರು), ಸಮಾಜಸೇವಕಿ ಹೀಲ್ಡಾ ರಾಯಪ್ಪನ್ (ಲೇ: ಬಿ.ಎಂ.ರೋಹಿಣಿ), ಶಿಕ್ಷಣ ತಜ್ಞ ಡಾ. ಚಂದ್ರಶೇಖರ ದಾಮ್ಲೆ (ಲೇ: ಡಾ. ದೀಪಾ ಫಡ್ಕೆ), ಗಮಕಿ ಚಂದ್ರಶೇಖರ ಕೆದಿಲಾಯ ಹಾರಾಡಿ (ಲೇ: ಸುರೇಂದ್ರ ಅಡಿಗ), ಸಮಾಜಸೇವಕಿ ಶ್ರೀಮತಿ ವಿಜಯಾ ವಿಷ್ಣು ಭಟ್ (ಲೇ: ಡಾ. ದೀಪಾ ಫಡ್ಕೆ), ಕಲಾವಿದ ತೀರ್ಥಹಳ್ಳಿ ಗೋಪಾಲ ಆಚಾರ್ (ಲೇ: ಡಾ. ರಮೇಶ್ ಆಚಾರ್).

ತಾಳಮದ್ದಳೆ

ಮಧ್ಯಾಹ್ನ ಸುರತ್ಕಲ್ ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಲಿ ಇದರ ಕಲಾವಿದರಿಂದ ಸುರತ್ಕಲ್ ವಾಸುದೇವ ರಾವ್ ಅವರ ನೇತೃತ್ವದಲ್ಲಿ ‘ಸುದರ್ಶನ ವಿಜಯ’ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಬಲಿಪ ಪ್ರಸಾದ ಭಟ್ (ಭಾಗವತರು), ಗಣೇಶ್ ಭಟ್ (ಮದ್ದಳೆ), ಶಿವಪ್ರಸಾದ್ ಪುನರೂರು (ಚೆಂಡೆ), ಸಹಕರಿಸಿದ್ದರು. ಮುಮ್ಮೇಳದಲ್ಲಿ ಸುಲೋಚನಾ ವಿ. ರಾವ್, ಜಯಂತಿ ಎಸ್. ಹೊಳ್ಳ, ಕೆ. ಕಲಾವತಿ, ಲಲಿತಾ ಭಟ್ ಹಾಗೂ ದೀಪ್ತಿ ಬಾಲಕೃಷ್ಣ ಭಟ್ ಭಾಗವಹಿಸಿದ್ದರು.

 

 

Leave a Reply

Your email address will not be published. Required fields are marked *