Realtime blog statisticsweb statistics
udupibits.in
Breaking News
ಉಡುಪಿ: ನೌಕರರಿಗೆ ಕಿರುಕುಳ ಆರೋಪ- ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಮಹೇಶ್ ಐತಾಳ್ ಅಮಾನತಿಗೆ ಶ್ರೀರಾಮ ದಿವಾಣ ಒತ್ತಾಯ

ಕನ್ನಡ ಬೇರಿಗೆ ಜಾಗತಿಕ ಭಾಷೆಗಳ ನೀರು ಹರಿದುಬರಲಿ: ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ

ಉಡುಪಿ: ಕನ್ನಡ ಭಾಷೆ, ಸಂಸ್ಕೃತಿ ಎಂಬುದು ಬೇರಾಗಬೇಕು. ಈ ಬೇರಿಗೆ ಜಾಗತಿಕ ಭಾಷೆಗಳ ನೀರು ಹರಿದು ಬಂದು ಕನ್ನಡದ ಮರ ಹೆಮ್ಮರವಾಗಿ, ಸಮೃದ್ಧವಾಗಿ ಬೆಳೆದು ಹೂ ಹಣ್ಣು ಕೊಡುವಂತಾಗಬೇಕು. ಯಾವುದೇ ಭಾಷೆಯಾಗಲಿ ಅದು ಪ್ರೀತಿಯಿಂದ ಕಲಿಯುವ ವಿಷಯವಾಗಬೇಕೇ ಹೊರತು ಧ್ವೇಷಕ್ಕೆ ಗುರಿಯಾಗಬಾರದು. ನಮ್ಮತನವನ್ನು ಗಟ್ಟಿಯಾಗಿ ಉಳಿಸಿಕೊಂಡರೆ, ಕೀಳಾಗಿ ಕಾಣದಿದ್ದರೆ ಕನ್ನಡ ಸಹಿತ ಯಾವುದೇ ಭಾಷೆಯನ್ನೂ ಯಾರಿಂದಲೂ ಸಾಯಿಸಲು ಸಾಧ್ಯವಿಲ್ಲ. ಕನ್ನಡ ಭಾಷೆಗೆ ಸಮಸ್ಯೆಯಾಗಿರುವುದು ಬೇರೆ ಭಾಷೆಗಳಿಂದಾಗಲೀ, ಬೇರೆ ಭಾಷೆಯ ಜನರಿಂದಾಗಲೀ ಅಲ್ಲ. ಕನ್ನಡಿಗರೇ ಕನ್ನಡ ಭಾಷೆಯನ್ನು ಹಾಳು ಮಾಡಿದ್ದಾರೆ. ಎಚ್.ಎಸ್.ವೆಂಕಟೇಶಮೂರ್ತಿಯವರು ಬರೆದ ‘ಎಲೆಗಳು ನೂರಾರು’ ಕವಿತೆಯ ಆಶಯ ಎಲ್ಲರದಾಗಬೇಕು ಎಂದು ಪತ್ರಕರ್ತ, ಸಾಮಾಜಿಕ ಕಾರ್ಯಕರ್ತ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಅವರು ಹೇಳಿದರು.

 

ಉಡುಪಿಯ ಬೀಡಿನಗುಡ್ಡೆಯಲ್ಲಿ ನವೆಂಬರ್ ೧೮ರಂದು ನಡೆದ ಜನಪರ ಚಿಂತನ ವೇದಿಕೆಯ ತಿಂಗಳ ಕಾರ್ಯಕ್ರಮದಲ್ಲಿ ‘ಭಾಷೆ: ಸಂಸ್ಕೃತಿ ವಾಹಕ’ ಎಂಬ ವಿಷಯದ ಬಗ್ಗೆ ಅವರು ಮಾತನಾಡುತ್ತಿದ್ದರು.

ಸಂತ ಶಿಶುನಾಳ ಶರೀಫರು, ಕುವೆಂಪು, ನಾಡೋಜ ಕೆ.ಪಿ. ರಾವ್, ಹಿರಿಯ ಲೇಖಕ ಎನ್. ಭವಾನಿಶಂಕರ್, ‘ಸಂಗಾತಿ’ಯ ಮ.ನವೀನಚಂದ್ರ ಪಾಲ್ ಸಹಿತ ಕನ್ನಡದ ಪ್ರಸಿದ್ಧ ಸಾಹಿತಿಗಳು, ಸಾಹಿತ್ಯ ಕೃತಿಗಳು, ಪತ್ರಿಕೆಗಳನ್ನು ಉಲ್ಲೇಖ ಮಾಡುವ ಮೂಲಕ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಹಿರಿಮೆ ಗರಿಮೆಯನ್ನು ಸೋದಾಹರಣವಾಗಿ ಅನಾವರಣಗೊಳಿಸಿದ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಅವರು, ಕನ್ನಡ ಮಾಧ್ಯಮ ಶಾಲೆಗಳಲ್ಲಿ ಇಂಗ್ಲೀಷ್ ಭಾಷೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತಾಗಬೇಕು. ಜ್ಞಾನದ ಮಟ್ಟದಲ್ಲಿ ಸಮಾನತೆ ಸಾಧಿಸುವ ನಿಟ್ಟಿನಲ್ಲಿ ಸರಕಾರ ಮತ್ತು ಕನ್ನಡಿಗರು ಚಿಂತನೆ ನಡೆಸುವಂತಾಗಬೇಕು ಎಂದು ತಿಳಿಸಿದರು.

ಪ್ರಶಾಂತ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಶ್ರೀರಾಮ ದಿವಾಣ ಪ್ರಸ್ತಾವನೆಗೈದರು. ಪ್ರಕಾಶ್ ಪೂಜಾರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕು. ನವಮಿ ಪೂಜಾರಿ ವಂದನಾರ್ಪಣೆ ಸಲ್ಲಿಸಿದರು. ಬಾಲಾಜಿ ಪೂಜಾರಿ ಪ್ರಾರ್ಥಿಸಿದರು.

Leave a Reply

Your email address will not be published. Required fields are marked *