Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ನರ್ಮ್ ಬಸ್ ಸೇವೆ ಸ್ಥಗಿತಗೊಳಿಸಲು ಅಧಿಕಾರಿಗಳ ಹುನ್ನಾರ

ಉಡುಪಿ: ಸಾರ್ವಜನಿಕರ ಹೋರಾಟದ ಫಲವಾಗಿ ಮೂಡುಬೆಳ್ಳೆ ಮತ್ತು ಶಿರ್ವಕ್ಕೆ ಇತ್ತೀಚೆಗಷ್ಟೇ ಮತ್ತೆ ಆರಂಭಗೊಂಡ ನರ್ಮ್ ಬಸ್ ಸೇವೆಯನ್ನು ಮಗುದೊಮ್ಮೆ ಸ್ಥಗಿತಗೊಳಿಸುವ ಹುನ್ನಾರಕ್ಕೆ ನರ್ಮ್ ಉಡುಪಿ ಡಿಪೋ ಮ್ಯಾನೇಜರ್ ಉದಯಕುಮಾರ್ ಶೆಟ್ಟಿ ಅವರು ಚಾಲನೆ ನೀಡಿದ್ದಾರೆ.

ಡಿಪೋ ಮ್ಯಾನೇಜರ್ ಅವರ ಹುನ್ನಾರದ ಭಾಗವಾಗಿ ನವೆಂಬರ್ 22ರಂದು ಮಧ್ಯಾಹ್ನ ನಂತರ ನರ್ಮ್ ಬಸ್ ಮೂಡುಬೆಳ್ಳೆಗೆ ಬಂದಿಲ್ಲ. ಕೆಲ ಸಮಯಗಳ ಟ್ರಿಪ್ ಗಳನ್ನು ಮಾಡದ ಕಾರಣ ಮತ್ತು ಒಂದೆರಡು ಟ್ರಿಪ್ ಗಳಲ್ಲಿ ನಿಗದಿತ ಸಮಯಕ್ಕೆ ಹತ್ತು ಹದಿನೈದು ನಿಮಿಷಗಳಷ್ಟು ಮೊದಲೇ ಮೂಡುಬೆಳ್ಳೆಯಿಂದ ಸಂಚಾರವನ್ನು ಆರಂಭಿಸುವ ಮೂಲಕ ಖಾಸಗೀ ಬಸ್ ಗಳಿಗೆ ಲಾಭ ಮಾಡಿಕೊಡುವ ಪ್ರಕ್ರಿಯೆಯನ್ನು ಅತ್ಯಂತ ವ್ಯವಸ್ಥಿತವಾಗಿ ಅಧಿಕಾರಿಗಳು ಜಾರಿಗೊಳಿಸಿದ್ದಾರೆ ಎಂದು ಸಾರ್ವಜನಿಕರು ಗಂಭೀರ ಆರೋಪ ಮಾಡಿದ್ದಾರೆ.

ಸಂಜೆಯ ಕೆಲವು ಟ್ರಿಪ್ ಗಳನ್ನು ನಡೆಸದೆಯೇ ಇರುವ ಬಗ್ಗೆ ಎಸಿಬಿಗೆ ಈಗಾಗಲೇ ದೂರು ನೀಡಲಾಗಿದೆ. ಈ ನಡುವೆಯೇ ಮತ್ತೆ ಒಂದೊಂದಾಗಿಯೇ ಒಂದೊಂದು ಟ್ರಿಪ್ ಗಳನ್ನು ನಿಲ್ಲಿಸುವ ಮೂಲಕ ನರ್ಮ್ ಗಳನ್ನು ನಂಬಿರುವ ಪ್ರಯಾಣಿಕರು ನರ್ಮ್ ಬಸ್ ಗಳ ಬಗ್ಗೆ ಭ್ರಮನಿರಸನಗೊಳ್ಳುವಂತೆ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ನರ್ಮ್ ಬಸ್ ಗಳನ್ನು  ಸಂಜೆಯ ನಿಗದಿತ ಸಮಯದಲ್ಲಿ ಬಿಡದೇ ಇರುವುದು, ಸಂಚರಿಸುವ ಸಮಯದಲ್ಲಿ ಉದ್ಧೇಶಪೂರ್ವಕ ಸಮಯದಲ್ಲಿ ವ್ಯತ್ಯಯವನ್ನು ಉಂಟುಮಾಡುವುದು, ದಿಢೀರನೇ ಕೆಲವೊಂದು ಟ್ರಿಪ್ ಗಳನ್ನೇ ಕಡಿತಗೊಳಿಸುವುದು ಇತ್ಯಾದಿ ಇತ್ತೀಚೆಗೆ ದೊಡ್ಡ ಪ್ರಮಾಣದಲ್ಲೇ ನಡೆಯುತ್ತಿದ್ದು, ಭ್ರಷ್ಟಾಚಾರವೇ ಇದಕ್ಕೆ ಕಾರಣವೆಂದು ದೂರಲಾಗುತ್ತಿದೆ.

ಡಿಪೋ ಮ್ಯಾನೇಜರ್ ಉದಯಕುಮಾರ್ ಶೆಟ್ಟಿಯವರ ಬೇಜವಾಬ್ದಾರಿ ಕ್ರಮಗಳು ಮತ್ತು ಖಾಸಗೀ ಬಸ್ ಗಳ ಪರವಾಗಿ ಅವರು ಮಾಡುತ್ತಿರುವ ಹುನ್ನಾರದ ವಿರುದ್ಧ ಮೂಡುಬೆಳ್ಳೆಯ ಸಾರ್ವಜನಿಕರು ನವೆಂಬರ್ 23ರಂದು ಮಂಗಳೂರು ವಲಯದ ಻ಧಿಕಾರಿಯವರಿಗೆ ಮೌಖಿಕ ದೂರು ನೀಡಿದ್ದಾರೆ. ಇದರ ಮುಂದಿನ ಪ್ರಕ್ರಿಯೆಯಾಗಿ ಶೀಘ್ರವೇ ಅಧಿಕಾರಿಗಳ ವಿರುದ್ಧ ನ್ಯಾಯಾಲಯದ ಮೊರೆ ಹೋಗಲು ಸಾರ್ವಜನಿಕರು ಚಿಂತನೆ ನಡೆಸಿದ್ದಾರೆ.

 

One Comment

  1. haiudupi@gmail.com'

    Janapara chinthana vedike

    November 24, 2018 at 9:52 pm

    Manager udaykumar shetty ge dikkaravirali

Leave a Reply

Cancel reply

Your email address will not be published. Required fields are marked *