Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ರಾಜ್ಯದ ಗ್ರಾಪಂಗಳಲ್ಲಿ ಕಾರ್ಮಿಕರ ನೋಂದಣಿಯಲ್ಲಿ ಗುತ್ತಿಗೆ ಕಂಪೆನಿಯಿಂದ ಬಹುಕೋಟಿ ಹಗರಣ !

ಉಡುಪಿ: ರಾಜ್ಯದಾದ್ಯಂತ ಗ್ರಾಮ ಪಂಚಾಯತ್‍ಗಳಲ್ಲಿ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಕಾರ್ಮಿಕರನ್ನು ನೋಂದಣಿ ಮಾಡುವ  ಪ್ರಕ್ರಿಯೆಗೆ ಸಂಬಂಧಿಸಿದಂತೆ ಕಾರ್ಮಿಕರನ್ನು ನೋಂದಣಿ ಮಾಡುವ ಗುತ್ತಿಗೆದಾರ ಕಂಪೆನಿಯು ಗ್ರಾಪಂ ಅಧಿಕೃತರ ಕೃಪಾಶೀರ್ವಾದೊಂದಿಗೆ  ಅಕ್ರಮವಾಗಿ ಶುಲ್ಕ ವಸೂಲಿ ಮಾಡುವ ಮೂಲಕ ಬಹುಕೋಟಿ ಮೊತ್ತದ ಅವ್ಯವಹಾರ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.

ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್‍ಗಳಲ್ಲಿಯೂ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ನಿರ್ಮಾಣ ಕೆಲಸಗಳನ್ನು ನಿರ್ವಹಿಸುವ ಕಾರ್ಮಿಕರನ್ನು ಗುರುತಿಸಿ ವಿವಿಧ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ಕಾರ್ಮಿಕರನ್ನು ನೋಂದಣೆ ಮಾಡುವ ಸಂಬಂಧ ಸರಕಾರ ಆದೇಶ ಹೊರಡಿಸಿದ್ದು, ‘ಐಕ್ಯ ಸಂಸ್ಥೆ’ಗೆ ರಾಜ್ಯಾದ್ಯಂತ ಈ ಕಾರ್ಯವನ್ನು ನಿರ್ವಹಿಸುವ ಗುತ್ತಿಗೆ ನೀಡಿದೆ. ಸರಕಾರದ ಆದೇಶದ ಪ್ರಕಾರ, ಕಾರ್ಮಿಕರಿಂದ ಯಾವುದೇ ರೀತಿಯ ಶುಲ್ಕವನ್ನೂ ಪಡೆದುಕೊಳ್ಳದೆ ನೋಂದಣಿ ಮಾಡುವಂತೆ ಸ್ಪಷ್ಟವಾಗಿ ನಿರ್ದೇಶಿಸಲಾಗಿದೆಯಲ್ಲದೆ, ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳುವಾಗ ಮಾತ್ರ ರೂ. 50ನ್ನು ಕಾರ್ಮಿಕರಿಂದ ಪಡೆದುಕೊಳ್ಳಬಹುದೆಂದು ತಿಳಿಸಲಾಗಿದೆ. ಆದರೆ ಗುತ್ತಿಗೆ ವಹಿಸಿಕೊಂಡಿರುವ ಐಕ್ಯ ಸಂಸ್ಥೆಯು  ಅನಧಿಕೃತವಾಗಿ ಕಾರ್ಮಿಕರಿಂದ ಬಹುತೇಕ ಎಲ್ಲಾ ಗ್ರಾಪಂಗಳಲ್ಲೂ ಕಾರ್ಮಿಕರಿಂದ ಅನಧಿಕೃತವಾಗಿ ಶುಲ್ಕ ವಸೂಲಿ ಮಾಡುತ್ತಿದೆ. ಗ್ರಾಪಂ ಅಧಿಕೃತರು ಸಹ ಈ ಬಹುಕೋಟಿ ಮೊತ್ತದ ಅವ್ಯವಹಾರದಲ್ಲಿ ಗೊತ್ತಿದ್ದೋ, ಗೊತ್ತಿಲ್ಲದೆಯೋ ಶಾಮೀಲಾಗಿದೆ.

ಗುತ್ತಿಗೆದಾರ ಐಕ್ಯ ಸಂಸ್ಥೆಯು ಗ್ರಾಪಂಗಳಿಂದ ನೋಂದಣಿ ಸಂದರ್ಭದಲ್ಲಿ ರೂ. 75ನ್ನು ಅಕ್ರಮವಾಗಿ ಪಡೆದುಕೊಳ್ಳುತ್ತಿದೆ. ಉಡುಪಿ ಜಿಲ್ಲೆಯ ಮಜೂರು, ಕಾಂತಾವರ, ತೆಂಕ ಮತ್ತಿತರ ಗ್ರಾಪಂಗಳಲ್ಲಿ ಈಗಾಗಲೇ ರೂ. 75 ಪಡೆದು ನೋಂದಣಿ ಮಾಡಲಾಗುತ್ತಿದೆ. ಈ ಹಣವನ್ನು ಅಕ್ರಮವಾಗಿ ಪಡೆದುಕೊಳ್ಳಲಾಗುತ್ತಿದ್ದು ಈ ಬಗ್ಗೆ ಪಿಡಿಒಗಳು, ಇಒ ಗಳು, ಜಿಪಂ ಸಿಇಒ ಮತ್ತು ಕಾರ್ಮಿಕ ಅಧಿಕಾರಿಗಳಿಗೆ ದೂರು ನೀಡಿದರೂ ಅವರ್ಯಾರೂ ಅವ್ಯವಹಾರ ನಿರತರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ಅನೇಕ ಸಂಶಯಗಳಿಗೆ ಕಾರಣವಾಗಿದೆ.

ಉಡುಪಿ ಜಿಲ್ಲೆಯ ಕಾಪು ತಾಲೂಕು ಬೆಳ್ಳೆ ಗ್ರಾಮ ಪಂಚಾಯತ್ ಗೆ ಸಂಬಂಧಿಸಿದಂತೆ, ಐಕ್ಯ ಕಂಪೆನಿಯ ಸೂಚನೆಯಂತೆ ಗ್ರಾಪಂ ರೂ. 75 ಪಾವತಿಸಲು ನೊಟೀಸನ್ನು ಹೊರಡಿಸಿದ್ದು, ಇದಕ್ಕೆ ಸಾರ್ವಜನಿಕರು ಮತ್ತು ಗ್ರಾಪಂ ಸದಸ್ಯರು ಸ್ಪಷ್ಟ ಆಕ್ಷೇಪವನ್ನು ವ್ಯಕ್ತಪಡಿಸಿ ಕಾರ್ಮಿಕ ಅಧಿಕಾರಿ ಮಲ್ಲಿಕಾರ್ಜುನ ಜೋಗುರ ಅವರಿಗೆ ದೂರು ನೀಡಿದ್ದರು. ಕಾರ್ಮಿಕ ಅಧಿಕಾರಿಯವರು ಈ ಸಂಬಂಧ ರೂ. 75 ಪಡೆಯುವುದು ಕಾನೂನು ಬಾಹಿರವೆಂದು ಸ್ಪಷ್ಟಪಡಿಸಿದ್ದು, ಸದ್ರಿ ನೊಟೀಸನ್ನು ಹಿಂಪಡೆಯುವಂತೆ ಐಕ್ಯ ಸಂಸ್ಥೆಗೆ ಆದೇಶಿಸಿದ್ದಾರೆ.

ಅನಧಿಕೃತ ಶುಲ್ಕ ವಸೂಲಿಗೆ ಆಕ್ಷೇಪ

ಬೆಳ್ಳೆ ಗ್ರಾಪಂಗೆ ಸಂಬಂಧಿಸಿದಂತೆ ಐಕ್ಯ ಸಂಸ್ಥೆಯ ಅವ್ಯವಹಾರಕ್ಕೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ ಕಾರಣ, ಅಸಮಾಧಾನಗೊಂಡಿರುವ ಗುತ್ತಿಗೆದಾರ ಸಂಸ್ಥೆಯಾದ ‘ಐಕ್ಯ’ದ ಅಧಿಕೃತರು ಇದೀಗ ಬೆಳ್ಳೆ ಗ್ರಾಪಂನಲ್ಲಿ ಕಾರ್ಮಿಕರನ್ನು ನೋಂದಣೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಆಕ್ಷೇಪ ವ್ಯಕ್ತಪಡಿಸಿದ ಇನ್ನೂ ಕೆಲವು ಗ್ರಾಪಂಗಳಿಗೆ ಸಂಬಂಧಿಸಿದಂತೆಯೂ ಗುತ್ತಿಗೆದಾರ ಸಂಸ್ಥೆಯ ಅಧಿಕೃತರು ಇದೇ ಧೋರಣೆಯನ್ನು ಅನುಸರಿಸುತ್ತಿದ್ದಾರೆನ್ನಲಾಗಿದೆ.

ಕಾರ್ಮಿಕ ಆಯುಕ್ತರಿಗೆ ದೂರು

ರಾಜ್ಯದಾದ್ಯಂತ ಗ್ರಾಪಂಗಳಲ್ಲಿ ಅಕ್ರಮವಾಗಿ ಅರ್ಜಿದಾರರಿಂದ ರೂ. 75 ಪಡೆಯುವುದರ ಜತೆಗೆ ಸರಕಾರ ನೀಡುವ ಹಣವನ್ನೂ ಪಡೆದುಕೊಳ್ಳುವ ಮೂಲಕ ಗುತ್ತಿಗೆದಾಋ ಕಂಪೆನಿಯಾದ ‘ಐಕ್ಯ’ವು ಬಹುಕೋಟಿ ಅವ್ಯವಹಾರ ನಡೆಸುತ್ತಿರುವ ಬಗ್ಗೆ ಬೆಳ್ಳೆ ಗ್ರಾಪಂ ಸದಸ್ಯ ಸುಧಾಕರ ಪೂಜಾರಿ, ಮಾಹಿತಿ ಹಕ್ಕು ಹೋರಾಟಗಾರ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಹಾಗೂ ಇತರರು ಸರಕಾರದ ಕಾರ್ಮಿಕ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *