Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಕಾಗದದಲ್ಲಷ್ಟೇ ಉಳಿದ ರಿಕ್ಷಾಗಳ ಕಲರ್ ಕೋಡಿಂಗ್ !

ಉಡುಪಿ: ಜಿಲ್ಲೆಯಲ್ಲಿ ನಗರ ಪ್ರದೇಶದಲ್ಲಿ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಬಾಡಿಗೆ ಮಾಡುವ ಆಟೋ ರಿಕ್ಷಾಗಳಿಗೆ ಪ್ರತ್ಯೇಕ ಕಲರ್ ಕೋಡಿಂಗ್ ಮಾಡಲು ಜಿಲ್ಲಾಡಳಿತ ಮತ್ತು ಸಾರಿಗೆ ಇಲಾಖೆ ತೆಗೆದುಕೊಂಡ ನಿರ್ಧಾರಕ್ಕೆ ಕೆಲ ತಿಂಗಳುಗಳೇ ಕಳೆದರೂ, ನಿರ್ಣಯ ಇನ್ನೂ ಸಹ ಕಾರ್ಯರೂಪಕ್ಕೆ ಬಾರದೆ ಕಾಗದದ ಮೇಲಷ್ಟೇ ಉಳಿದಿದೆ.

ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ರಿಕ್ಷಾಗಳಿಗೆ ಕಲರ್ ಕೋಡಿಂಗ್ ಮಾಡುವಂತೆ ಸಾರಿಗೆ ಇಲಾಖಾಧಿಕಾರಿಗಳಿಗೆ ಆದೇಶ ನೀಡಿದ್ದರು. ಆದೇಶ, ಆದೇಶವಾಗಿಯಷ್ಟೇ ಉಳಿದಿದೆ. ಆದೇಶದ ತರುವಾಯ ಕಲರ್ ಕೋಡಿಂಗ್ ಗೆ ಸಂಬಂಧಿಸಿದಂತೆ ಸಾರಿಗೆ ಇಲಾಖೆಯ ಅಧಿಕಾರಿಗಳು ಯಾವುದೇ ಪ್ರಕ್ರಿಯೆಯನ್ನೂ ಇದುವರೆಗೆ ನಡೆಸಿಲ್ಲ ಎಂದು ತಿಳಿದುಬಂದಿದೆ.

ಕಲರ್ ಕೋಡಿಂಗ್ ಸಂಬಂಧಿಸಿ ಸಾರಿಗೆ ಇಲಾಖೆಯ ಅಧಿಕಾರಿಗಳು ಮೊತ್ತ ಮೊದಲು ಪೊಲೀಸ್ ಇಲಾಖೆಯ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿ ಸಮನ್ವಯ ಸಾಧಿಸುವ ಕೆಲಸವಾಗಬೇಕಾಗಿದೆ. ಮೊದಲ ಹಂತದ ಈ ಮಾತುಕತೆಯನ್ನೇ ಇದುತನಕ ಸಾರಿಗೆ ಅಧಿಕಾರಿಗಳು ನಡೆಸದೆ ಜಿಲ್ಲಾಧಿಕಾರಿಗಳ ಆದೇಶವನ್ನು ನಿರ್ಲಕ್ಷಿಸಿದ್ದಾರೆನ್ನಲಾಗಿದೆ.

ಗ್ರಾಮಾಂತರ ಪ್ರದೇಶದ ಅನುಮತಿ ಪಡೆದುಕೊಂಡ ಅನೇಕ ರಿಕ್ಷಾಗಳು ಗ್ರಾಮಾಂತರ ಪ್ರದೇಶದಲ್ಲಿ ಬಾಡಿಗೆ ಮಾಡದೆ ನಗರ ಪ್ರದೇಶದಲ್ಲಿ ಬಾಡಿಗೆ ಮಾಡುತ್ತಿವೆ. ಇನ್ನು ಕೆಲವು ರಿಕ್ಷಾಗಳು ಗ್ರಾಮಾಂತರ ಮತ್ತು ನಗರ ಪ್ರದೇಶ ಎರಡೂ ಪ್ರದೇಶಗಳಲ್ಲೂ ಬಾಡಿಗೆ ಮಾಡುತ್ತಿವೆ. ಇದರಿಂದಾಗಿ ನಗರ ಪ್ರದೇಶದ ರಿಕ್ಷಾ ಚಾಲಕರಿಗೆ ಸಮಸ್ಯೆಯಾಗಿದೆ.

ನಗರ ಪ್ರದೇಶದ ರಿಕ್ಷಾಗಳಿಗೆ ವಲಯ ಒಂದು ಎಂದೂ, ಗ್ರಾಮಾಂತರ ಪ್ರದೇಶದ ರಿಕ್ಷಾಗಳನ್ನು ವಲಯ ಎರಡು ಎಂದು ಗುರುತಿಸಲು ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಜಿಲ್ಲಾಡಳಿತದ ಈ ನಿರ್ಣಯ ಜಾರಿಗೆ ಬಂದಲ್ಲಿ ನಗರ ಪ್ರದೇಶದ ರಿಕ್ಷಾ ಚಾಲಕರು ಒಂದಷ್ಟು ಸಮಾಧಾನ ಪಟ್ಟುಕೊಳ್ಳಬಹುದಾಗಿದೆ. ಇಲ್ಲವಾದರೆ ನಗರ ಪ್ರದೇಶದ ರಿಕ್ಷಾ ಚಾಲಜಕರ ಹೊಟ್ಟೆಗೆ ಹೊಡೆದಂತೆಯೇ ಸರಿ.

ನಿರ್ಧಾರಗಳು ಜಾರಿಯಾದಾಗ ಮಾತ್ರ ಯಾರಿಗಾದರೂ ಪ್ರಯೋಜನಕಾರಿಯಾಗುತ್ತವೆ. ಇಲ್ಲವಾದರೆ ಸಭೆಗಳು, ನಿರ್ಣಯಗಳು ಪುಸ್ತಕದಲ್ಲಷ್ಟೇ ಉಳಿದುಬಿಡುತ್ತವೆ.

Leave a Reply

Your email address will not be published. Required fields are marked *