Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲೆಯ 25 ಮಂದಿ ಪೊಲೀಸ್ ವಾಹನ ಚಾಲಕ ಸಿಬ್ಬಂದಿಗಳ ಪರಸ್ಪರ ವರ್ಗಾವಣೆ.

ಹಾವು-ಬನ ಉಳಿದರೆ ನಾಡು ಉಳಿದೀತು, ನೆಮ್ಮದಿಯ ನಾಳೆ ನಮ್ಮದಾದೀತು: ಉರಗ ವಿಜ್ಞಾನಿ ಗುರುರಾಜ ಸನಿಲ್

ಉಡುಪಿ: ಪರಿಸರದ ಜೊತೆಗೆ ಸಹಜೀವನ ನಡೆಸುತ್ತಿರುವ ಮುಗ್ದ ಸರೀಸೃಪಗಳನ್ನು ತಪ್ಪು ತಿಳುವಳಿಕೆಯಿಂದ, ಮೌಢ್ಯತೆಗೆ ಬಲಿಯಾಗಿ ಅಸಹ್ಯವಾಗಿ ನೋಡುವುದಾಗಲೀ, ಭಯದಿಂದ ಹಿಂಸಿಸುವುದಾಗಲೀ, ಕೊಲ್ಲುವುದಾಗಲೀ ಸರಿಯಲ್ಲ. ಭೂಮಿಯನ್ನು ಸಹ್ಯವನ್ನಾಗಿ ಇರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಸರೀಸೃಪಗಳನ್ನು ಪ್ರೀತಿಯಿಂದ ಕಾಣುತ್ತಾ, ಕಾಡು ಬೆಳೆಸುತ್ತಾ ಪ್ರಕೃತಿಪ್ರಿಯರಾಗಿ ಬದುಕು ಸಾಗಿಸಿದರೆ ನಾಡು ನಾಡಾಗಿ ಉಳಿದೀತು, ನೆಮ್ಮದಿಯ ನಾಳೆ ನಮ್ಮದಾದೀತು ಎಂದು ಉರಗ ವಿಜ್ಞಾನಿ ಗುರುರಾಜ ಸನಿಲ್ ಹೇಳಿದರು.

ಡಿಸೆಂಬರ್ ೧೬ರಂದು ಉಡುಪಿ ಬೀಡಿನಗುಡ್ಡೆಯ ‘ಶ್ರೀ ಮುಖ್ಯಪ್ರಾಣ’ದಲ್ಲಿ ನಡೆದ ‘ಜನಪರ ಚಿಂತನ ವೇದಿಕೆ’ಯ ತಿಂಗಳ ಕಾರ್ಯಕ್ರಮದಲ್ಲಿ ‘ಹಾವು – ನಾವು’ ಎಂಬ ಬಗ್ಗೆ ಪ್ರಾತ್ಯಕ್ಷಿಕೆ, ಸಂವಾದ ಸಹಿತ ನಡೆಸಿದ ಜನಜಾಗೃತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ವಿವಿಧ ಔಷಧೀಯ ಗಿಡ ಮರಗಳಿರುವ ನಾಗಗಳ ಸಹಿತ ಹಲವು ಪ್ರಾಣಿ ಪಕ್ಷಿಗಳಿಗೆ ಆಶ್ರಯತಾಣವಾಗಿರುವ ಬನಗಳನ್ನು ಉಳಿಸುವ ಕೆಲಸ ಆದ್ಯತೆಯದ್ದಾಗಬೇಕು ಎಂದು ತಿಳಿಸಿದ ಸಂಶೋಧಕರೂ, ಲೇಖಕರು, ಕಥೆಗಾರರೂ ಆದ ಗುರುರಾಜ ಸನಿಲ್ ಅವರು ಹಾವುಗಳ ಗುಣ ಸ್ವಭಾವಗಳ ಬಗ್ಗೆ ಪ್ರಾತ್ಯಕ್ಷಿಕೆ ಸಹಿತ ಪರಿಣಾಮಕಾರಿಯಾಗಿ ಜನರ ಮುಂದಿಡುವ ಮೂಲಕ ಜನರಲ್ಲಿದ್ದ ತಪ್ಪು ಕಲ್ಪನೆಗಳನ್ನು ದೂರಮಾಡುವಲ್ಲಿ ಯಶಸ್ವಿಯಾದರು. ವೀಕ್ಷಕರ ಹಲವು ಪ್ರಶ್ನೆಗಳಿಗೆ ಸಮರ್ಥವಾಗಿ ವೈಜ್ಞಾನಿಕ ಉದಾಹರಣೆಗಳೊಂದಿಗೆ ಉತ್ತರಿಸಿದರು.

ಹಾವುಗಳು ಕಡಿದಾಗ ಮಾಡಬೇಕಾದ ಪ್ರಥಮ ಚಿಕಿತ್ಸೆ ಬಗ್ಗೆಯೂ ಗುರುರಾಜ ಸನಿಲ್ ಅವರು ಪ್ರಾತ್ಯಕ್ಷಿಕೆ ಸಹಿತ ವಿವರಿ ನೀಡಿದರು. ಉಪನ್ಯಾಸ ಕಾರ್ಯಕ್ರಮಕ್ಕೂ ಮೊದಲು ನಡೆಸಿದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಗುರುರಾಜ ಸನಿಲ್ ಬಹುಮಾನಗಳನ್ನು ವಿತರಿಸಿದರು.

ಶ್ರೀಮತಿ ಭಾರತಿ ಚಿಟ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ಶ್ರೀರಾಮ ದಿವಾಣ ಪ್ರಸ್ತಾವನೆಗೈದರು. ಪ್ರಶಾಂತ್ ಪೂಜಾರಿ ಸ್ವಾಗತಿಸಿದರು. ಅಕ್ಷತಾ ವಿಶ್ವನಾಥ್ ವಂದಿಸಿದರು. ಪಂಚಮಿ ಪೂಜಾರಿ ಜಾನಪದ ಗೀತೆ ಹಾಡಿದರು. ಪ್ರಕಾಶ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

 

 

 

Leave a Reply

Your email address will not be published. Required fields are marked *