Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಹಿರಿಯಡ್ಕ ಗಾಯತ್ರಿ ಧ್ಯಾನ ಮಂದಿರದ 8ನೇ ವಾರ್ಷಿಕೋತ್ಸವ ಸಂಪನ್ನ

ಉಡುಪಿ: ಹಿರಿಯಡ್ಕದ ಗಾಯತ್ರಿ ಧ್ಯಾನ ಮಂದಿರದ ಎಂಟನೇ ವಾರ್ಷಿಕೋತ್ಸವವು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಡಿಸೆಂಬರ್ 25ರಂದು ಜರುಗಿತು.

ಬೆಳಗ್ಗೆ ಗಾಯತ್ರಿ ಯಜ್ಞ ಮತ್ತು ಮಧ್ಯಾಹ್ನ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು. ಬೆಂಗಳೂರಿನ ಕು. ಹಿರಣ್ಮಯಿ ಎಸ್. ಅವರು ಹಿಂದೂಸ್ತಾನೀ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಬೆಂಗಳೂರಿನ ಕಾಲೇಜಿನಲ್ಲಿ ಅಂತಿಮ ಬಿಕಾಂ ವಿದ್ಯಾರ್ಥಿನಿಯಾಗಿರುವ ಹಿರಣ್ಮಯಿ ಅವರು, ಪ್ರಖ್ಯಾತ ಹಿಂದೂಸ್ಥಾನೀ ಗಾಯಕರಾದ ಉಸ್ತಾದ್ ಫಯಾಝ್ ಖಾನ್ ಅವರ ಶಿಷ್ಯೆಯಾದ ಹಿರಣ್ಮಯಿ ಅವರು, ಕಲ್ಕತ್ತಾದಲ್ಲಿ ಹಿಂದೂಸ್ತಾನೀ ಸಂಗೀತದ ವಿಶೇಷ ಅಧ್ಯಯನದಲ್ಲಿ ನಿರತರಾಗಿದ್ದಾರೆ. ಆಕಾಶವಾಣಿ ನಡೆಸಿದ ಸಂಗೀತ ಸ್ಪರ್ಧೆಯಲ್ಲಿ ಮೂರು ಬಾರಿ ಬಹುಮಾನಗಳನ್ನು ಪಡೆದುಕೊಂಡಾಕೆ ಕು. ಹಿರಣ್ಮಯಿ ಎಸ್.

ಹಾರ್ಮೋನಿಯಂನಲ್ಲಿ ಶಿರಸಿಯ ಭರತ್ ಹೆಗಡೆ ಹಾಗೂ ತಬಲಾದಲ್ಲಿ ಬೆಂಗಳೂರಿನ ಶ್ರೀಧರ್ ಸಹಕರಿಸಿದ್ದರು. ಮಣಿಪಾಲದ ಎಂಐಟಿ ಕಾಲೇಜಿನ ಪ್ರಾಧ್ಯಾಪಕರಾದ ಉದಯಶಂಕರ ಭಟ್ ಅವರು ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಗಾಯತ್ರಿ ಧ್ಯಾನ ಮಂದಿರದ ಗಾಯತ್ರಿ ಉಪಾಸಕರಾದ ರಾಜಗೋಪಾಲ್ ಎಂ., ಗೋವಿಂದಾಚಾರ್ಯ ಮೊದಲಾದವರು ಉಪಸ್ಥಿತರಿದ್ದರು. ರಾಘವೇಂದ್ರ ಸಾಮಗ ಅವರು ಸಾಮಗಾನದ ಮೂಲಕ ಪ್ರಾರ್ಥಿಸಿದರು. ಡಾ. ಎಂ. ಕೆ. ಶ್ರೀಶ ಕುಮಾರ್ ಅವರು ಕಾರ್ಯಕ್ರಮ ನಿರೂಪಿಸಿದರು.

 

 

Leave a Reply

Your email address will not be published. Required fields are marked *