Realtime blog statisticsweb statistics
udupibits.in
Breaking News
ಉಡುಪಿ: ಕನಿಷ್ಠ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ನಗರಸಭೆ, ಜಿಲ್ಲಾಡಳಿತ, ರಾಜ್ಯ-ಕೇಂದ್ರ ಸರಕಾರ ಸಂಪೂರ್ಣ ವಿಫಲ !

ಶ್ರೀರಾಮ ದಿವಾಣರ ಮಿನಿ ಕವನಗಳು

# ತೆವಲು

ಇಂದು ದಿನನಿತ್ಯದ ಸುಪ್ರಭಾತವು ಇಲ್ಲ

ವಿಷ್ಣು ಸಹಸ್ರನಾಮವು ಇಲ್ಲ

ಆಯತಾನಾಂಬವತಿಯು ಇಲ್ಲ

ಮೈಕಾಸುರನ ಆರ್ಭಟವೂ ಇಲ್ಲ

ಮಹಾಪೂಜೆಗೆ ಬೆಡಿಯು ಬೇಡ

ದೂರದೂರಿನಿಂದ ಬಂದ ಭಕ್ತರಲ್ಲಲ್ಲೇ

ದೂರದಿಂದಲೇ ಕೈಮುಗಿದು

ಕಾಣಿಕೆ ಹಾಕದೆ

ಹರಕೆ ತೀರಿಸದೆ

ಮರಳಿದರು

ಆದರು ನಮಗೇನೂ ವಿಷಾದವಿಲ್ಲ

ನಾಳೆ ಮತ್ತೆ ತೋರಿಸುವೆವು ಕಲ್ಲಲ್ಲೇ ದೇವರನು

ನೋಡಿ ಪುಳಕಿತರಾಗಬಹುದು

ಭಕ್ತರ ವರಮಾನ

ನಮಗೆ ವರದಾನ

ಇಂದು ಪ್ರಚಾರವೇ ಮುಖ್ಯ

ಬರುವರು ಗಣ್ಯರು

ಈಗ ಸರ್ವಸಂಗ ಪರಿತ್ಯಾಗಿಗಳಾದ ನಮ್ಮ

ತೆವಲು ತೀರಿಸಿಕೊಳ್ಳುವುದೇ

ಮುಖ್ಯ

ಉಳಿದುದೆಲ್ಲವೂ ಅಮುಖ್ಯ !

# ಸರ್ವಸಂಗ ಪರಿತ್ಯಾಗಿ

ಇವರು ಸರ್ವಸಂಗ ಪರಿತ್ಯಾಗಿ

ಮಠದ ಪೀಠಾಧಿಪತಿಯಾಗಿ

ಪೂರ್ವಾಶ್ರಮದ ಆಪ್ತ

ಬಂಧುಗಳ ಭದ್ರಕೋಟೆಯಲಿ

ವಿರಾಜಮಾನ

ಪುಢಾರಿಗಳ, ಉದ್ಯಮಿಗಳ

ಸರ್ವಸಂಗ

ಚಾತುರ್ಮಾಸದಲು ಭರತನಾಟ್ಯ

ಕೃಷ್ಣ ರಾಧೆಯರ ಸರಸ ಸಲ್ಲಾಪದ

ಮನದಣಿಯೆ ಆಸ್ವಾದ

ಹೊಗಳಿಕೆಯೆ ಪ್ರೀತಿ

ಪ್ರಚಾರವೇ ನೀತಿ

ಆಚರಣೆಗಳ ತೆವಲು

ಎಂಭತ್ತರ ಅರಳು ಮರಳಿಗೆ

ಜನರಿಗೂ, ಸರಕಾರಕ್ಕೂ

ಕಷ್ಟ- ನಷ್ಟ !

# ನಿತ್ಯಶಾಖೆ

ವಿಷ ಉಣಿಸಿ

ಧ್ವೇಷ ಬೆಳೆಸಿ

ಹೊಡಿ ಬಡಿ ಕಲಿಸಿ

ದೇವರು ಧರ್ಮ

ದೇಶಪ್ರೇಮದ

ಹೆಸರಲ್ಲಿ ಹಿಂಸೆ

ಅಸಹಿಷ್ಣುತೆ

ನಿತ್ಯಶಾಖೆಯಾಗುತ್ತದೆ !

# ಮುಟ್ಟು

ರಾತ್ರಿ ನಿದ್ದೆಯಲೂ

ಗಂಡಸಿಗೆ ಸ್ಕಲನ

ವಾದರೂ ಇದೆಯಂತೆ

ಪವಿತ್ರತೆ

ಹುಟ್ಟಿಗೆ ಮೂಲವಾದ

ಮುಟ್ಟುವಿಕೆಗೆ

ಹೆಣ್ಣಾಗುವಳಂತೆ

ಅಪವಿತ್ರತೆ !

# ಕಾಣಿಕೆ

ಮುಜರಾಯಿ

ದೇವಾಲಯ

ಹುಂಡಿಗೆ

ಸಂಘ ದಕ್ಷರು

ಹಾಕಲ್ವಂತೆ

ಕಾಣಿಕೆ

ಇಲ್ಲೆಲ್ಲ ಗುಪ್ತಸಭೆ

ದುಷ್ಟ ರಾಜಕೀಯ

ಮಾಡೋಕಾಗಲ್ವಂತೆ

ದುರ್ಬಳಕೆ !

 

# ಮಟ್ಕಾ ದಂಧೆ

ತಮ್ಮ

ಗಾಂಜಾ ಮಾಫಿಯ

ಅಣ್ಣ

ಅದಕ್ಕಿರಬೇಕು

ಮುಟ್ಟಬೇಕಾದವರ

ಮುಟ್ಟುವುದಿಲ್ಲ ಪೊಲೀಸ

ಬಯಲಾಗುವುದಿಲ್ಲ

ಸೂತ್ರಧಾರ !

  • ಶ್ರೀರಾಮ ದಿವಾಣ

 

Leave a Reply

Your email address will not be published. Required fields are marked *