Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

‘ಉಡುಪಿಬಿಟ್ಸ್ ಶತಮಾನದ ಶಕ್ತಿ’ ಗೌರವಕ್ಕೆ ಕುಂದಾಪುರದ ಎಂ.ಜೆ.ಹೆಗ್ಡೆ ಮುಂಬೈ ಆಯ್ಕೆ

ಉಡುಪಿ: www.udupibits.in ಜಾಲತಾಣ ಸಂಸ್ಥೆಯು ವಾರ್ಷಿಕವಾಗಿ ಕೊಡಮಾಡುವ 2018ನೇ ಸಾಲಿನ ‘ಉಡುಪಿಬಿಟ್ಸ್ ಶತಮಾನದ ಶಕ್ತಿ’ ಗೌರವಕ್ಕೆ ಹಿರಿಯ ಲೇಖಕ, ಸಮಾಜವಾದಿ ಹೋರಾಟಗಾರ, ಕಾರ್ಮಿಕ ಮುಂದಾಳು, ಮುಂಬೈ ಮಹಾನಗರಪಾಲಿಕೆಯ ಮಾಜಿ ಸದಸ್ಯರಾದ ಎಂ. ಜೆ. ಹೆಗ್ಡೆ (ಮೂಡ್ಲಕಟ್ಟೆ ಜಗನ್ನಾಥ) ಅವರು ಆಯ್ಕೆಯಾಗಿದ್ದಾರೆ.

ಮೂಲತಹ ಕುಂದಾಪುರ ತಾಲೂಕು ಮೂಡ್ಲಕಟ್ಟೆಯವರಾಗಿರುವ ಎಂ.ಜೆ.ಹೆಗ್ಡೆ ಅವರು ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿ ನಾಯಕನಾಗಿ, ಬಳಿಕ ಸಮಾಜವಾದಿ ಹೋರಾಟಗಾರರಾಗಿ, ಲೇಖಕರಾಗಿ, ಕಥೆಗಾರರಾಗಿ, ಮುಂಬೈ ವಾಸಿಯಾದ ಬಳಿಕ ಕಾರ್ಮಿಕ ಮುಂದಾಳುವಾಗಿ, ಮುಂಬೈ ಮಹಾನಗರಪಾಲಿಕೆಯ ಮೂರು ಅವಧಿಯಲ್ಲಿ ಸದಸ್ಯರಾಗಿ, ಮುಂಬೈ ಹೈಕೋರ್ಟ್‌ನ ಹಿರಿಯ ನ್ಯಾಯವಾದಿಯಾಗಿ ಸೇವೆ ಸಲ್ಲಿಸಿದವರು.

ಪ್ರಾಮಾಣಿಕತೆ, ಕರ್ತವ್ಯನಿಷ್ಠೆ, ದಕ್ಷತೆ ಮತ್ತು ಜೀವಮಾನ ಶ್ರೇಷ್ಟ ಸಾಧನೆಯನ್ನು ಗುರುತಿಸಿ ಎಂ. ಜೆ. ಹೆಗ್ಡೆ ಅವರನ್ನು ಶತಮಾನದ ಶಕ್ತಿ ಗೌರವಕ್ಕೆ ಆಯ್ಕೆ ಮಾಡಲಾಗಿದೆ. 2015ನೇ ಸಾಲಿನಲ್ಲಿ ಹಿರಿಯ ಗ್ರಾಹಕ ವ್ಯಾಜ್ಯಗಳ ನ್ಯಾಯವಾದಿ ಪಿ.ಆರ್.ಭಂಡಾರ್ಕರ್, 2016ನೇ ಸಾಲಿನಲ್ಲಿ ಹಿರಿಯ ಮಾಹಿತಿ ಹಕ್ಕು ಹೋರಾಟಗಾರರಾದ ಕೆ. ಎಸ್. ಉಪಾಧ್ಯ ಕಡಿಯಾಳಿ ಹಾಗೂ 2017ನೇ ಸಾಲಿನಲ್ಲಿ ಕೇರಳ – ಕರ್ನಾಟಕ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಗೌರವಾಧ್ಯಕ್ಷರಾದ ಪಳ್ಳಿ ಗೋಕುಲದಾಸ್ ಅವರನ್ನು ಆಯ್ಕೆಮಾಡಲಾಗಿತ್ತು ಎಂದು ಉಡುಪಿಬಿಟ್ಸ್ ಡಾಟ್ ಇನ್ ಜಾಲತಾಣದ ಸಂಪಾದಕರಾದ ಶ್ರೀರಾಮ ದಿವಾಣ ತಿಳಿಸಿದ್ದಾರೆ.

Leave a Reply

Your email address will not be published. Required fields are marked *