Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಮರಳುಗಾರಿಕೆ: ಪರಿಸರಸ್ನೇಹಿ ನಿಯಮ ರೂಪಿಸಿ ಜಿಲ್ಲಾಡಳಿತಕ್ಕೆ ಲಿಖಿತ ನಿರ್ದೇಶನ ನೀಡಲು ಸಿಎಂಗೆ ಮನವಿ

ಉಡುಪಿ: ಕರಾವಳಿ ಜಿಲ್ಲೆಗಳ ಮರಳುಗಾರಿಕೆ ಸಮಸ್ಯೆ, ಸಾಧಕ ಬಾಧಕ, ಪರಿಹಾರ ಸೂತ್ರ ಇತ್ಯಾದಿಗಳ ಬಗ್ಗೆ ಅಧ್ಯಯನ ನಡೆಸಿದ ಸಭೆಯಲ್ಲಿ ಚರ್ಚೆ ನಡೆಸಿದ ಬಳಿಕ ಉಡುಪಿ ಜಿಲ್ಲಾ ಹಿತರಕ್ಷಣಾ ವೇದಿಕೆಯು ಈ ಸಂಬಂಧ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ, ಮುಖ್ಯ ಕಾರ್ಯದರ್ಶಿ, ಗಣಿ ಮತ್ತು ಭೂವಿಜ್ಞಾನ ಸಚಿವರಿಗೆ, ಇಲಾಖಾ ಕಾರ್ಯದರ್ಶಿಗಳು ಮೊದಲಾದವರಿಗೆ ಲಿಖಿತ ಪತ್ರ ಬರೆದು ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದೆ. ಮನವಿ ಪತ್ರದ ಪೂರ್ಣ ಪಾಠವನ್ನು ಈ ಕೆಳಗೆ ಕೊಡಲಾಗಿದೆ.

ಉಡುಪಿ ಜಿಲ್ಲೆಯ ಜನತೆಯ ವೈಯಕ್ತಿಕ ಹಿತಾಸಕ್ತಿಗಾಗಿ ಮತ್ತು ಜಿಲ್ಲೆಯ ಮೂಲಭೂತ ಸೌಕರ್‍ಯಗಳ ಅಭಿವೃದ್ಧಿಗೆ ಅತ್ಯಾವಶ್ಯಕ ಸಂಪನ್ಮೂಲವಾದ ಮರಳನ್ನು ಒದಗಿಸುವಲ್ಲಿ ಅಸ್ಪಷ್ಟ ಮರಳುಗಾರಿಕೆ ನಿಯಮದಿಂದಾಗಿ ಜಿಲ್ಲಾಡಳಿತ ವಿಫಲವಾಗಿದೆ. ಈ ಕಾನೂನಿನ ಅಸ್ಪಷ್ಟತೆಯ ಸಕಾರಣವನ್ನುಇಟ್ಟುಕೊಂಡು ಸ್ಥಾಪಿತ ಹಿತಾಸಕ್ತಿಗಳ, ಉದ್ಯಮಿಗಳ, ಬಂಡವಾಳಶಾಹಿಗಳ, ಧಾರ್ಮಿಕ ಮುಂದಾಳುಗಳ, ಸಾರಿಗೆ ಉದ್ಯಮಿಗಳ, ಮೀನುಗಾರರ, ವಿವಿಧ ಸಂಘಟನೆಗಳ ಸಹಕಾರವನ್ನು ಮರಳುಗಾರಿಕೆ ಹೋರಾಟದ ಉದ್ಧೇಶಕ್ಕೆ ಪಡೆದು ಜಿಲ್ಲೆಯಲ್ಲಿ ಮರಳುಗಾರಿಕೆಯನ್ನು ಕಾನೂನು ಬದ್ಧವಾಗಿ ನಡೆಸಲು ಜಿಲ್ಲಾಡಳಿತ ಕ್ರಮ ಕೈಗೊಂಡರೂ, ಬ್ಲಾಕ್‌ಮೇಲ್‌ ತಂತ್ರ ಉಪಯೋಗಿಸಿ ಜಿಲ್ಲಾಡಳಿತವೇ ಮರಳುಗಾರಿಕೆಗೆ ಕ್ರಮ ಕೈಗೊಂಡಿಲ್ಲ ಎಂದು ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೂ ರಾಜಕೀಯ ಪ್ರಭಾವ ಬಳಸಿ ಮರಳುಗಾರಿಕೆ ಜಿಲ್ಲೆಯಾದಾದ್ಯಂತ ಆರಂಭಿಸಲು ಕಾನೂನಿನಲ್ಲಿ ಅವಕಾಶವಿಲ್ಲದವರಿಗೂ ಪರವಾನಿಗೆ ಕೊಡಿಸಿ ಅಕ್ರಮ ಮರಳುಗಾರಿಕೆಯನ್ನು ಸಕ್ರಮ ಪರವಾನಿಗೆಯ ಮೂಲಕ, ಬೇನಾಮಿ ವ್ಯಕ್ತಿಗಳ ಮೂಲಕ ಪರವಾನಿಗೆ ಪಡೆದು ಅಕ್ರಮವನ್ನು ಸಕ್ರಮಗೊಳಿಸುವ ಹುನ್ನಾರ ಅಡಗಿದೆ. ಈ ಹುನ್ನಾರವನ್ನು ಬೇರು ಸಹಿತ ತೊಡೆದು ಹಾಕಬೇಕಾದರೆ ಪರಿಸರ ಸ್ನೇಹಿ ಮರಳುಗಾರಿಕೆ ನಿಯಮ ರೂಪಿಸುವುದು ಅತ್ಯಗತ್ಯ.

ಕೇಂದ್ರ ಸರಕಾರದ ನಿರ್ದೇಶನದಂತೆ ರಾಜ್ಯ ಸರಕಾರ ತಕ್ಷಣ ಉಡುಪಿ ಜಿಲ್ಲೆ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಮರಳುಗಾರಿಕೆಗೆ ನಿಯಮವನ್ನುನೈಜಕಾರ್ಮಿಕರ ಪರವಾಗಿ ಮಾರ್ಪಾಡುಗೊಳಿಸಿ ತಕ್ಷಣ ಮರಳುಗಾರಿಕೆ ಆರಂಭಿಸಲು ಲಿಖಿತ ಆದೇಶ ಹೊರಡಿಸಬೇಕೆಂದು ಮತ್ತು ಅಕ್ರಮ ಮರಳುಗಾರಿಕೆ ತಡೆಗಟ್ಟಲು ರಾಜ್ಯ ಗುಪ್ತಚರ ವಿಭಾಗದ ವರದಿ ಮತ್ತು ಆಧುನಿಕ ತಂತ್ರಜ್ಞಾನದ ಸದ್ಬಳಕೆ ಮಾಡಿಕೊಂಡು ಸೂಕ್ತ ನಿರ್ದೇಶನ ಜಿಲ್ಲಾಡಳಿತಕ್ಕೆ ನೀಡಿ ಕ್ರಮ ಕೈಗೊಳ್ಳಬೇಕೆಂದು ಉಡುಪಿ ಜಿಲ್ಲಾ ಹಿತರಕ್ಷಣಾ ವೇದಿಕೆ ಆಗ್ರಹಿಸುತ್ತದೆ.

ಪರಿಸರ ಸ್ನೇಹಿ ಮರಳುಗಾರಿಕೆಗೆ ನಿಯಮ ರೂಪಿಸುವ ಬಗ್ಗೆ ಹಾಗೂ ಬೇನಾಮಿ ಮರಳುಗಾರಿಕೆ ಪರವಾನಿಗೆಗಳನ್ನು ತಡೆಗಟ್ಟಲು ಈ ಕೆಳಗಿನಂತೆ ಸಲಹೆ ಸೂಚನೆಗಳನ್ನು ನೀಡಲು ವೇದಿಕೆ ಇಚ್ಚಿಸುತ್ತದೆ.

1. ಪ್ರಸ್ತುತ ಮರಳುಗಾರಿಕೆ ಬಗ್ಗೆ ಇರುವ ನಿಯಮ ಪರಿಸರ ಸ್ನೇಹಿಯಾಗಿದ್ದರೂಯಾವ ಸ್ಥಳೀಯ ವ್ಯಕ್ತಿಗಳಿಂದ (ಅರ್ಹ ಸಮುದಾಯದ) ಮರಳುಗಾರಿಕೆಗೆ ಪರವಾನಿಗೆನೀಡಲು ಅರ್ಜಿಯನ್ನು ಜಿಲ್ಲಾ ಮರಳು ಸಮಿತಿ ಸ್ವೀಕರಿಸುವ ಬಗ್ಗೆ ಸ್ಪಷ್ಟತೆ ಇಲ್ಲ.

2. ಕರಾವಳಿ ನಿಯಂತ್ರಣ ವಲಯದ CRZ ವ್ಯಾಪ್ತಿಯಲ್ಲಿನ ನದಿ ಪಾತ್ರರಲ್ಲಿ ಮರಳು ದಿಬ್ಬಗಳನ್ನು ತೆರವುಗೊಳಿಸಲು ಕೇಂದ್ರ, ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ದಿನಾಂಕ ೦೮.೧೧.೨೦೧೧ರ ಕಚೇರಿ ಜ್ಞಾಪನದಲ್ಲಿ ಖemovಚಿಟ oಜಿ sಚಿಟಿಜ bಚಿಡಿs iಟಿ ಣhe ಛಿoಚಿsಣಚಿಟ ಖeguಟಚಿಣioಟಿ Zoಟಿe is ಣo be ಛಿಚಿಡಿಡಿieಜ ouಣ bಥಿ ಣಡಿಚಿಜiಣioಟಿಚಿಟ ಛಿommuಟಿiಣies oಟಿಟಥಿ bಥಿ mಚಿಟಿuಚಿಟ meಣhoಜ ಎಂದು ತಿಳಿಸಲಾಗಿರುತ್ತದೆ. ಸಿಆರ್‌ಝಡ್ ವ್ಯಾಪ್ತಿಯಲ್ಲಿನ ನದಿಪಾತ್ರದಲ್ಲಿ ಮರಳು ದಿಬ್ಬ ತೆರವುಗೊಳಿಸಲು ಸಾಂಪ್ರದಾಯಿಕ ಮರಳುಗಾರ ಕಸುಬುದಾರರನ್ನು ಯಾವ ಮಾನದಂಡದಲ್ಲಿ ಗುರುತಿಸುವುದು ಎಂಬ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡುವಂತೆ ಕೇಂದ್ರ ಅರಣ್ಯ, ಪರಿಸರ, ಜೀವಿಶಾಸ್ತ್ರ ಮತ್ತು ಹವಮಾನ ಬದಲಾವಣೆ ಇಲಾಖೆ, ನವದೆಹಲಿ ಇವರಿಗೆ ದಿನಾಂಕ ೨೨.೦೯.೨೦೧೮ರಂದು ಮತ್ತು ರಾಜ್ಯ ಸರ್ಕಾರದ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ (ಎಂಎಸ್‌ಎಂಇ&ಗಣಿ), ಬೆಂಗಳೂರು ಇವರಿಗೆ ದಿನಾಂಕ ೨೫.೧೦.೨೦೧೮ರಂದು ಉಡುಪಿ ಜಿಲ್ಲಾಧಿಕಾರಿಯವರು ಪತ್ರ ಬರೆದಿರುತ್ತಾರೆ. ಇದುವರೆಗೂ ಸ್ಪಷ್ಟ ಮಾರ್ಗದರ್ಶಿ ಕಾನೂನನ್ನು ಸರಕಾರ ಜಿಲ್ಲಾಡಳಿತಕ್ಕೆ ನೀಡದಿರುವುದನ್ನು ವೇದಿಕೆ ಬೊಟ್ಟು ಮಾಡುತ್ತದೆ.

3. ಕಾರ್ಯದರ್ಶಿಯವರು ಕೇಂದ್ರ, ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರಇಲಾಖೆಯ ಜ್ಞಾಪನ ಪತ್ರ ದಿನಾಂಕ ೦೮.೧೧.೨೦೧೧ರ ಪೂರ್ವದಲ್ಲಿ ಸಾಂಪ್ರದಾಯಿಕ ಮರಳು ತೆರವುಗೊಳಿಸಲು ನೊಂದಾಯಿಸಿರುವವರನ್ನು ಗುರುತಿಸಿ ಅಂತವರಿಗೆ ಮರಳು ದಿಬ್ಬ ತೆರವುಗೊಳಿಸಲು ಪರವಾನಿಗೆ ನೀಡುವಂತೆ ಸರಕಾರದ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ (ಎಂಎಸ್‌ಎಂಇ&ಗಣಿ), ಬೆಂಗಳೂರು ಇವರು ಜಿಲ್ಲಾಡಳಿತಕ್ಕೆ ತಿಳಿಸಿರುತ್ತಾರೆ. ಇದುವರೆಗೂ ಜಿಲ್ಲಾಡಳಿತಕ್ಕೆ ಅಸ್ಪಷ್ಟ ನಿಯಮದಿಂದಾಗಿ ಕ್ರಮಕೈಗೊಳ್ಳಲಾಗದೆ ಮರಳುಗಾರಿಕೆ ಪರವಾನಿಗೆ ನೀಡಲು ಅಸಮರ್ಥವಾಗಿದೆ.

4. ರಾಜ್ಯ ಸರಕಾರದ ಸಂಬಂಧಪಟ್ಟ ಇಲಾಖೆಯ ಕಾರ್ಯದರ್ಶಿಯ ನಿರ್ದೇಶನದಂತೆ ಉಡುಪಿ ಜಿಲ್ಲೆಯ ಕರಾವಳಿ ನಿಯಂತ್ರಣ ವಲಯದಲ್ಲಿ (ಸಿಆರ್‌ಝಡ್) ೨೦೧೧ರ ಪೂರ್ವದಲ್ಲಿ ಉಡುಪಿ ತಾಲೂಕು ಹಾಗೂ ಬ್ರಹ್ಮಾವರ ತಾಲೂಕಿನಲ್ಲಿ ತಾತ್ಕಾಲಿಕ ಪರವಾನಿಗೆಯನ್ನು ಪಡೆದಿರುವ ೬೮ ಮರಳು ಪರವಾನಿಗೆದಾರರ ಪಟ್ಟಿಯನ್ನು ಸಿದ್ದಪಡಿಸಿ, ಜಿಲ್ಲಾ ಮರಳು ಸಮಿತಿಯು ಸದರಿ ತಾತ್ಕಾಲಿಕ ಮರಳು ಪರವಾನಿಗೆದಾರರು ದಿನಾಂಕ ೨೭.೧೦.೨೦೧೮ ಸಂಕೆ ೫.೦೦ ಗಂಟೆಯೊಳಗಾಗಿ ಹಿರಿಯ ಭೂವಿಜ್ಞಾನಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಡುಪಿ ಕಚೇರಿಗೆ ಅರ್ಜಿ ಸಲ್ಲಿಸುವಂತೆ ಪತ್ರಿಕಾ ಪ್ರಕಟಣೆ ಮೂಲಕ ಕೋರಲಾಗಿದೆ ಮತ್ತು ಅರ್ಜಿಯನ್ನು ಸ್ವೀಕರಿಸಲಾಗಿದೆ. ೨೦೧೧ರ ಪೂರ್ವದಲ್ಲಿ ತಾತ್ಕಾಲಿಕ ಪರವಾನಿಗೆ ಪಡೆದಿರುವ ದಾಖಲೆಯೊಂದಿಗೆ ಒಟ್ಟು ೫೮ ಅರ್ಜಿಗಳು ಸ್ವೀಕೃತಗೊಂಡಿರುತ್ತದೆ. ಇವುಗಳಲ್ಲಿ ೩ ಅರ್ಜಿದಾರರು ಈ ಹಿಂದಿನ ವರ್ಷ ಪರವಾನಿಗೆಯ ಷರತ್ತು ಉಲ್ಲಂಘಿಸಿರುವುದರಿಂದ ಪರವಾನಿಗೆ ರದ್ದುಪಡಿಸಲಾಗಿದೆ. ಜಿಲ್ಲಾಡಳಿತಕ್ಕೆ ಪೂರ್ಣಪ್ರಮಾಣದಲ್ಲಿ ಅರ್ಜಿ ಸ್ವೀಕರಿಸಲು ಅಸಾಧ್ಯವಾಗಿದೆ ಮತ್ತು ಮರಳು ಲಭ್ಯಇದ್ದರೂ ಸೂಕ್ತ ಕ್ರಮಕೈಗೊಳ್ಳಲು ಅಸಾಧ್ಯವಾಗಿದೆ.

5. ಜಿಲ್ಲಾಡಳಿತದಲ್ಲಿ ೨೦೧೧ರ ಪೂರ್ವದಲ್ಲಿ ತಾತ್ಕಾಲಿಕ ಪರವಾನಿಗೆ ಪಡೆದಿರುವ ಕಾರ್ಮಿಕರ ಪಟ್ಟಿಯನ್ನು ನಿರ್ವಹಿಸಿಕೊಂಡು ಬಂದ ಬಗ್ಗೆ ದಾಖಲೆಗಳು ಇಲಾಖಾ ಕಚೇರಿಯಲ್ಲಿ ಲಭ್ಯವಿಲ್ಲ.

6. ಜಿಲ್ಲಾ 7 ಸದಸ್ಯರ ಸಮಿತಿಗೆ ಸಾಂಪ್ರದಾಯಿಕ ಮರಳು ತೆರವುಗೊಳಿಸುವವರನ್ನು ಗುರುತಿಸುವ ಬಗ್ಗೆ ಸ್ಪಷ್ಟ ನಿಯಮ ಹಾಗೂ ದಾಖಲೆಗಳು ಇಲ್ಲದಿರುವುದರಿಂದ ಈ ಹಿಂದೆ ಪರವಾನಿಗೆ ಪಡೆದ ಮರಳುಗಾರಿಕೆ ನಿರ್ವಹಿಸಿದ ಪರವಾನಿಗೆದಾರರನ್ನು ಮಾತ್ರ ಗುರುತಿಸಲು ಜಿಲ್ಲಾಡಳಿತ ಸಜ್ಜಾಗಿದೆ. ಇದು ಸಮರ್ಪಕ ಗುರುತಿಸುವಿಕೆಯಲ್ಲ ಎಂದು ವೇದಿಕೆ ಪ್ರತಿಪಾದಿಸುತ್ತದೆ.

7. ಸಾಂಪ್ರದಾಯಿಕ ಮರಳು ತೆರವುಗೊಳಿಸುವ ಕೆಲಸದಲ್ಲಿ ಕಾರ್ಮಿಕರಾಗಿ ಕೆಲಸ ನಿರ್ವಹಿಸಿದವರನ್ನು ಜಿಲ್ಲಾ 7 ಸದಸ್ಯರ ಸಮಿತಿ ಪರಿಗಣನೆ ಮಾಡಿಲ್ಲ.

8. ಈ ಹಿಂದೆ ಮರಳುಗಾರಿಕೆಯಲ್ಲಿ ತೊಡಗಿದ್ದ ಕಾರ್ಮಿಕರನ್ನು ನೋಂದಾವಣೆ ಮಾಡದೆ ಈ ಹಿಂದಿನ ಜಿಲ್ಲಾ 7 ಸದಸ್ಯರ ಸಮಿತಿಯು ಕರ್ತವ್ಯ ಲೋಪವೆಸಗಿದ್ದರಿಂದಾಗಿ ಅರ್ಹ ಅರ್ಜಿದಾರರನ್ನು ಗುರುತಿಸಿ ಮರಳು ತೆರವುಗೊಳಿಸುವ ಬಗ್ಗೆ ಪರವಾನಿಗೆ ನೀಡಲು ಈಗಿನ ಜಿಲ್ಲಾ 7 ಸದಸ್ಯ ಸಮಿತಿಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಅಸಾಧ್ಯವಾಗಿದೆ ಎಂದು ವೇದಿಕೆ ಜಿಲ್ಲಾಡಳಿತ ಆಡಳಿತದ ವೈಫಲ್ಯವನ್ನು ಬೊಟ್ಟು ಮಾಡಿದೆ.

9. ಅಖZ ಮತ್ತುಓoಟಿ ಅಖZ ವ್ಯಾಪ್ತಿಯಲ್ಲಿ ಗುರುತಿಸಿರುವ ಮರಳು ದಿಬ್ಬಗಳ ಒಟ್ಟು ಸಂಖ್ಯೆ 30. ಈ ಪೈಕಿ ಸೂಕ್ಷ್ಮ 14 ಇದ್ದು ಇನ್ನೂ ಹೆಚ್ಚಿನ ಮರಳು ದಿಬ್ಬಗಳನ್ನು ಹಂತಹಂತವಾಗಿ ಗುರುತಿಸುವಲ್ಲಿ ಜಿಲ್ಲಾಡಳಿತ ಎಡವಿದೆ.

೧೦. ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯ 7 ಜನ ಸದಸ್ಯರ ಸಮಿತಿ ಸಭೆಯು ಎಲ್ಲಾ ಷರತ್ತುಗಳಿಗೆ ಒಳಪಟ್ಟು ಮರಳುಗಾರಿಕೆಗೆ ಪರವಾನಿಗೆಯನ್ನು ನೀಡತಕ್ಕದ್ದಾಗಿರುತ್ತದೆ. ಜಿಲ್ಲಾ ಸಮಿತಿಯು ಕೇಂದ್ರ ಮತ್ತು ರಾಜ್ಯ ಸರಕಾರದ ಅಧಿಸೂಚನೆಯಲ್ಲಿ ಗೊತ್ತುಪಡಿಸಿದ ನಿಯಮಗಳ ಮೇರೆಗೆ ಚರ್ಚಿಸಿ ತೆಗೆದುಕೊಂಡ ನಿರ್ಣಯಗಳನ್ನು ಮಾರ್ಪಾಡುಗೊಳಿಸಬೇಕಾದರೆ ರಾಜ್ಯಸರ್ಕಾರದ ಮಟ್ಟದಲ್ಲಿ ಮತ್ತೆ ನಿಯಮಗಳನ್ನು ಸರಕಾರದ ವಿವೇಚನೆ ಒಳಪಟ್ಟು ಅಧಿಕಾರ ವ್ಯಾಪ್ತಿಯಲ್ಲಿ ಮಾರ್ಪಾಡು/ತಿದ್ದುಪಡಿ ಮಾಡಬೇಕಾಗುತ್ತದೆ. ಇದು ರಾಜ್ಯ ಮತ್ತು ಜಿಲ್ಲಾಡಳಿತದ ಆಡಳಿತಾತ್ಮಕ ವಿಚಾರವಾಗಿದ್ದು, ಈ ಬಗ್ಗೆ ನಿರ್ದಿಷ್ಟ ಪ್ರಮಾಣದ ಮರಳಿನ ಅವಶ್ಯಕತೆ ಉಡುಪಿ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಮರಳಿನ ಕೊರತೆಇದ್ದರೂರಾಜ್ಯಸರ್ಕಾರಈ ಬಗ್ಗೆ ಕ್ರಮಕೈಗೊಳ್ಳದಿರುವುದು ಸರ್ಕಾರಕ್ಕೆ ಆಡಳಿತ ಇಚ್ಛಾಶಕ್ತಿಯ ಕೊರತೆ ಎಂದರೆ ತಪ್ಪಾಗದುಎಂದು ವೇದಿಕೆ ಅಭಿಪ್ರಾಯಪಡುತ್ತದೆ.

11. ಪರಿಸರ ವಿಮೋಚನಾ ಪತ್ರದಲ್ಲಿ, ಮಳೆಗಾಲದ ಸಮಯದಲ್ಲಿ ಜಲಚರಜೀವಿಗಳ ಸಂತಾನೋತ್ಪತ್ತಿ ಕಾಲವಾದದಿಂದ ಅಂತಹ ಸ್ಥಳಗಳಲ್ಲಿ ಮರಳು ತೆಗೆಯುವುದನ್ನು ನಿಷೇದಿಸಲಾಗಿದೆ. (ಜೂನ್, ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ ತಿಂಗಳ) ಕಾಲದಲ್ಲಿ ಜಲಚರ ಜೀವಿಗಳು ಸಂತಾನೋತ್ಪತ್ತಿ ಮಾಡುತ್ತವೆ ಎಂದು ಮೀನುಗಾರಿಕಾ ಸಹಾಯ ನಿರ್ದೇಶಕರು ಸಭೆಗೆ ತಿಳಿಸಿರುತ್ತಾರೆ. ಇದನ್ನು ಜಿಲ್ಲಾ 7 ಜನ ಸದಸ್ಯರ ಸಮಿತಿಸಭೆಯು ಅನುಮೋದಿಸಿದೆ. ಮರಳು ತೆರವುಗೊಳಿಸುವ ಬಗ್ಗೆ ನೀಡಲಾಗುವ ಪರವಾನಿಗೆಗೆ ಸಂಬಂಧಿಸಿದ ಅರ್ಹ ಅರ್ಜಿದಾರ ಕಾರ್ಮಿಕನ ನೋಂದಣಿ ಮಾಡಬೇಕಾಗುತ್ತದೆ. ಜಿಲ್ಲಾಧಿಕಾರಿಯವರು ಸಿಆರ್‌ಝಡ್ ಮತ್ತು ನಾನ್ ಸಿಆರ್‌ಝಡ್ ವಲಯದಲ್ಲಿ ನಿರ್ದಿಷ್ಟ ಮರಳು ದಿಬ್ಬಗಳ ಬಗ್ಗೆ ಪರವಾನಿಗೆ ನೀಡುವ ಸಲುವಾಗಿ ಟೆಂಡರ್ ಹಾಕಲು ಅರ್ಹ ಅರ್ಜಿದಾರರನ್ನು ಸಾರ್ವಜನಿಕ ಪ್ರಕಟಣೆ ಮೂಲಕ ವಿನಂತಿಸಲಾಗಿತ್ತು. ಆದರೂ ಸ್ಥಾಪಿತ ಹಿತಾಸಕ್ತಿಗಳ ಕೈವಾಡದಿಂದ ಬೇನಾಮಿ ಅರ್ಜಿದಾರರಿಗೆ ಮರಳು ತೆರವುಗೊಳಿಸುವ ಬಗ್ಗೆ ಪರವಾನಿಗೆ ನೀಡುವ ತಂತ್ರಗಾರಿಕೆಯನ್ನು ಮಂದಿಟ್ಟು ಪರವಾನಿಗೆ ಪಡೆದ ಅರ್ಜಿದಾರರು ಮರಳುಗಾರಿಕೆ ಆರಂಭಮಾಡದೇ ಇದ್ದದ್ದು ರಾಜಕೀಯ ಷಡ್ಯಂತ್ರಕ್ಕೆ ಸ್ಪಷ್ಟ ಉದಾಹರಣೆ. ಈ ಬಗ್ಗೆ ಪರವಾನಿಗೆ ಪಡೆದ ಗುತ್ತಿಗೆದಾರರು ಜಿಲ್ಲಾಧಿಕಾರಿ ಸೂಚಿಸಿದ ದಿನಾಂಕದಂದು ಮರಳುಗಾರಿಕೆ ನಡೆಸದಿದ್ದಲ್ಲಿ ಪರವಾನಿಗೆ ರದ್ದುಪಡಿಸಿ ಆ ದಿಬ್ಬಗಳನ್ನು ಜಿಲ್ಲಾದಿಕಾರಿಯವರು ಇತರ ಅರ್ಹ ಅರ್ಜಿದಾರನಿಗೆ ಪುನರ್‌ ಹಂಚಿಕೆ ಮಾಡಬೇಕು ಎಂದು ವೇದಿಕೆ ಒತ್ತಾಯಿಸುತ್ತದೆ.

12. ಪರಿಸರ ವಿಮೋಚನಾ ಷರತ್ತುಗಳನ್ನು ಪಾಲಿಸುವುದು ಹಾಗೂ ಆಡಳಿತಾತ್ಮಕ ಮತ್ತು ಪರಿಸರ ಸುರಕ್ಷತಾ ದೃಷ್ಟಿಯಿಂದ ಜಿಲ್ಲಾ 7 ಸದಸ್ಯರ ಸಮಿತಿಯು ಕಾಲಕಾಲಕ್ಕೆ ವಿಧಿಸಬಹುದಾದ ಷರತ್ತುಗಳನ್ನು ಪಾಲಿಸಲು ಪರವಾನಿಗೆದಾರ ಬದ್ಧರಿರತಕ್ಕದ್ದು ಎಂದು ಇದ್ದರೂ ಸಮಯ ಪರಿಪಾಲನೆ, ಪರಿಸರ ಸಂರಕ್ಷಣೆಗೆ ಬದ್ದರಾಗಿರದೆ ನಿಗಧಿಪಡಿಸಿದ ಪ್ರಮಾಣಕ್ಕಿಂತ ಅಧಿಕ ಪ್ರಮಾಣದ ಮರಳು ತೆರವುಗೊಳಿಸುವುದನ್ನು ಇಂದಿನವರೆಗೆ ಮಾಡುತ್ತಾ ಬಂದಿರುವುದರಿಂದ ಪರಿಸರ ಸಂರಕ್ಷಣೆಗಾಗಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪರಿಪಾಲನೆಯಾಗುವಂತೆ ಕ್ರಮವಹಿಸುವುದು ಅತ್ಯಗತ್ಯ ಎಂದು ವೇದಿಕೆ ಒತ್ತಾಯಿಸುತ್ತದೆ.

13. ಪರಿಸರ ವಿಮೋಚನೆ ಪತ್ರದಲ್ಲಿ ನಮೂದಿಸಿರುವ ಷರತ್ತುಗಳನ್ನು ಪಾಲಿಸಲು ಪರವಾನಿಗೆ ನೀಡಲಾಗುವ ಊರ್ಜಿತ ಅವಧಿಯ ಮಳೆಗಾಲದಲ್ಲಿ ಜೀವಜಲಚರ ಸಂತತಿಗಳು ಸಂತಾನೋತ್ಪತ್ತಿ ಮಾಡುವುದರಿಂದ ಮಾನ್‌ಸೂನ್ ಅವದಿ ಜೂನ್ ಒಂದರಿಂದ ಜುಲೈ 31 ರವರೆಗೆ ಮರಳು ತೆಗೆಯುವುದನ್ನು ನಿಷೇಧಿಸಲಾಗಿದೆ ಎಂದು ಷರತ್ತು ವಿಧಿಸಲಾಗಿದೆಯಾದರೂ ಮರಳು ತೆಗೆಯುವ ಅವಧಿಯನ್ನು ನಾಲ್ಕು ತಿಂಗಳವರೆಗೆ ವಿಸ್ತರಿಸಬೇಕು. ಏಕೆಂದರೆ ಜಿಲ್ಲಾ 7 ಸದಸ್ಯರ ಸಮಿತಿ ಸಭೆಯಲ್ಲಿ ವಿಷಯಾಧಾರಿತವಾಗಿ ಚರ್ಚೆ ನಡೆಯುವಾಗ ಮೀನುಗಾರಿಕಾ ಸಹಾಯಕ ನಿರ್ದೇಶಕರು ಜೂನ್, ಜುಲಾಯಿ, ಆಗೋಸ್ಟ್, ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ ಜಲಚರಗಳು ಸಂತಾನೋತ್ಪತ್ತಿ ನಡೆಸುತ್ತವೆ ಎಂದು ತಿಳಿಸಿರುವುದನ್ನು ಜಿಲ್ಲಾ ಮರಳು ಸಮಿತಿ ಅನುಮೋದಿಸಿದೆ. ಹಿಂದಿನ ಅವಧಿಗಳಲ್ಲಿ ಈ ಷರತ್ತನ್ನು ಮರಳು ತೆರವುಗೊಳಿಸಿದ ಪರವಾನಿಗೆದಾರರು ಉಲ್ಲಂಘಿಸಿದ್ದರಿಂದ ಜಲಚರ ಸಂತಾನೋತ್ಪತ್ತಿ ನಾಶವಾಗಿ ಇಂದು ನದಿಗಳಲ್ಲಿ ಹೇರಳವಾಗಿ ಸಿಗುತ್ತಿದ್ದ ಕಪ್ಪೆಚಿಪ್ಪು, ಚಿಪ್ಪುಗಳುಳ್ಳ ಇತರ ಜಲಚರ ಮತ್ಸ್ಯ ಸಂಪತ್ತು ಮಾಯವಾಗಿದೆ. ಇದರಿಂದಾಗಿ ಅವಲಂಬಿತ ವರ್ಗದ ಆಹಾರ ಮೂಲವೂ ನಾಶವಾಗಿದೆ. ಸಾಂಪ್ರದಾಯಿಕ ಉದ್ಯೋಗಾವಕಾಶಕ್ಕೆ ತೊಂದರೆಯಾಗಿದೆ.

14. ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಮೀನುಗಾರಿಕ ಕಸುಬುದಾರರ ಸಹಕಾರದಿಂದ ಮತ್ತು ತಜ್ಞರಿಂದ ಪರಿಶೀಲನೆ ನಡೆಸಿ ಯಾವ ಭಾಗದಲ್ಲಿ ಜಲಚರಗಳು ಸಂತಾನೋತ್ಪತ್ತಿ ನಡೆಸುತ್ತವೆ ಆ ಭಾಗದಲ್ಲಿ ನಿರ್ದಿಷ್ಟ ಅವಧಿವರೆಗೆ ಮರಳು ತೆರವುಗೊಳಿಸುವುದನ್ನು ಕಡ್ಡಾಯವಾಗಿ ನಿಷೇಧಿಸಬೇಕು,ಜಲಚರಗಳಿಗೆ ಸಂತಾನೋತ್ಪತ್ತಿ ಮಾಡಲು ಮರಳು ಮತ್ತು ಜಲಮಟ್ಟದ (ಡಿiveಡಿ beಜ)ಲ್ಲಿರುವ ವಿವಿಧ ಸಸ್ಯ ಪ್ರಭೇದಗಳ ಅವಶ್ಯಕತೆ ಇರುವುದರ ಬಗ್ಗೆ ತಜ್ಞರ ಅಭಿಪ್ರಾಯದಂತೆ ನಿಯಮ ರೂಪಿಸಿ ಕಟ್ಟುನಿಟ್ಟಾಗಿ ಪಾಲಿಸಬೇಕು. ಈ ಷರತ್ತು ಉಲ್ಲಂಘನೆಮಾಡಿ ಮರಳುಗಾರಿಕೆ ಮಾಡಿದಲ್ಲಿ ಪರಿಸರ ವಿಮೋಚನಾ ಷರತ್ತುಗಳನ್ನು ಪಾಲಿಸದ ನೆಲೆಯಲ್ಲಿ ಕಾನೂನು ಹೋರಾಟಕ್ಕೆ ಅವಕಾಶವಾದೀತು ಎಂದು ವೇದಿಕೆ ಸರಕಾರವನ್ನು ಎಚ್ಚರಿಸುತ್ತದೆ.

15. ಮರಳು ದಿಬ್ಬ ತೆರವುಗೊಳಿಸುವ ಸಂದರ್ಭದಲ್ಲಿ ನದಿಯ ತಳದಲ್ಲಿರುವ ಸಸ್ಯಗಳಿಗೆ ಮತ್ತು ಜಲಚರಗಳಿಗೆ ಹಾನಿಯಾಗದಂತೆ ಮರಳು ತೆರವುಗೊಳಿಸುವುದು ಎಂಬ ಷರತ್ತು ಇದ್ದರೂ ಉಲ್ಲಂಘನೆಯಾಗುತ್ತಾ ಬಂದಿರುವುದರಿಂದ ಮರಳುಗಾರಿಕೆ ನಡೆಸುವ ಮೊದಲು ಇಲಾಖೆಯು ತಜ್ಞರಿಂದ ಸ್ಥಳ ಪರಿಶೀಲನೆ ನಡೆಸಿ ಮರಳುಗಾರಿಕೆ ನಡೆಸಲು ಪೂರ್ವಾನುಮತಿ ನೀಡಲಿ, ನೀಡಿದ ನಂತರವೇ ಮರಳುಗಾರಿಕೆ ನಡೆಸಲಿ ಇಲ್ಲದಿದ್ದಲ್ಲಿ ಜಿಲ್ಲಾ ೭ ಸದಸ್ಯರ ಸಮಿತಿಯೇ ಪರಿಸರ ಪಾಲನೆಯ ಉಲ್ಲಂಘನೆಗೆ ಜವಾಬ್ದಾರಿಯಾಗಲಿ ಎಂದು ವೇದಿಕೆ ಆಶಿಸುತ್ತದೆ.

16. ರಾಜ್ಯ ಸರ್ಕಾರ ಮರಳುಗಾರಿಕೆಗೆ ವಿಧಿಸಿದ ಷರತ್ತುಗಳಿದ್ದೂ ಮತ್ತು ಜಿಲ್ಲಾ ೭ ಸದಸ್ಯರ ಸಮಿತಿಯಲ್ಲಿ ವಿಷಯಾಧರಿತವಾಗಿ ಚರ್ಚಿಸಿ ನಿರ್ಣಯ ತೆಗೆದುಕೊಂಡಿದ್ದರೂ ಇಲಾಖೆ ಮಟ್ಟದಲ್ಲಿ ಸಮನ್ವಯತೆಯ ಕೊರತೆ, ಕಾನೂನಿನ ಬದ್ದತೆ ಇಲಾಖಾಧಿಕಾರಿಗಳಿಗೆ ಇಲ್ಲದಿರುವುದರಿಂದ ಸ್ಥಾಪಿತ ಹಿತಾಸಕ್ತಿಗಳ ಕೈಗೊಂಬೆಯಾಗಿ ಅಧಿಕಾರಿಗಳು ವರ್ತಿಸುವುದರಿಂದ ಜಿಲ್ಲಾ ೭ ಸದಸ್ಯರ ಸಮಿತಿ ಅಕ್ರಮ ಮರಳುಗಾರಿಕೆಯನ್ನು ತಡೆಗಟ್ಟಲು ವಿಫಲವಾಗಿದೆ. ದಕ್ಷ ಪ್ರಾಮಾಣಿಕ ಅಧಿಕಾರಿಯ ನೇತೃತ್ವ ಇದ್ದರೂ ಬೇಲಿಯೇ ಹೊಲ ಮೈದಂತಾಗಿದೆ. ವ್ಯವಸ್ಥೆಯ ಅವ್ಯವಸ್ಥೆಯಿಂದಾಗಿ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ರಾಜ್ಯ ಸರಕಾರವು ತನ್ನ ಗುಪ್ತಚರ ಇಲಾಖೆಯಿಂದ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ವರದಿ ಪಡೆದು ಸೂಕ್ತವಾಗಿ ತೀರ್ಮಾನಿಸಿ ತನ್ನ ನಿರ್ದೇಶನವನ್ನು ಜಿಲ್ಲಾ ೭ ಸದಸ್ಯರ ಸಮಿತಿಗೆ ನೀಡಿ ಆಡಳಿತಾತ್ಮಕವಾಗಿ ಕಟ್ಟುನಿಟ್ಟಿನ ಕಾನೂನು ಕ್ರಮ ಜಾರಿಯಾಗುವಂತೆ ನಿಗಾವಹಿಸಬೇಕು ಎಂದು ವೇದಿಕೆ ಆಗ್ರಹಿಸುತ್ತದೆ.

17. ಈ ಹಿಂದಿನ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ನಡೆದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶ್ರೀಮತಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ರವರು ಸ್ಥಳ ಭೇಟಿ ನೀಡಿದಾಗ ಸ್ಥಳೀಯ ಕಂದಾಯ ಅಧಿಕಾರಿಗೆ ಹಲ್ಲೆ ಮಾಡಿ ಜಿಲ್ಲಾಧಿಕಾರಿಯವರಿಗೂ ಹಲ್ಲೆಯತ್ನ ನಡೆಸಲಾಗಿತ್ತು. ಈ ಬಗ್ಗೆ ಅಧಿಕಾರಯುಕ್ತ ಪೊಲೀಸ್ ಇಲಾಖೆಯುಅಕ್ರಮ ಮರಳುಗಾರಿಕೆ ನಡೆಸಿದ ವ್ಯಕ್ತಿಯ ಮೇಲೆ ಸರಿಯಾದ ರೀತಿಯಲ್ಲಿ ತನಿಖೆ ನಡೆಸಿ ಕೇಸುದಾಖಲಿಸದೇ, ಜಿಲ್ಲೆಯ ವರಿಷ್ಠಾಧಿಕಾರಿಯ ಮೇಲೆ ಹಲ್ಲೆ ನಡೆಸಿದವರಿಗೇ ಕಾನೂನು ರಕ್ಷೆ ಇರುತ್ತದೇ ವಿನಾ ಶಿಕ್ಷೆಯಾಗುವುದಿಲ್ಲ ಎಂಬ ಸಂದೇಶ ಪ್ರಜಾಪ್ರಭುತ್ವಕ್ಕೆ ರವಾನಿಸಿದಂತಾಗಿದೆ. ಆದ್ದರಿಂದ ಈ ಬಾರಿಯೂ ಅಕ್ರಮ ಮರಳುಗಾರಿಕೆ ನಿಷೇದಿತ ಅವಧಿಯಲ್ಲಿಯೇ (ಸಾಯಂಕಾಲ ೬ ಗಂಟೆಯಿಂದ ಬೆಳಿಗ್ಗೆ ೬ ಗಂಟೆಯವರೆಗೆ) ನಡೆಯುತ್ತಿದ್ದರೂ ಕ್ರಮಕೈಗೊಳ್ಳಲಾಗದೇ ಇಲಾಖೆ ಸ್ಥಾಪಿತ ಹಿತಾಸಕ್ತಿಗಳ ಕೈವಾಡಕ್ಕೆ ಸಿಕ್ಕಿದ ವ್ಯವಸ್ಥೆಯಾಗಿದೆ. ಇಲಾಖೆಯ ಅಧಿಕಾರಿಗಳು ಅಲ್ಲಲ್ಲಿ ಸಣ್ಣ ಪುಟ್ಟ ಅಕ್ರಮ ಮರಳು ಪ್ರಕರಣವನ್ನು ದಾಖಲಿಸಿ ಕಾನೂನುಗಳನ್ನು ನಾವು ಪಾಲಿಸುತ್ತಿದ್ದೇವೆ ಎಂದು ಸರಕಾರವನ್ನು ಅಣಕಿಸುವ ರೀತಿಯಲ್ಲಿ ಕಾನೂನು ಪಾಲಕರ ಕರ್ತವ್ಯ ಉಡುಪಿ ಜಿಲ್ಲೆಯಲ್ಲಿ ನಡೆಯುತ್ತಿದೆ!. ರಾಜ್ಯಾದ್ಯಂತ ಅನೇಕ ಅಕ್ರಮ ಮರಳುಗಾರಿಕೆ ಪ್ರಕರಣಗಳು ಬೆಳಕಿಗೆ ಬಂದಿರುವುದನ್ನು ಮಾದ್ಯಮದ ಮೂಲಕ ಸಾರ್ವಜನಿಕರುಗಮನಿಸಿದ್ದಾರೆ. ಇದು ಅಕ್ರಮ ಮರಳುಗಾರಿಕೆ ನಡೆಯುತ್ತಿರುವುದಕ್ಕೆ ಇಲಾಖೆಯೇ ಒದಗಿಸಿದ ಪುರಾವೆಯಾಗಿದೆ ಎಂದು ವೇದಿಕೆ ಅಕ್ರಮ ಮರಳುಗಾರಿಕೆಯ ಬಗ್ಗೆ ಬೊಟ್ಟು ಮಾಡುತ್ತದೆ.

18. ಅಕ್ರಮ ಮರಳುಗಾರಿಕೆ ಮತ್ತು ಸಾಗಾಣಿಕೆ ತಡೆಗಟ್ಟಲು ಸೂಕ್ತ ಸ್ಥಳದಲ್ಲಿ ಚೆಕ್ ಪೋಸ್ಟ್‌ಗಳನ್ನು ನಿರ್ಮಿಸಿ ಜಿಲ್ಲಾ ನಿಯಂತ್ರಣ ಕಚೇರಿಗೆ ಮಾಹಿತಿ ರವಾನೆ ಮಾಡಿ ಪ್ರಕರಣವನ್ನು ನಿಯಂತ್ರಿಸಲು ಯಾವುದೇ ಕ್ರಮವನ್ನು ಅಧಿಕಾರಯುಕ್ತವಾದ ಇಲಾಖೆ ನಡೆಸಿಲ್ಲ. ಇದರಿಂದ ಇಲಾಖೆಯ ನಿರ್ಲಕ್ಷವನ್ನು ಬೊಟ್ಟು ಮಾಡಬಹುದು. ಈ ಬಗ್ಗೆ ತುರ್ತು ಕ್ರಮವನ್ನು ಜಿಲ್ಲಾ ಸಮಿತಿ ಕೈಗೊಳ್ಳುವಂತೆ ಸರಕಾರ ಲಿಖಿತ ಆದೇಶ ನೀಡಬೇಕು, ಪುನಾರವರ್ತನೆಯಾದರೆ ಜಿಲ್ಲಾ ಸಮಿತಿಯನ್ನೇ ಜವಾಬ್ದಾರಿಯನ್ನಾಗಿಸಿ ಸರ್ಕಾರ ಕಾನೂನು ಕ್ರಮ ಜರುಗಿಸಬೇಕು ಎಂದು ವೇದಿಕೆ ಒತ್ತಾಯಿಸುತ್ತದೆ.

19. ಹೊಯಿಗೆ ದೋಣಿ ಕಾರ್ಮಿಕರ ಸಂಘದಲ್ಲಿ ನೋಂದಾಯಿಸಿರುವ ಸ್ಥಳೀಯ ಜನರು ದೃಢೀಕರಣ ಪತ್ರ ತಂದು ಇಲಾಖೆಯಲ್ಲಿ ನೋಂದಣಿ ಮಾಡಿದ್ದಲ್ಲಿ ಮಾತ್ರ ಅವಕಾಶ ನೀಡಲಾಗುವುದೆಂದು ಜಿಲ್ಲಾ ಮರಳು ಸಮಿತಿ ಸಭೆಯ ಅಧ್ಯಕ್ಷರು ಸೂಚಿಸಿದ್ದು, ಆದರೆ ಇದುವರೆಗೂ ಕಾರ್ಮಿಕ ನೋಂದಣಿ ಇಲಾಖೆಯಲ್ಲಿ ಕಾರ್ಮಿಕರ ನೋದಂಣಿ ಮಾಡದೇ ಇರುವುದನ್ನು ಈ ಹಿಂದಿನಿಂದ ಇಂದಿನವರೆಗೆ ಇಲಾಖೆಯು ಆಡಳಿತಾತ್ಮಕವಾಗಿ ನಿರ್ಲಕ್ಷ್ಯ ಮಾಡಿದ್ದು, ಇಂದು ಅರ್ಹ ಸ್ಥಳೀಯ ಸಮುದಾಯದ ಮರಳು ತೆರವುಗೊಳಿಸುವ ಕಾರ್ಮಿಕರನ್ನು ಗುರುತಿಸಿ ಪರವಾನಿಗೆ ನೀಡುವಲ್ಲಿ ಎಡವಟ್ಟಾಗಿರುತ್ತದೆ. ಈ ಬಗ್ಗೆ ಇನ್ನಾದರೂ ಸ್ಥಳೀಯವಾಗಿ ಕಾರ್ಮಿಕರ ಪಟ್ಟಿಯನ್ನು ಗ್ರಾಮ ಮಟ್ಟದಲ್ಲಿ ಅಧಿಕಾರಿಗಳ ಮೂಲಕ ಮಾಹಿತಿ ಕಲೆಹಾಕಿ ಮತ್ತು ಈ ಹಿಂದಿನ ಪರವಾನಿಗೆದಾರರಿಂದ ಅವರ ಕಾರ್ಮಿಕರ ಮಾಹಿತಿ ಪಡೆದು ಪರಿಶೀಲನೆ ನಡೆಸಿ ಇಲಾಖೆ ಕ್ರಮಕೈಗೊಳ್ಳಬಹುದು ಎಂದು ವೇದಿಕೆ ಸಲಹೆ ನೀಡುತ್ತದೆ.

20. ಅಕ್ರಮ ಮರಳುಗಾರಿಕೆ ನಡೆಯುತ್ತಿರುವುದು ಜಗಜಾಹೀರಾಗಿದೆಯಾದರೂರಾಜ್ಯದ ಮುಖ್ಯಮಂತ್ರಿಗಳು, ರಾಜ್ಯದ ಗೃಹಮಂತ್ರಿಗಳು ಅಕ್ರಮ ಮರಳುಗಾರಿಕೆ ಬಗ್ಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು ಎಂದು ಮಾದ್ಯಮದ ಮೂಲಕಹೇಳಿಕೆ ನೀಡಿಪ್ರಜ್ಞಾವಂತ ನಾಗರಿಕರನ್ನು ಮೂಕ ಪ್ರೇಕ್ಷಕರಾಗಿಸಿ ತಾವೂ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸುವ ಮೂಲಕ ಕಾಲಹರಣ ಮಾಡುತ್ತಾಇರುವುದು ಪ್ರಜಾಸತ್ತಾತ್ಮಕವಾಗಿ ನಡೆಯಬೇಕಾದ ಜವಬ್ದಾರಿಯುತ ಸರಕಾರದ ಆಡಳಿತ ದೋರಣೆಯಾಗಿದೆ!ಮರಳು ರಾಷ್ಟ್ರೀಯ ಸಂಪತ್ತು ಇದರ ಅವಶ್ಯಕತೆ, ಮೀನುಗಾರಿಕೆ, ರಾಜ್ಯದ ಅಭಿವೃದ್ಧಿಗೆ, ಸ್ಥಳೀಯರ ಉದ್ಯೋಗಾವಕಾಶಕ್ಕೆ ದಕ್ಕೆಯಾಗಬಾರದೆಂಬ ಸ್ಥಳೀಯ ಕಸುಬುದಾರರ ಮನವಿಗೆ ಸ್ಪಂದಿಸುವ ಉದ್ದೇಶದಿಂದ ಘನ ನ್ಯಾಯಾಲಯ ಪರಿಸರಸ್ನೇಹಿ ಮರಳುಗಾರಿಕೆಗೆ ಷರತ್ತುಬದ್ದವಾಗಿ ಅವಕಾಶ ನೀಡಿದೆ ಎಂಬುದನ್ನು ಸರಕಾರ ತಿಳಿದೂ ಅಪ್ರಬುದ್ದರು ಮಾಡುವ ರೀತಿ ತಪ್ಪನ್ನು ಮಾಡಿ ಕಪಾಳಮೋಕ್ಷಕ್ಕೆ ಗುರಿಯಾಗುವ ಸಮಯ ಸನ್ನಿಹಿತವಾಗಲಿದೆ ಎಂಬುದನ್ನು ವೇದಿಕೆ ಎಚ್ಚರಿಸಲು ಬಯಸುತ್ತದೆ.

21. ಜಿಲ್ಲೆಯಾದ್ಯಂತ ತೆರವುಗೊಳಿಸಿದ ಮರಳನ್ನು ಸರಕಾರ ನಿಗಧಿಪಡಿಸಿದ ದರಕ್ಕಿಂತ ಜಾಸ್ತಿ ಬೆಲೆಗೆ ಪರವಾನಿಗೆದಾರನು ಸಾರ್ವಜನಿಕರಿಗೆ ಮರಳು ಮಾರಾಟ ಮಾಡದಂತೆ ನ್ಯಾಯ ಬೆಲೆ ನಿಗಧಿಪಡಿಸಬೇಕು ಮತ್ತು ಸಾಗಾಟಕಾ ವೆಚ್ಚ ಕಿಲೋ.ಮೀ. ಪ್ರಕಾರ ನಿಗಧಿಪಡಿಸಿ ಮಾರಾಟ ಮಾಡುವಂತೆ ಬೆಲೆ ಸೂಚ್ಯಂಕ ಪಟ್ಟಿಯನ್ನು ಇಲಾಖೆ ಪ್ರಕಟಿಸಬೇಕು ಎಂದು ವೇದಿಕೆ ಈ ಮೂಲಕ ಸಾರ್ವಜನಿಕ ಹಿತದೃಷ್ಟಿಯಿಂದ ಸಲಹೆ ನೀಡುತ್ತದೆ.

22. ಪರಿಸರಕ್ಕೆ ಸಂಬಂಧಿಸಿದ ಷರತ್ತುಗಳಿಗೆ ಒಳಪಟ್ಟು ನಿಯಮಾನುಸಾರ ಸೂಚನೆಯನ್ನು ಇಲಾಖೆಯು ಮರಳು ತೆರವುಗೊಳಿಸುವ ಪರವಾನಿಗೆದಾರನಿಗೆ ನೀಡಿದ ಮೇಲೆಯೂ ಪರವನಿಗೆದಾರನು ಷರತ್ತು ಉಲ್ಲಂಘಿಸಿದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ನೋಂದಣಿ ಪರವಾನಿಗೆಯನ್ನು ರದ್ದುಗೊಳಿಸತಕ್ಕದ್ದು. ಮುಂದಿನ ಅವದಿಗೆ ಯಾವುದೇ ಸಮಜಾಯಿಸಿಕೆ ನೀಡಿದರೂ ಪರಿಸರ ಷರತ್ತು ಉಲ್ಲಂಘನೆ ವಿಷಯವಾಗಿರುವುದರಿಂದ ಪರವಾನಿಗೆ ನೀಡಬಾರದು ಎಂದು ವೇದಿಕೆ ಒತ್ತಾಯಿಸುತ್ತದೆ.

23. ಸಿಆರ್‌ಝಡ್ ಮತ್ತು ನಾನ್ ಸಿಆರ್‌ಝಡ್ ವ್ಯಾಪ್ತಿಯಲ್ಲಿ ೨೦೧೧ರಿಂದ ಒಟ್ಟು ನೀಡಿದ ಪರವಾನಿಗೆಗಳ ಮಾಹಿತಿ ಇಲಾಖೆಯಲ್ಲಿ ಇರುವುದರಿಂದ ಪ್ರತಿಯೊಬ್ಬ ಪರವಾನಿಗೆದಾರನಿಂದ ಸ್ಥಳೀಯ ಮರಳು ದಿಬ್ಬಗಳಲ್ಲಿ ಮರಳುಗಾರಿಕೆ ಕೆಲಸದಲ್ಲಿ ತೊಡಗಿಕೊಂಡ ಬಗ್ಗೆ ವಿವರ ಕಲೆಹಾಕ ಬಯಸಿದಲ್ಲಿ ಅರ್ಹ ಅರ್ಜಿದಾರರನ್ನು ಪರಿಶೀಲಿಸಿ ಪ್ರತ್ಯೇಕ ಪಟ್ಟಿತಯಾರಿಸಿ ಮರಳು ದಿಬ್ಬಗಳ ಹಂಚಿಕೆಯನ್ನು ಮಾಡಲು ಪರವಾನಿಗೆ ನೀಡುವ ಸಲುವಾಗಿ ಅರ್ಜಿ ಆಹ್ವಾನಿಸಬಹುದು. ಅಂತಿಮವಾಗಿ ಮರಳುಗಾರಿಕೆಯಲ್ಲಿ ತೊಡಗಿಸಿಕೊಳ್ಳುವ ಆಸಕ್ತರನ್ನು ಗುರುತಿಸಿ ಮರಳುಗಾರಿಕೆಯನ್ನು ನಿಯಮಾನುಸಾರ ಮಾಡಲು ಕ್ರಮ ಕೈಗೊಳ್ಳಬಹುದು.

24. ೨೦೧೮-೧೯ನೇ ಸಾಲಿನಲ್ಲಿ ತಾತ್ಕಾಲಿಕ ಮರಳು ಪರವಾನಿಗೆ ಪಡೆಯಲು ಒಟ್ಟು ೯೭ ವ್ಯಕ್ತಿಗಳು ಅರ್ಜಿ ಸಲ್ಲಿಸಿರುತ್ತಾರೆ. ಜಿಲ್ಲೆಯ ಎಲ್ಲಾ ಭಾಗದಿಂದ ಅರ್ಜಿ ಸ್ವೀಕರಿಸಲಾಗಿಲ್ಲ. ಈ ಹಿಂದೆ ಪರವಾನಿಗೆ ಪಡೆದವರನ್ನು ಬಿಟ್ಟು ಎಲ್ಲಾ ಅರ್ಹ ಮರಳು ಪರವಾನಿಗೆದಾರರು ಏಕೆ ಅರ್ಜಿ ಸಲ್ಲಿಸಿಲ್ಲ ಎಂಬ ಬಗ್ಗೆ ಪರಮಾರ್ಶೆ ನಡೆಸಿ ನೈಜ ಕಾರ್ಮಿಕರನ್ನು ಕೂಡಾ ಗುರುತಿಸಬಹುದು. ಮರಳು ತೆರವುಗೊಳಿಸುವ ಕಾರ್ಯದಲ್ಲಿ ಈ ಹಿಂದಿನಿಂದ ಇಂದಿನವರೆಗೆ ಮರಳುಗಾರಿಕೆಯಲ್ಲಿ ತೊಡಗಿರುವ ನೈಜಮರಳು ಕಾರ್ಮಿಕರನ್ನು ಗುರುತಿಸಿ ಪರವಾನಿಗೆ ಕೊಡುವ ಮೂಲಕ ಪರವಾನಿಗೆ ನೀಡುವ ಗೊಂದಲ ನಿವಾರಿಸಬಹುದುಎಂದು ವೇದಿಕೆ ಸಲಹೆ ನೀಡುತ್ತದೆ.

25. ಈ ಬಾರಿ ಮರಳುಗಾರಿಕೆಯಲ್ಲಿ ತೊಡಗುವ ಪರವಾನಿಗೆದಾರ ಮತ್ತು ಅವನು ವಹಿಸಿಕೊಂಡ ದಿಬ್ಬಗಳಲ್ಲಿ ಕಾರ್ಮಿಕರಾಗಿ ಕೆಲಸ ನಿರ್ವಹಿಸುವ ಕಾರ್ಮಿಕರ ಪಟ್ಟಿಯನ್ನು ವಿವರಸಹಿತ ನೋಂದಣಿ ಮಾಡುವ ಬಗ್ಗೆ ಇಲಾಖೆಗೆ/ ಜಿಲ್ಲಾ ಮರಳು ಸಮಿತಿಗೆ ಸ್ಪಷ್ಟ ನಿರ್ದೇಶನ ನೀಡಬೇಕು ಮತ್ತು ಕಾರ್ಮಿಕರಿಗೆ ಮೂಲಭೂತ ಸೌಕರ್‍ಯ, ಸುರಕ್ಷತಾ ಕ್ರಮದ ಬಗ್ಗೆ ಪರವಾನಿಗೆದಾರರು ಒದಗಿಸುವ ಸೌಲಭ್ಯವನ್ನು ಇಲಾಖೆ ಪರಮಾರ್ಶಿಸಿ ಕ್ರಮ ಕೈಗೊಳ್ಳಬೇಕು.

26. ವರ್ಷ ಕಳೆದಂತೆ ಮರಳು ಬೇಡಿಕೆ ಹೆಚ್ಚಾಗುತ್ತಾ ಹೋಗುತ್ತಿರುವುದರಿಂದ ನಿಗದಿತ ಮರಳು ಮಾತ್ರ ನದಿ/ಸಮುದ್ರ ತಟ್ಟದಲ್ಲಿ ದೊರಕುವುದರಿಂದ ಮರಳು ಕೊರತೆ ನೀಗಿಸಲು ಮರಳಿಗೆ ಪರ್‍ಯಾಯವಾಗಿ ಬೇರೆ ಉತ್ಪನ್ನಗಳನ್ನು ಪರಿಚಯಿಸುವ ಬಗ್ಗೆ ತಜ್ಞರಿಂದ ವೈಜ್ಞಾನಿಕ ಸಂಶೋಧನೆ ನಡೆಸಿ ಪರ್‍ಯಾಯ ಉತ್ಪನ್ನವನ್ನು ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಉಪಯೋಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವೇದಿಕೆ ಒತ್ತಾಯಿಸುತ್ತದೆ.

ಅಂತಿಮವಾಗಿ ರಾಜ್ಯ ಸರ್ಕಾರ ಪರಿಸರ ಸೂಕ್ಷ್ಮ ಕರಾವಳಿ ಜಿಲ್ಲೆಗಳಿಗೆ ಉಡುಪಿ ಜಿಲ್ಲೆ ಒಳಗೊಂಡಂತೆ ತಕ್ಷಣ ಮರಳುಗಾರಿಕೆಗೆ ಸಂಬಂಧಿಸಿಪರಿಸರ ಸ್ನೇಹಿ ಸ್ಪಷ್ಟ ನಿಯಮರೂಪಿಸಿ(ಮಾರ್ಪಾಡುಗೊಳಿಸಿ) ಜಿಲ್ಲಾಡಳಿತಕ್ಕೆ ಲಿಖಿತ ನಿರ್ದೇಶನ ನೀಡಬೇಕು ಮತ್ತು ಅಕ್ರಮ ಮರಳುಗಾರಿಕೆ ನಿಯಂತ್ರಣಕ್ಕೆ ರಾಜ್ಯ ಗುಪ್ತಚರ ವಿಭಾಗದ ವರದಿ ಮತ್ತು ಆಧುನಿಕ ತಂತ್ರಜ್ಞಾನದ ಸದ್ಬಳಕೆ ಪಡೆದು ಉಡುಪಿ ಜಿಲ್ಲಾಡಳಿತಕ್ಕೆ ಸೂಕ್ತ ಲಿಖಿತ ನಿರ್ದೇಶನವನ್ನು ನೀಡಿ ಕ್ರಮಕೈಗೊಳ್ಳಬೇಕೆಂದು ಮತ್ತು ಅಗತ್ಯ ಮರಳು ಪರಿಸರಕ್ಕೆ ದಕ್ಕೆಯಾಗದ ರೀತಿಯಲ್ಲಿ ಅರ್ಹ ಸ್ಥಳೀಯ ಕಾರ್ಮಿಕರಿಂದ ಮರಳು ತೆರವುಗೊಳಿಸಿ ಒಂದು ತಿಂಗಳೊಳಗೆ ನ್ಯಾಯ ಬೆಲೆಯಲ್ಲಿ ಮರಳು ಜನಸಾಮಾನ್ಯರಿಗೆ ಮತ್ತು ಜಿಲ್ಲೆಯ ಅಭಿವೃದ್ಧಿಗೆ ಸಿಗುವಂತೆ ತುರ್ತು ಕ್ರಮಕೈಗೊಳ್ಳಬೇಕೆಂದು ರಾಜ್ಯ ಸರ್ಕಾರದ ಮಾನ್ಯ ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಇಲಾಖಾ ಸಚಿವರಾದಿಯಾಗಿ ರಾಜ್ಯಾಡಳಿತವನ್ನು ಆಗ್ರಹಿಸುತ್ತದೆ.

ರಾಜ್ಯ ಸರ್ಕಾರವು ಒಂದು ತಿಂಗಳೊಳಗೆ ಜನಸಾಮಾನ್ಯರಿಗೆ ಮತ್ತು ಜಿಲ್ಲೆಯ ಅಭಿವೃದ್ಧಿಗೆ ಸಮರ್ಪಕವಾಗಿ ಮರಳು ಒದಗಿಸದಿದ್ದಲ್ಲಿ ಸೂಕ್ತ ವೇದಿಕೆಯಲ್ಲಿ ನ್ಯಾಯ ಪಡೆಯಲು ಕಾನೂನು ಸಮರಕ್ಕೆ ಮುಂದಡಿ ಇಡುತ್ತದೆ ಎಂದು ಈ ಮೂಲಕ ಉಡುಪಿ ಜಿಲ್ಲಾ ಹಿತರಕ್ಷಣಾ ವೇದಿಕೆ ಸರ್ಕಾರವನ್ನು ಆಗ್ರಹಪೂರ್ವಕ ಎಚ್ಚರಿಸುತ್ತದೆ.

– ಭಾಸ್ಕರ ಶೆಟ್ಟಿ ಕಡೆಕಾರ್ (ಸಂಚಾಲಕರು), ಪ್ರೇಮಾನಂದ ಕಲ್ಮಾಡಿ, ವಿನಯಚಂದ್ರ ಸಾಸ್ತಾನ, ಶ್ರೀರಾಮ ದಿವಾಣ, ಪ್ರಕಾಶ್ ಪೂಜಾರಿ.

Leave a Reply

Your email address will not be published. Required fields are marked *