Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಸೋಗಿನ ಸಮಾಜವಾದಿಗಳು ಅಪಾಯಕಾರಿ: ಡಾ| ಭಂಡಾರಿ

ಅಮ್ಮೆಂಬಳ ಆನಂದರಿಗೆ ಗಣಪತಿ ದಿವಾಣ ಸಂಸ್ಮರಣ ಪುರಸ್ಕಾರ

ಉಡುಪಿ: ಸಮಾಜವಾದದ ನೈಜ ಆಶಯವನ್ನು ಈಡೇರಿಸದೆ ತೋರ್ಪಡಿಕೆಗಾಗಿ ಸಮಾಜವಾದಿಗಳ ಸೋಗು ಹಾಕಿಕೊಂಡಿರುವವರು ಅಪಾಯಕಾರಿ ಎಂದು ಖ್ಯಾತ ಮನೋವೈದ್ಯ ಡಾ| ಪಿ.ವಿ. ಭಂಡಾರಿ ಹೇಳಿದರು.

ಅವರು ಜನಪರ ಚಿಂತನ ವೇದಿಕೆ ಉಡುಪಿ ಇದರ ತಿಂಗಳ ಕಾರ್‍ಯಕ್ರಮ ಸರಣಿಯಲ್ಲಿ ಜರಗಿದ ಕಾಸರಗೋಡಿನ ಕನ್ನಡ ಹೋರಾಟಗಾರ, ಸಾಹಿತಿ ದಿ| ಗಣಪತಿ ದಿವಾಣ ಸಂಸ್ಮರಣ ಕಾರ್‍ಯಕ್ರಮದಲ್ಲಿ ಹಿರಿಯ ಸಮಾಜವಾದಿ ಅಮ್ಮೆಂಬಳ ಆನಂದ ಅವರಿಗೆ ದಿ| ಗಣಪತಿ ದಿವಾಣ ಸಂಸ್ಮರಣ ಪುರಸ್ಕಾರ ಪ್ರದಾನಿಸಿ ಮಾತನಾಡಿದರು.

ಅಮ್ಮೆಂಬಳ ಆನಂದ ಅವರು ರಾಜ್ಯದೆಲ್ಲೆಡೆ ಮೂಲ ಸಮಾಜವಾದವನ್ನು ಬಿತ್ತುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಬದುಕೇ ಸಮಾಜವಾದವಾಗಿದ್ದು ೯೩ರ ವಯಸ್ಸಿನಲ್ಲೂ ಅವರು ಅಪ್ಪಟ ಸಮಾಜವಾದಿಯೇ ಆಗಿದ್ದಾರೆ. ರೈತ, ಕಾರ್ಮಿಕ ಹೋರಾಟಗಳನ್ನು ನಡೆಸಿದ ಅವರು ಪತ್ರಕರ್ತರಾಗಿದ್ದು, ಅಂಕೋಲದ ಜನ ಸೇವಕ ಪತ್ರಿಕೆಯ ಸಂಪಾದಕರಾಗಿ ಸಮಾಜ ಪರ ಕಾರ್‍ಯನಿರ್ವಹಿಸಿ ಮಾದರಿ ಎನಿಸಿದ್ದಾರೆ ಎಂದು ಅವರು ಹೇಳಿದರು.

ಬಡವರ ಆಸ್ಪತ್ರೆಯೂ; ಸೋಗಿನ ಸಮಾಜವಾದವೂ!

ಉಡುಪಿಯಲ್ಲಿ ಹಾಜಿ ಅಬ್ದುಲ್ಲಾ ಅವರು ದಾನವಾಗಿ ನೀಡಿದ 4.5 ಎಕರೆ ಜಾಗದಲ್ಲಿ ಕಾರ್‍ಯನಿರ್ವಹಿಸುತ್ತಿದ್ದ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಖಾಸಗಿಯವರಿಗೆ ನೀಡಿದ ಸರಕಾರದ ನಡೆಯನ್ನು ಖಂಡಿಸಿದ ಡಾ| ಪಿ.ವಿ. ಭಂಡಾರಿ, ಸೋಗಿನ ಸಮಾಜವಾದಿ ನಾಯಕರು ಸರಕಾರಿ ಆಸ್ಪತ್ರೆಯನ್ನು ಖಾಸಗಿಯವರಿಗೆ ನೀಡಿದ್ದಾರೆ. ಒಂದು ಎಕರೆ ಜಾಗದಲ್ಲಿ 200 ಹಾಸಿಗೆಗಳ ಉಚಿತ ಆಸ್ಪತ್ರೆಯನ್ನು ನಡೆಸುವುದಕ್ಕಾಗಿ ಮೂರೂವರೆ ಎಕರೆ ಸರಕಾರಿ ಜಾಗದಲ್ಲಿ 400 ಹಾಸಿಗೆಗಳ ಖಾಸಗಿ ಆಸ್ಪತ್ರೆ ಆರಂಭಿಸಲು ಅನುಮತಿ ನೀಡಿದ್ದಾರೆ. ಮೇಲುಸ್ತುವಾರಿ ಸಮಿತಿಯಲ್ಲಿ ಸ್ಥಳೀಯ ಶಾಸಕರಿಗೂ ಅವಕಾಶ ನೀಡಲಾಗಿಲ್ಲ. ಬಡವರಿಗಾಗಿ ಆಸ್ಪತ್ರೆಗಳನ್ನು ನಡೆಸುವುದೂ ಸರಕಾರಕ್ಕೆ ಕಷ್ಟವೇ? ಎಂದು ಖಾರವಾಗಿ ನುಡಿದರು.

ಒಳಗೆ ಫ್ಯಾಸಿಸ್ಟ್; ಹೊರಗೆ ಸಮಾಜವಾದಿ

ಮೂಲ ಸಮಾಜವಾದದ ಬಗ್ಗೆ ಉಪನ್ಯಾಸ ನೀಡಿದ ಅಮ್ಮೆಂಬಳ ಆನಂದ ಅವರು, ಆಂತರಿಕವಾಗಿ ಫ್ಯಾಸಿಸ್ಟ್ ಮನಸ್ಥಿತಿಯನ್ನು ಹೊಂದಿದ್ದರೂ ತೋರ್ಪಡಿಕೆಗಾಗಿ ಸಮಾಜವಾದಿಯಂತೆ ನಟಿಸುವ ನಾಯಕರಿದ್ದಾರೆ. ಸಂವಿಧಾನದ ಸಮಾಜವಾದಿ ಪರಿಕಲ್ಪನೆ ಸಂಪೂರ್ಣವಾಗಿ ಸಾಕಾರಗೊಳ್ಳದಿರಲು ಈ ಫ್ಯಾಸಿಸ್ಟ್ ಮನಃಸ್ಥಿತಿಯವರೇ ಕಾರಣ ಎಂದರು.

ಜನಪರ ಚಿಂತನ ವೇದಿಕೆ ಅಧ್ಯಕ್ಷ ಪ್ರಕಾಶ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ದಿವಾಣ ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು. ಶ್ರೀರಾಮ ದಿವಾಣ ಪ್ರಸ್ತಾವನೆಗೈದರು. ಆರಂಭದಲ್ಲಿ ಸುರತ್ಕಲ್ ಎನ್‌ಐಟಿಕೆ ಸಹ ಪ್ರಾಧ್ಯಾಪಕ ಡಾ| ಶಶಿಕಾಂತ್ ಕೌಡೂರು ಅವರಿಂದ ಸಂಗೀತ ಕಾರ್‍ಯಕ್ರಮ-ಪ್ರಾತ್ಯಕ್ಷಿಕೆ ನಡೆಯಿತು. ಶಶಿಕಿರಣ್ ಮಣಿಪಾಲ್ ಅವರು ತಬಲಾದಲ್ಲಿ ಸಹಕರಿಸಿದ್ದರು.

One Comment

  1. jdeva059@gmail.com'

    Jayendra kabiyadi

    January 23, 2019 at 12:12 pm

    Yes i do agree with the view of ammemballa Ananda.even i support the statement given by Dr.P.V.B.

Leave a Reply

Your email address will not be published. Required fields are marked *