Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಫೆ.10: ಅಂಕೋಲಾದಲ್ಲಿ ಮಾಧವಿ ಭಂಡಾರಿಯವರಿಗೆ ‘ಸಕಾಲಿಕ ಸಾಹಿತ್ಯ ಪ್ರಶಸ್ತಿ’ ಪ್ರದಾನ, ಪುಸ್ತಕ ಪ್ರದರ್ಶನ

ಉಡುಪಿ: ಉತ್ತರ ಕನ್ನಡ ಜಿಲ್ಲೆ ಅಂಕೋಲಾ ಅಂಬಾರಕೊಡ್ಲದ ರಾಘವೇಂದ್ರ ಪ್ರಕಾಶನವು ದಿ. ಕವಿತಾ ನಾಯ್ಕ ಅವರ ನೆನಪಿನಲ್ಲಿ ಕೊಡಮಾಡುವ ‘ಸಕಾಲಿಕ ಸಾಹಿತ್ಯ ಪ್ರಶಸ್ತಿ’ ಪ್ರದಾನ ಸಮಾರಂಭವು ನೆನ ಫೆಬ್ರವರಿ 10ರಂದು ಅಂಬಾರಕೊಡ್ಲದ ‘ಪರಿಮಳ’ ಸಭಾಂಗಣದಲ್ಲಿ ನಡೆಯಲಿದೆ.

ಉಡುಪಿಯ ಹಿರಿಯ ಸಾಹಿತಿ, ನಿವೃತ್ತ ಪ್ರಾಂಶುಪಾರಾದ ಶ್ರೀಮತಿ ಮಾಧವಿ ಶ್ರೀಧರ ಭಂಡಾರಿಯವರು ಪ್ರಶಸ್ತಿ ಪುರಸ್ಕೃತರಾಗಲಿದ್ದಾರೆ. ಮೈಸೂರಿನ ಪ್ರೊ. ಡಾ. ಜಿ. ಎಚ್. ನಾಯಕ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಬೆಂಗಳೂರಿನ ಸುಬ್ಬು ಹೊಲೆಯಾರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಹಿರಿಯ ಪತ್ರಕರ್ತರೂ, ಲೇಖಕಕರೂ, ಸಮಾಜವಾದಿ ಹೋರಾಟಗಾರರೂ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ ಆದ ಮಣಿಪಾಲದ ಅಮ್ಮೆಂಬಳ ಆನಂದ ಅವರು ಉಪಸ್ಥಿತರಿರುವರು.

ರಾಘವೇಂದ್ರ ಪ್ರಕಾಶನ ಮತ್ತು ಹಿರಿಯ ಲೇಖಕರೂ, ಖ್ಯಾತ ಪ್ರಕಾಶಕರೂ, ಪತ್ರಕರ್ತರೂ ಆದ ವಿಷ್ಣು ನಾಯ್ಕ ಅವರು ಬರೆದು ಪ್ರಕಟಿಸಿದ 260 ಗ್ರಂಥಗಳ ಪ್ರದರ್ಶನ ಮತ್ತು ಮಾರಾಟವನ್ನೂ ವ್ಯವಸ್ಥೆಗೊಳಿಸಲಾಗಿದೆ. ವಿಷ್ಣು ನಾಯ್ಕ ಹಾಗೂ ಕುಟುಂಬ ಈ ಕಾರ್ಯಕ್ರಮವನ್ನು ಆಯೋಜಿಸಿದೆ.

Leave a Reply

Your email address will not be published. Required fields are marked *