Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ನರ್ಮ್ ಸಿಬ್ಬಂದಿಗಳಿಗೆ ಖಾಸಗೀ ಬಸ್ ಸಿಬ್ಬಂದಿಯಿಂದ ನಿಂದನೆ, ಬೆದರಿಕೆ: ದೂರು

ಉಡುಪಿ: ಉಡುಪಿ – ಮೂಡುಬೆಳ್ಳೆ ಮಾರ್ಗದಲ್ಲಿ ಸಂಚರಿಸುವ ಕೆ.ಎಸ್.ಆರ್.ಟಿ.ಸಿ. ನರ್ಮ್ ಬಸ್ ನ ಚಾಲಕ ಹಾಗೂ ನಿರ್ವಾಹಕರಿಗೆ ಖಾಸಗೀ ಬಸ್ ನಿರ್ವಾಹಕ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿದ ಘಟನೆ ಫೆಬ್ರವರಿ 6ರಂದು ಬೆಳಗ್ಗೆ ಮೂಡುಬೆಳ್ಳೆಯಲ್ಲಿ ನಡೆದಿದೆ.

ನರ್ಮ್ ಬಸ್ ನಿರ್ವಾಹಕ ತಿಪ್ಪೇಶ್ ಹಾಗೂ ಚಾಲಕ ವಾಸಿಮ್ ದೇಸಾಯಿ ಅವರು ಖಾಸಗೀ ಬಸ್ ಹೊರಡುವ ಸಮಯ ಮೀರಿದರೂ ಮೂಡುಬೆಳ್ಳೆಯಿಂದ ಹೊರಡದ ಬಗ್ಗೆ ಕಾನೂನುಬದ್ಧವಾಗಿ ಪ್ರಶ್ನಿಸಿದ್ದಾರೆ. ಪ್ರಶ್ನಿಸಿದ್ದಕ್ಕೆ ಕೆಂಡಮಂಡಲರಾದ ಖಾಸಗೀ ಬಸ್ ನಿರ್ವಾಹಕ ನರ್ಮ್ ಬಸ್ ಚಾಲಕ ಹಾಗೂ ನಿರ್ವಾಹಕರನ್ನು ಅವಾಚ್ಯ ಶಬ್ದಗಳಿಮದ ಬೈದು ಬೆದರಿಕೆ ಹಾಕಿದ್ದಾರೆ.

ಈ ಬಗ್ಗೆ, ಬೆಳ್ಳೆ ಗ್ರಾಮ ಪಂಚಾಯತ್ ಸದಸ್ಯ, ಮಾಜಿ ಅಧ್ಯಕ್ಷ ರಾಜೇಂದ್ರ ಶೆಟ್ಟಿ ಹಾಗೂ ಗ್ರಾಪಂ ಸದಸ್ಯ ಸುಧಾಕರ ಪೂಜಾರಿ ಅವರು ಶಿರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸಬ್ ಇನ್ಸ್ ಪೆಕ್ಟರ್ ಅಬ್ದುಲ್ ಅವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಹಿಂದೆಯೂ ಒಂದು ಇದೇ ಖಾಸಗೀ ಬಸ್ ನ ಇದೇ ಸಿಬ್ಬಂದಿ ನರ್ಮ್ ಬಸ್ ಚಾಲಕ ಹಾಗೂ ನಿರ್ವಾಹಕರಿಗೆ ಕುಕ್ಕಿಕಟ್ಟೆ ಬಳಿ ಅವಾಚ್ಯ ಶಬ್ದಗಳಿಂದ ಬೈದು, ಬೆದರಿಕೆ ಹಾಕಿದ ಘಟನೆ ನಡೆದಿತ್ತು. ಈ ಪ್ರಕರಣವನ್ನು ಉಡುಪಿ ನಗರ ಠಾಣೆಯ ಪೊಲೀಸರು ಮಾತುಕತೆಯ ಮೂಲಕ ಪರಿಹರಿಸಿದ್ದರು.

ಉಡುಪಿ – ಮೂಡುಬೆಳ್ಳೆ ಮಾರ್ಗದಲ್ಲಿ ಸಂಚರಿಸುವ ಖಾಸಗೀ ಬಸ್ ಗಳು ಪರವಾನಿಗೆ ಸಮಯ ಮೀರಿ ಸಂಚರಿಸುವ ಬಗ್ಗೆ ಮತ್ತು ನರ್ಮ್ ಬಸ್ ಆದಿತ್ಯವಾರ ಹಾಗೂ ರಜಾದಿನಗಳಲ್ಲಿ ಸಂಚರಿಸದ ಬಗ್ಗೆ ಸಾರಿಗೆ ಅಧಿಕಾರಿಗಳಿಗೆ ಮತ್ತು ಕೆ.ಎಸ್.ಆರ್.ಟಿ.ಸಿ ಉನ್ನತ ಅಧಿಕಾರಿಗಳಿಗೆ ಸಾರ್ವಜನಿಕರು ಹಲವು ಬಾರಿ ದೂರು ನೀಡಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *