Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಆಸ್ಪತ್ರೆ ಕಟ್ಟಡ ನೆಲಸಮ: ಸಾರ್ವಜನಿಕರಿಗೆ ಹಿಂಸೆ !

ಉಡುಪಿ: ಸಾರ್ವಜನಿಕರಿಗೆ ತೊಂದರೆಯಾಗಬಾರದೆಂಬ ನಿಟ್ಟಿನಲ್ಲಿ ಯಾವುದೇ ಮುಂಜಾಗ್ರತಾ ಕ್ರಮಗಳನ್ನೂ ತೆಗೆದುಕೊಳ್ಳದೆ ಕಟ್ಟಡದ ನೆಲಸಮ ಕಾರ್ಯ ನಡೆಸುತ್ತಿರುವುದರಿಂದಾಗಿ, ಉಡುಪಿ ನಗರಸಭೆ ಕಾರ್ಯಾಲಯದ ಎದುರುಗಡೆ ಇರುವ ಸರಕಾರೀ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆಯ ಕಟ್ಟಡದ ನೆಲಸಮ ಕಾರ್ಯ ಸಾರ್ವಜನಿಕರಿಗೆ ಭಾರೀ ತೊಂದರೆಯನ್ನುಂಟುಮಾಡಿದೆ.

ರಾವ್ ಬಹಾದ್ದೂರ್ ಹಾಜಿ ಅಬ್ದುಲ್ಲಾ ಸಾಹೇಬರು ದಾನವಾಗಿ ನೀಡಿದ ಬಹುಕೋಟಿ ಮೌಲ್ಯದ ಜಮೀನಿನಲ್ಲಿರುವ ಸರಕಾರೀ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆಯನ್ನು ಜಮೀನಿನ ಸಹಿತ ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಕ್ರಮವಾಗಿ ಅನಿವಾಸಿ ಉದ್ಯಮಿ ಬಿ. ಆರ್. ಶೆಟ್ಟಿಯವರಿಗೆ ನೀಡಿತ್ತು.

ಈ ಜಮೀನಿನ ಒಂದು ಭಾಗದಲ್ಲಿದ್ದ ಆಸ್ಪತ್ರೆ ಸಿಬ್ಬಂದಿಗಳ ವಸತಿಗೃಹಗಳಿದ್ದ ಜಮೀನಿನಲ್ಲಿ ವಸತಿಗೃಹಗಳನ್ನು ನೆಲಸಮಗೊಳಿಸಿ ಬಿ. ಆರ್. ಶೆಟ್ಟರು ಈಗಾಗಲೇ ”ಕರ್ನಾಟಕ ಸರಕಾರ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ-ಮಕ್ಕಳ ಆಸ್ಪತ್ರೆ”ಯನ್ನು ನಿರ್ಮಿಸಿದ್ದು, ಆಸ್ಪತ್ರೆ ಇರುವ ಜಮೀನಿನಲ್ಲಿ ಬಹುಮಹಡಿ ಖಾಸಗೀ ಆಸ್ಪತ್ರೆಯನ್ನು ನಿರ್ಮಿಸಲುದ್ದೇಶಿಸಿ, ಕಟ್ಟಡವನ್ನು ನೆಲಸಮಗೊಳಿಸುವ ಕಾರ್ಯ ಆರಂಭಿಸಿದೆ.

ಕಟ್ಟಡವನ್ನು ನೆಲಸಮಗೊಳಿಸುವ ಮೊದಲು ಕಟ್ಟಡದ ಸುತ್ತಲಿರುವ ಆವರಣಗೋಡೆಗೆ ಸಮವಾಗಿ ಎತ್ತರಕ್ಕೆ ಟರ್ಪಾಲ್ ಅಳವಡಿಸುವ ಕಾರ್ಯ ನಡೆಸಬೇಕಾಗಿತ್ತು. ಆದರೆ, ಸಂಬಂಧಿಸಿದವರು ಹೀಗೆ ಮಾಡದ ಕಾರಣ, ಪರಿಸರ ಪ್ರದೇಶ ಧೂಳುಮಯವಾಗಿ ಪರಿಣಮಿಸಿದೆ. ಈ ಪ್ರದೇಶದಲ್ಲಿರುವ ರಸ್ತೆ, ನೂರಾರು ನಾಗರೀಕರು ನಡೆದಾಡುವ ರಸ್ತೆಯಾಗಿದೆ. ಇದೀಗ ಈ ಪಾದಚಾರಿಗಳು ಮೂಗು ಕಣ್ಣು, ಬಾಯಿ ಮುಚ್ಚಿಕೊಂಡು ನಡೆದಾಡುವ ಶೋಚನೀಯ ಪರಿಸ್ಥಿತಿಯನ್ನು ಸೃಷ್ಟಿಸಲಾಗಿದೆ.

ಹತ್ತಿರದಲ್ಲಿಯೇ ತಾಯಿ-ಮಕ್ಕಳ ಆಸ್ಪತ್ರೆ, ಮೆಡಿಕಲ್ ಸಹಿತ ಹಲವು ಅಂಗಡಿಗಳು ಇತ್ಯಾದಿಗಳಿದ್ದು, ಇವರೆಲ್ಲರೂ ಪ್ರಸ್ತುತ ಮೂಗು ಮುಚ್ಚಿಕೊಂಡೇ ಇರುವಂತಾಗಿದೆ. ಹಲವರು ಧೂಳಿನ ಕಾರಣ ಖಾಯಿಲೆ ಪೀಡಿತರಾಗುವ ಾತಂಕ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಎರಡು ದಿನದ ಹಿಂದೆಯೇ ನಗರಸಭೆಗೆ ಮೌಖಿಕವಾಗಿ ದೂರಲಾಗಿದೆಯಾದರೂ, ಯಾವುದೇ ಪ್ರಯೋಜನವಾಗಿಲ್ಲ. ಆರೋಗ್ಯ ಇಲಾಖೆಯಾಗಲೀ, ಪರಿಸರ ಇಲಾಖೆಯ ಅಧಿಕಾರಿಗಳಾಗಲೀ ಯಾವುದೇ ಕ್ರಮಗಳನ್ನೂ ತೆಗೆದುಕೊಳ್ಳದಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.

 

Leave a Reply

Your email address will not be published. Required fields are marked *