Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲಾ ಸರಕಾರಿ ಆಸ್ಪತ್ರೆಯ ಸಾರ್ವಜನಿಕ ಮಾಹಿತಿ ಅಧಿಕಾರಿಯಿಂದ ಮಾಹಿತಿ ಹಕ್ಕು ಕಾಯಿದೆ ಉಲ್ಲಂಘನೆ.

ಗುರುರಾಜ ಸನಿಲ್ ರವರ ‘ಗುಡಿ ಮತ್ತು ಬಂಡೆ’ ಬಿಡುಗಡೆ, ‘ಮಲಬಾರ್ ಗುಳಿ ಮಂಡಲ’ ಸಾಕ್ಷ್ಯಚಿತ್ರ ಪ್ರದರ್ಶನ

ಉಡುಪಿ: ಬಹುಮುಖ ಪ್ರತಿಭೆಯ ಸಾಧಕ, ಉರಗ ತಜ್ಙ ಗುರುರಾಜ ಸನಿಲ್ ಅವರು ಗೌರವ ಡಾಕ್ಟರೇಟ್ ಗೆ ಅರ್ಹ ವ್ಯಕ್ತಿ ಎಂದು ಖ್ಯಾತ ಮನೋವೈದ್ಯರೂ, ಲೇಖಕರೂ ಆದ ಡಾ. ಪಿ. ವಿ. ಭಂಡಾರಿ ಹೇಳಿದರು.

ಫೆಬ್ರವರಿ 10ರಂದು ಉಡುಪಿ ಪುತ್ತೂರಿನ ‘ಅಕ್ಷಯ’ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗುರುರಾಜ ಸನಿಲ್ ಅವರ ಮೊದಲ ಕಥಾ ಸಂಕಲನ ‘ಗುಡಿ ಮತ್ತು ಬಂಡೆ’ ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.

ಹಿರಿಯ ರಂಗಕರ್ಮಿ, ಕವಿ ಗುರುರಾಜ ಮಾರ್ಪಳ್ಳಿ ಕಥಾ ಸಂಕಲನವನ್ನು ಪರಿಚಯಿಸಿದರು. ಗುರುರಾಜ ಸನಿಲ್ ಸ್ವಾಗತಿಸಿ, ಪ್ರಸ್ತಾವನೆಗೈದರು. ರವಿರಾಜ ಎಚ್. ಪಿ. ಸ್ವಾಗತಿಸಿ, ವಂದಿಸಿದರು.

ಯೋಗ ಸಾಧಕಿ ತನುಶ್ರೀ ಪಿತ್ರೋಡಿ ಅವರನ್ನು ಕಲಾವಿದರಾದ ಗಂಜೀಫಾ ರಘುಪತಿ ಭಟ್ ಸನ್ಮಾನಿಸಿದರು. ಸಭಾ ಕಾರ್ಯಕ್ರಮದ ಬಳಿಕ ಪಶ್ಚಿಮಘಟ್ಟದ ಕೆಲವೇ ತಾಣಗಳಲ್ಲಿ ಕಾಣಸಿಗುವ ‘ಮಲಬಾರ್ ಗುಳಿ ಮಂಡಲ’ ಹಾವಿನ ಕುರಿತು ಪ್ರಶಾಂತ್ ಸಾಗರ್ ನಿರ್ಮಿಸಿದ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು.

 

Leave a Reply

Your email address will not be published. Required fields are marked *