Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಡಾ.ಮಹೇಶ್ ಐತಾಳರಿಂದ ಸಿಬ್ಬಂದಿಗಳಿಗೆ ನಿರಂತರ ಕಿರುಕುಳ ಆರೋಪ: ತನಿಖೆಗೆ ಆದೇಶ

ಉಡುಪಿ: ಗುತ್ತಿಗೆ ನೌಕರರು ಹಾಗೂ ಸಿಬ್ಬಂದಿಗಳಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆಂಬ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ಸಂಬಂಧ ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಮಹೇಶ್ ಐತಾಳ್ ಅವರ ವಿರುದ್ಧ ತನಿಖೆ ನಡೆಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ಜಿಲ್ಲಾ ಸರಕಾರಿ ಆಸ್ಪತ್ರೆಯ ಜಿಲ್ಲಾ ಸರ್ಜನ್ ಅವರಿಗೆ ಆದೇಶಿಸಿದ್ದಾರೆ.

ಮಹೇಶ್ ಐತಾಳ್ ಅವರ ವಿರುದ್ಧವಿರುವ ಆರೋಪಗಳ ಬಗ್ಗೆ ಕುಲಂಕೂಷವಾಗಿ ತನಿಖೆ ನಡೆಸಿ, ನಿಯಮಾನುಸಾರ ಸೂಕ್ತ ಕ್ರಮ ತೆಗೆದುಕೊಳ್ಳುವಂತೆಯೂ, ತೆಗೆದುಕೊಂಡ ಕ್ರಮದ ಬಗ್ಗೆ ವಿವರವಾದ ವರದಿಯನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರ ಕಚೇರಿಗೆ ಸಲ್ಲಿಸುವಂತೆಯೂ ಫೆಬ್ರವರಿ 4ರ ಆದೇಶದಲ್ಲಿ ಜಿ.ಪಂ. ಸಿಎಸ್ ಅವರು ಜಿಲ್ಲಾ ಸರ್ಜನ್ ಅವರಿಗೆ ಸೂಚಿಸಲಾಗಿದೆ.

ಮಹೇಶ್ ಐತಾಳ್ ಅವರು ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಹೇಶ್ ಐತಾಳ್ ಅವರು ಮುಖ್ಯ ವೈದ್ಯಾಧಿಕಾರಿಯಾಗಿ ಬಂದ ಬಳಿಕ ಸಿಬ್ಬಂದಿಗಳಿಗೆ ಹಾಗೂ ಗುತ್ತಿಗೆ ನೌಕರರಿಗೆ ನಿರಂತರ ಕಿರುಕುಳ ಕೊಡುತ್ತಿದ್ದಾರೆ. ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯದಲ್ಲಿದ್ದ ಗುತ್ತಿಗೆ ವೈದ್ಯರಾದ ಡಾ. ನಾಗರಾಜ್ ಆತ್ಮಹತ್ಯೆಗೆ ಯತ್ನಿಸಿದ್ದು ಒಂದು ಉದಾಹರಣೆಯಾದರೆ, ಗುತ್ತಿಗೆ ಸಿಬ್ಬಂದಿ ಶ್ರೀಮತಿ ವಾಣಿ ಎಂಬವರನ್ನು ಅಮಾನತುಗೊಳಿಸಿದ್ದು ಇನ್ನೊಂದು ಉದಾಹರಣೆಯಾಗಿದೆ. ಇಂಥ ಹಲವು ಉದಾಹರಣೆಗಳಿವೆ. ಆದುದರಿಂದ, ಮಹೇಶ್ ಐತಾಳ್ ವಿರುದ್ಧ ತನಿಖೆ ನಡೆಸಿ ಕ್ರಮ ಜರುಗಿಸಬೇಕು ಎಂದು ಮಾಹಿತಿ ಹಕ್ಕು ಕಾರ್ಯಕರ್ತರಾದ ಶ್ರೀರಾಮ ದಿವಾಣ 2018ರ ಡಿಸೆಂಬರ್ 6ರಂದು ಜಿಪಂ ಸಿಎಸ್ ಅವರಿಗೆ ದೂರು ಸಲ್ಲಿಸಿದ್ದರು.

 ಜಿಲ್ಲಾ ಸರ್ಜನ್ ಮಧುಸೂದನ್ ನಾಯಕ್ ಅವರು ಯಾರ ಯಾವ ಒತ್ತಡಕ್ಕೂ ಒಳಗಾಗದೆ ನಿಷ್ಪಕ್ಷಪಾತ ತನಿಖೆ ನಡೆಸಿದರೆ ವಾಸ್ತವಾಂಶಗಳು ದಾಖಲಾಗಬಹುದು. ಆದರೆ ಅವರು ಒತ್ತಡಕ್ಕೆ ಒಳಗಾದರೆ ಮತ್ತು ಜಿಲ್ಲಾಸ್ಪತ್ರೆಯಲ್ಲಿ ಪರ್ಯಾಯ ಜಿಲ್ಲಾ ಸರ್ಜನ್ ರಂತೆ ವರ್ತಿಸುವ ವ್ಯಕ್ತಿಯ ಆದೇಶಾನುಸಾರ ನಡೆದುಕೊಂಡರೆ ತನಿಖಾ ವರದಿ, ತನಿಖಾ ವರದಿಯಾಗದೆ ಕೇವಲ ಪರಿಶೀಲನಾ ವರದಿಯಾಗುವುದರ ಜೊತೆಗೆ ಕಿರುಕುಳ ಕೊಡುವ ವೈದ್ಯರಿಗೆ ಪ್ರೋತ್ಸಾಹದಾಯಕ ವರದಿಯಾಗಲಿದೆ ಎಂದು ದೂರುದಾರರಾದ ಶ್ರೀರಾಮ ದಿವಾಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *